ಆರೋಗ್ಯ

೨೦ ನೇ ಶತಮಾನದ ಸೂಪರ್ ಫುಡ್- ವೀಟ್ ಗ್ರಾಸ್ ಜ್ಯೂಸು

ವೀಟ್ ಗ್ರಾಸ್ ಎಂಬ ಸೂಪರ್ ಫುಡ್ ಬೆಳಕಿಗೆ ಬಂದದ್ದು ೯೦ ರ ದಶಕದ ನಂತರ.. ಇದು ಪೌಷ್ಟಿಕಾಂಶಗಳ ಆಗರ.

ವಿಟಮಿನ್ ಎ,ಸಿ,ಈ,ಕೆ, ಬಿ ಕಾಂಪ್ಲೆಕ್ಸ್ ,ಕ್ಯಾಲ್ಸಿಯಂ,ಸೆಲೆನಿಯಮ್, ಮೆಗ್ನೀಷಿಯಂ,ಐರನ್,ಪೊಟ್ಯಾಸಿಯಂ, ಜಿಂಕ್,ಕಾಪರ್, ಮ್ಯಾಂಗನೀಸ್,೧೯ ವಿಧವಾದ ಅಮೈನೊ ಆಸಿಡ್,ಕ್ಲೋರೋಫಿಲ್, ನಾರಿನಂಶಗಳನ್ನು ಹೇರಳವಾಗಿ ಹೊಂದಿದ್ದು ದೇಹದ ಕಾರ್ಯದಕ್ಷತೆಯನ್ನು ಹೆಚ್ಚು ಮಾಡುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಇದರ ಉಪಯೋಗಗಳು ಹಲವಾರು…

೧) ರಕ್ತಹೀನತೆ:

ಇದರಲ್ಲಿರುವ ಐರನ್, ವಿಟಮಿನ್ ಬಿ ೧೨ , ವಿಟಮಿನ್ ಬಿ೬, ಕ್ಲೋರೋಫಿಲ್ ಅಂಶಗಳು ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸಿ ಸುಸ್ತು, ಕೂದಲುದುರುವಿಕೆ,ಅಸ್ಥಿರತೆ ಮುಂತಾದ ರೋಗ ಲಕ್ಷಣಗಳನ್ನು  ತಡೆಗಟ್ಟುತ್ತದೆ.

Image result for blood iron

೨) ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ :

ವಿಟಮಿನ್ ಎ,ಸಿ, ಜಿಂಕ್,ಮ್ಯಾಂಗನೀಸ್ ಪೌಷ್ಟಿಕಾಂಶಗಳು ರೋಗಾ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸಾಮಾನ್ಯ ಖಾಯಿಲೆಗಳಾದ ನೆಗಡಿ, ಕೆಮ್ಮು, ಅಲರ್ಜಿ, ಕಫ ಇತ್ಯಾದಿಗಳನ್ನು ನಿಯಂತ್ರಿಸುತ್ತದೆ.

೩) ಪಚನ ಕ್ರಿಯೆಯನ್ನು ಉತ್ತೇಜಿಸುತ್ತದೆ:

ನಾರು ಹಾಗು ಬಿ ಕಾಂಪ್ಲೆಕ್ಸ್ ವಿಟಮಿನ್ ಗಳು ಜೀರ್ಣಾಂಗವ್ಯೂಹದ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಉದರ ಸಂಬಂಧಿ ಖಾಯಿಲೆಗಳಾದ ಅಜೀರ್ಣ, ಮಲಬದ್ಧತೆ, ಎದೆ ಉರಿತ , ಹೊಟ್ಟೆ ಉಬ್ಬರ, ಗುದದ್ವಾರದಲ್ಲಿನ ರಕ್ತಸ್ರಾವ ಮುಂತಾದ ಸಮಸ್ಯೆಗಳನ್ನು ಬಗೆಹರಿಸುತ್ತದೆ.

೪) ದೇಹದ ದುರ್ವಾಸನೆಯನ್ನು ಹೋಗಲಾಡಿಸುತ್ತದೆ:

ನಾರುರಹಿತ,ಹೆಚ್ಚು ಕೊಬ್ಬಿನಂಶವುಳ್ಳ ಇರುವ ಆಹಾರ ಪದಾರ್ಥಗಳು, ಮೆಗ್ನೀಷಿಯಂ ಕೊರತೆಯು ದೇಹದ ದುರ್ಗಂಧವನ್ನು ಹೆಚ್ಚಿಸುತ್ತವೆ.. ಗೋಧಿಹುಲ್ಲಿನಲ್ಲಿ ಮೇಲಿನವು ಸಮ ಪ್ರಮಾಣದಲ್ಲಿರುವುದರಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು.

೫)ಹಲ್ಲಿನ ಹುಳುಕು ತಡೆಗಟ್ಟುತ್ತದೆ:

ನೈಸರ್ಗಿಕ ಆಂಟಿ ಮೈಕ್ರೋಬಿಯಲ್ ಹಾಗು ಆಂಟಿ ಬಾಕ್ಟೇರಿಯಲ್ ಗುಣಗಳು ಬಾಯಿಯ ಆರೋಗ್ಯವನ್ನು ಹೆಚ್ಛ್ಸಿ ಹಲ್ಲಿನ ಹುಳುಕು ಹಾಗು ವಸಡುಗಳ ಉರಿಯನ್ನು ಕಡಿಮೆ ಮಾಡುತ್ತದೆ.

Image result for tooth decay

೬) ದೇಹದ ತೂಕವನ್ನು ಕಡಿಮೆ ಮಾಡುತ್ತವೆ:

ಗೋಧಿಹುಲ್ಲಿನಲ್ಲಿರುವ ಮೆಗ್ನೀಷಿಯಂ, ಐರನ್, ಕ್ಯಾಲ್ಸಿಯಂ,ನಾರಿನಂಶಗಳು ಹಸಿವನ್ನು ಕಡಿಮೆಗೊಳಿಸಿ ಅಧಿಕ  ಕ್ಯಾಲೋರಿ ಸೇವನೆಯನ್ನು ತಡೆಗಟ್ಟಿ ಬೊಜ್ಜನ್ನು ಕಡಿಮೆ ಮಾಡುತ್ತದೆ.

ಇದರಲ್ಲಿರುವ ಸೆಲೆನಿಯಮ್ ಅಂಶವು ಥೈರಾಯಿಡ್ ಗ್ರಂಥಿಗಳ ಕಾರ್ಯದಕ್ಷತೆಯನ್ನು ಹೆಚ್ಚಿಸಿ ಸ್ಟೂಲಕಾಯವನ್ನು ನಿಯಂತ್ರಿಸುತ್ತದೆ.

೭) ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ:

ಇದರಲ್ಲಿರುವ ವಿಟಮಿನ್ ಆ, ಆಂಟಿ-ಆಕ್ಸಿಡಂಟ್ಸ್ ಗಳು ಫ್ರೀ ರಾಡಿಕಲ್ಸ್ ಗಳನ್ನು ನಿಷ್ಕ್ರಿಯಗೊಳಿಸಿ ಜೀವಕೋಶ ಹಾಗು ಡಿಎನ್ಎ ಗಳನ್ನು ರಕ್ಷಿಸಿ ಕ್ಯಾನ್ಸರ್ ಜೀವಕೋಶಗಳ ಉತ್ಪಾದನೆಯನ್ನು ಕುಂಠಿತ ಗೊಳಿಸುತ್ತದೆ.

Image result for cancer

೮) ಚರ್ಮರೋಗಕ್ಕೆ ಇದು ರಾಮಬಾಣ;

ಇದರಲ್ಲಿರುವ ಕ್ಲೋರೊಫಿಲ್ ಅಂಶವುವೇಗವಾಗಿ  ಗಾಯಗಳನ್ನು ಉಪಶಮನ ಮಾಡುತ್ತದೆ.

ವೀಟ್ ಗ್ರಾಸ್ ಜ್ಯೂಸು ಅನ್ನು ಹಟ್ಟಿಯಲ್ಲಿ ಅಡ್ಡಿ ಗಾಯದ ಮೇಲೆ ಹಚ್ಚುತ್ತಿದ್ದರೆ ಕಲೆ ಮಾಯವಾಗುತ್ತದೆ.

ಎಜೆಮಾ, ಸೋರಿಯಾಸಿಸ್ ಖಾಯಿಲೆಗಳನ್ನು ತಡೆಗಟ್ಟುತ್ತದೆ.

೯) ಯಕೃತ್ತನ್ನು ಸಂರಕ್ಷಿಸುತ್ತದೆ:

ಇದರಲ್ಲಿರುವ SOD ಕಿಣ್ವಗಳು , ನಾರಿನಂಶಗಳು ದೇಹದಲ್ಲಿರುವ  ಕಲ್ಮಶಗಳನ್ನು ನಿಷ್ಕ್ರಿಯಗೊಳಿಸಿ ಆಹಾರದ್ಲಲಿರುವ ವಿಷಕಾರಿ ಪದಾರ್ಥಗಳು ಹಾಗು ಕಿರಣಗಳು ದೇಹಕ್ಕೆ ಹಾನಿಯುಂಟುಮಾಡದಂತೆ ತಡೆಗಟ್ಟುತ್ತದೆ.

೧೦) ಕೀಲು ನೋವನ್ನು  ಶಮನಮಾಡುತ್ತದೆ:

ಗೋಧಿ ಹುಲ್ಲಿನಲ್ಲಿರುವ ಪೌಷ್ಟಿಕಾಂಶಗಳು ಕೀಲುಗಳ ಉರಿಯನ್ನು ಕಡಿಮೆ ಮಾಡಿ ಸ್ನಾಯುಗಳ ಚಾನೆಗಳನ್ನು ಅಧಿಕಗೊಳಿಸಿ ನೋವನ್ನು ಶಮನಮಾಡುತ್ತದೆ.

Comments

comments

Amazon Big Indian Festival
Click to comment

Leave a Reply

Your email address will not be published. Required fields are marked *

Amazon Big Indian Festival
To Top