Kannada Bit News

ವೀಸಾ ಅವಧಿ ಮುಗಿದ ರಾಜ್ಯದಲ್ಲಿರುವ ವಿದೇಶಿ ಪ್ರಜೆಗಳ ಗಡಿಪಾರು

ರಾಜ್ಯದ ವಿವಿಧೆಡೆ ವೀಸಾ ಅವಧಿ ಮುಗಿದರೂ ಕಾನೂನುಬಾಹಿರವಾಗಿ ಇಲ್ಲಿಯೇ ವಾಸ್ತವ್ಯ ಹೂಡಿರುವ ವಿದೇಶಿ ಪ್ರಜೆಗಳು ಗಡಿಪಾರು 

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ವೀಸಾ ಅವಧಿ ಮುಗಿದರೂ ಕಾನೂನುಬಾಹಿರವಾಗಿ ಇಲ್ಲಿಯೇ ವಾಸ್ತವ್ಯ ಹೂಡಿರುವ ವಿದೇಶಿ ಪ್ರಜೆಗಳನ್ನು ಒಂದು ತಿಂಗಳೊಳಗೆ ಗಡಿಪಾರು ಮಾಡುವಂತೆ ರಾಜ್ಯ ಸರ್ಕಾರ ಗೃಹ ಇಲಾಖೆಗೆ ಸೂಚಿಸಿದೆ.

ಈಗಾಗಲೇ ವಿದೇಶಾಂಗ ವ್ಯವಹಾರಗಳ ಇಲಾಖೆಗೆ ಪತ್ರ ಬರೆದಿರುವ ಗೃಹ ಕಾರ್ಯದರ್ಶಿಗಳು ಗಡಿಪಾರಿಗೆ ಮನವಿ ಮಾಡಿದ್ದಾರೆ. ಕೇಂದ್ರದಿಂದ ಅನುಮತಿ ಬರುತ್ತಿದ್ದಂತೆ ಇವರನ್ನು ದೇಶದಿಂದ ಹೊರ ಹಾಕುವ ಪ್ರಕ್ರಿಯೆಗಳು ಪ್ರಾರಂಭವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಒಂದು ಬಾರಿ ವೀಸಾ ಮುಗಿದರೆ ಇಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ಹೀಗೆ ಕರ್ನಾಟಕದಲ್ಲೇ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಆಫ್ರಿಕಾ ಪ್ರಜೆಗಳು ನಕಲಿ ವೀಸಾ ಪಡೆದು ತಂಗಿರುವುದು ಪತ್ತೆಯಾಗಿದೆ.   ಬೆಂಗಲೂರಿನಲ್ಲಿ ಆರು ಸಾವಿರ ಮಂದಿ ಇದ್ದರೆ, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ 2ನೇ ಹಂತದ ನಗರಗಳಲ್ಲೂ ಇವರು ಇರುವುದನ್ನು ಪೊಲೀಸ್ ಇಲಾಖೆ ಪತ್ತೆಹಚ್ಚಿದೆ.

ವೀಸಾ ಅವಧಿ ಮುಗಿದ ರಾಜ್ಯದಲ್ಲಿರುವ ವಿದೇಶಿ ಪ್ರಜೆಗಳ ಗಡಿಪಾರು

ಈಗಾಗಲೇ ವಿದೇಶಾಂಗ ವ್ಯವಹಾರಗಳ ಇಲಾಖೆಗೆ ಪತ್ರ ಬರೆದಿರುವ ಗೃಹ ಕಾರ್ಯದರ್ಶಿಗಳು ಗಡಿಪಾರಿಗೆ ಮನವಿ ಮಾಡಿದ್ದಾರೆ. ಕೇಂದ್ರದಿಂದ ಅನುಮತಿ ಬರುತ್ತಿದ್ದಂತೆ ಇವರನ್ನು ದೇಶದಿಂದ ಹೊರ ಹಾಕುವ ಪ್ರಕ್ರಿಯೆಗಳು ಪ್ರಾರಂಭವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.   ಬೆಂಗಳೂರಿನ ಕೊತ್ತನೂರು, ಹೆಣ್ಣೂರು ಕ್ರಾಸ್, ನಾಗವಾರ, ಲಿಂಗರಾಜುಪರು, ಬಾಗಲೂರು, ಬಾಗಲೂರುಕುಂಟೆ ಸೇರಿದಂತೆ ಮತ್ತಿತರ ಕಡೆ ಉಗಾಂಡ, ಕೀನ್ಯಾ, ನೈಜೀರಿಯಾ, ಸೂಡಾನ್ ಸೇರಿದಂತೆ ಮತ್ತಿತರ ಆಫ್ರಿಕಾದ ಪ್ರಜೆಗಳು ವಿದ್ಯಾಭ್ಯಾಸ ಮತ್ತು ಕೆಲಸಕ್ಕಾಗಿ ಬೆಂಗಳೂರಿಗೆ ಬರುತಿರುತ್ತಾರೆ.

ಉದ್ಯೋಗ ಮತ್ತು ವಿದ್ಯಾಭ್ಯಾಸಕ್ಕೆ ಬರುವ ಆಫ್ರಿಕಾನ್ ಪ್ರಜೆಗಳು ಬಹುತೇಕ ಕಡೆ ಕಾನೂನು ಬಾಹಿರ ಚಟುವಟಿಕೆಗಳಲ್ಲೇ ತೊಡಗಿಕೊಳ್ಳುತ್ತಾರೆ. ಡ್ರಗ್ಸ್ ಸೇವನೆ, ಕಳ್ಳತನ, ಪಿಕ್‍ಪಾಕೆಟ್, ಮಹಿಳೆಯರ ಸರ ಅಪಹರಣ, ದ್ವಿಚಕ್ರ ವಾಹನ ಕದಿಯುವುದು, ಕೊಕೇನ್ ಮಾರಾಟ ಸೇರಿದಂತೆ ಬಹುತೇಕ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವುದೇ ಪ್ರವೃತ್ತಿಯಾಗಿದೆ.  ಅಲ್ಲದೆ ಆಗಾಗ್ಗೆ ಅತಿಯಾದ ಮದ್ಯಪಾನ ಸೇವಿಸಿ ಸಾರ್ವಜನಿಕರಿಗೆ ತೊಂದರೆ ಕೊಟ್ಟು ಪುಂಡಾಟಿಕೆ ಮಾಡುವುದು, ಹೋಟೆಲ್‍ಗಳಲ್ಲಿ ತಿಂದ ಮೇಲೆ ಬಿಲ್ ಕೊಡದಿರುವುದು, ವೇಶ್ಯಾವಾಟಿಕೆ ಮುಂತಾದ ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

 

Amazon Big Indian Festival
Amazon Big Indian Festival

Copyright © 2016 TheNewsism

To Top