ಸಾಮಾನ್ಯ ಕನ್ನಡಿಗ ಅಧ್ಯಕ್ಷರಾದ ಸಂದೀಪ್ ಮತ್ತು ಸಂಗಡಿಗರು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸಿದ್ದರಾಮಯ್ಯ ರವರನ್ನು ಮೊನ್ನೆ ಭೇಟಿ ಮಾಡಿದ್ದಾರೆ.
ಹಲವು ಮಹತ್ವದ ವಿಷಯಗಳ ಬಗ್ಗೆ ಮಾತುಕತೆಗಳು ನಡೆದಿದೆ. ನಾವು ಮಾಡಿರುವ ಕಾನೂನು ಹೋರಾಟ, ಪ್ರೀತೇಶ್ ಪ್ರಕರಣ, ಮತ್ತು ಇತರೆ ವಿಷಯಗಳು ಚರ್ಚೆಯಾಗಿವೆ. ಅಧ್ಯಕ್ಷರು ನಮ್ಮ ತಂಡಕ್ಕೆ ಎಲ್ಲ ರೀತಿಯಲ್ಲಿ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಪ್ರೀತೇಶ್ ಪ್ರಕರಣವು ಫೆಬ್ರವರಿ ೮ ರಂದು ವಿಚಾರಣೆಗೆ ಬರಲಿದೆ. ಇದರ ಸಲುವಾಗಿ ನಮ್ಮ ವಕೀಲರು ಇಷ್ಟರಲ್ಲೇ ಅರ್ಜಿ ಸಲ್ಲಿಸುತ್ತಾರೆ. ನಮ್ಮ ವಕೀಲರು ಮತ್ತು ಸರ್ಕಾರದ ಅಭಿಯೋಜಕರ ನಡುವೆ ಇಷ್ಟರಲ್ಲೇ ನಡೆಯಲಿದೆ. ಜಾಮೀನು ಅರ್ಜಿ ವಜಾ ಮಾಡಲು ಮತ್ತು ಅವನಿಗೆ ಶಿಕ್ಷೆಯಾಗಲು ನಾವು ಎಲ್ಲ ರೀತಿಯ ಪ್ರಯತ್ನ; ಕಾರ್ಯತಂತ್ರ; ಕಾನೂನು ಸಲಹೆ ಮಾಡಿದ್ದೇವೆ/ಪಡೆದಿದ್ದೇವೆ.
ನಮ್ಮ ಸಂಘಟನೆಗೆ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರೋತ್ಸಾಹ ಮತ್ತು ಸಹಾಯ ಬಂದಿರುವುದು ನಮಗೆ ಹುಮಸ್ಸು ತಂದಿದೆ. ಅದೇ ರೀತಿ ಕಾನೂನು ನೆರವು ಕೂಡ ದೊರೆತಿದೆ. ವಿಚಾರಣೆಗೆ ಬರುವ ಮುಂಚೆ ನಮ್ಮ ಕಾರ್ಯತಂತ್ರವನ್ನು ರೂಪಿಸಲು ನಮ್ಮ ಕಾನೂನು ಸಲಹೆಗಾರರನ್ನು ಭೇಟಿ ಮಾಡಲಿದ್ದೇವೆ. ಸಹಕರಿಸಿದ ಎಲ್ಲರಿಗು ಧನ್ಯವಾದಗಳು, ಮತ್ತು ಸುಗ್ಗಿಯ ಶುಭಾಶಯಗಳು.
ವಿಚಾರಣೆಯ ವೇಳೆ ನ್ಯಾಯಾಯಲಯಕ್ಕೆ ಬರಲಿಚ್ಛಿಸುವವರು ಸಂದೀಪರನ್ನು ಸಂಪರ್ಕಿಸಬಹುದು.
ವಿಚಾರಣೆಯ ತಾರೀಖು: ೮ ನೇ ಫೆಬ್ರವರಿ
