News

ಗುಬ್ಬಿಯ ಜಂಗಮ ಮಠದ ಸ್ವಾಮೀಜಿ ಗೌರಿಶಂಕರ ಶ್ರೀಗಳು(71) ವಿಧಿವಶ

13 ವರ್ಷಗಳ ಹಿಂದೆ ಸಲಿಂಗಕಾಮದ ಆರೋಪದಡಿ ಜೈಲು ಸೇರಿದ್ದ ಗೌರಿಶಂಕರ ಶ್ರೀಗಳು ವಿಧಿವಶ. ಅಂದಿನ ದಿನಗಳಲ್ಲಿ ಸಿದ್ದಗಂಗಾ ಮಠದ ಅಧ್ಯಕ್ಷ ಸ್ಥಾನದಿಂದ ಗೌರಿಶಂಕರ ಶ್ರೀಗಳನ್ನ ವಜಾಗೊಳಿಸಲಾಗಿತ್ತು. ಈ ಪ್ರಕರಣದಲ್ಲಿ ಶ್ರೀಗಳು ನಿರ್ದೋಷಿ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಕಳೆದ ಹಲವಾರು ದಿನಗಳಿಂದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀಗಳು ಚಿಕಿತ್ಸೆ ಫಲಿಸದೇ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಸ್ವಾಮೀಜಿ ಯವರು ಕಳೆದ 3 ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 25 ವರ್ಷಗಳ ಹಿಂದೆ ಗಂಭೀರ ಆರೋಪವೊಂದರ ಮೇಲೆ ಶ್ರೀಗಳು ಸಿದ್ದಗಂಗಾ ಮಠವನ್ನು ತೊರೆದು, ತುಮಕೂರು ಬಳಿಯ ಗೊಲ್ಲಹಳ್ಳಿಯಲ್ಲಿ ವಾಸವಿದ್ರು. ಸಿದ್ದಗಂಗಾ ಮಠ ಎಂದೇ ಹೆಸರಿಟ್ಟುಕೊಂಡು ಶ್ರೀಗಳು ಪ್ರತ್ಯೇಕ ಮಠ ನಡೆಸುತ್ತಿದ್ದರು.

ಸಿದ್ಧಗಂಗಾ ಮಠದಲ್ಲೇ ಗೌರಿ ಶಂಕರ ಸ್ವಾಮೀಜಿಗಳ ಅಂತ್ಯಕ್ರಿಯೆ ಆಗಬೇಕು ಅಂತ ಭಕ್ತರು ಒತ್ತಾಯಿಸಿದ್ದಾರೆ. ಭಕ್ತರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸಿದ್ಧಗಂಗಾ ಮಠಕ್ಕೆ ಪೊಲೀಸ್ ಭದ್ರತೆ ನೀಡಲಾಗಿದೆ. ಗೌರಿಶಂಕರ ಶ್ರೀಗಳ ಭಕ್ತರಿಂದ ಗಲಾಟೆ ಸಂಭವ ಹಿನ್ನಲೆಯಲ್ಲಿ ಮಠದ ಗೇಟ್ನಿಂದ ಹಿಡಿದು ಮಠದ ಸುತ್ತಲೂ ಖಾಕಿ ಭದ್ರತೆ ನಿಯೋಜಿಸಲಾಗಿದೆ.

ಸಿದ್ಧಗಂಗಾ ಮಠದಲ್ಲೇ ಸಂಜೆ ತನ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅನುಕೂಲ ಮಾಡಿ ಕೊಡಲಾಗಿದೆ. ಸಂಜೆ 5 :30 ನಂತರ ಸ್ವಾಮೀಜಿಗಳ ಅಂತ್ಯಕ್ರಿಯೆ ಗುಬ್ಬಿಯಲ್ಲಿ ನೆಡೆಯಲಿದೆ.

Comments

comments

Amazon Big Indian Festival
Click to comment

Leave a Reply

Your email address will not be published. Required fields are marked *

Amazon Big Indian Festival
To Top