Sports

ಐ.ಪಿ.ಎಲ್. ಹರಾಜಿನಲ್ಲಿ ಇಂದು ಏನಾಯ್ತು??ಇಲ್ಲಿ ಓದಿ…

19- ಸ್ಟೋಕ್ಸ್‌ಗೆ ೧೪.೫೦ ಕೋಟಿ, ಇಶಾಂತ್‌ಗೆ ಶಾಕ್
ಸ್ಟಾರ್‌ಗಳನ್ನು ತಂಡಕ್ಕೆ ಸೇರಿಸಿಕೊಳ್ಳಲು ಹಗ್ಗಜಗ್ಗಾಟ… ಮೂಲ ಬೆಲೆಗಿಂತ ಹೆಚ್ಚಿನ ಹಣ ಪಡೆದ ಆಟಗಾರರು… ಕೋಟಿ ಕೋಟಿ ಪಡೆದ ಸ್ಟೋಕ್ಸ್, ಟೈಮಲ್ ಮಿಲ್ಸ್… ನಿರಾಸೆ ಅನುಭವಿಸಿದ ತಾಹೀರ್, ಇಶಾಂತ್

Image result for ipl auctions

ಇದು ಬೆಂಗಳೂರಿನಲ್ಲಿ ಹತ್ತನೇ ಆವೃತ್ತಿ ಐಪಿಎಲ್ ಹರಾಜಿನಲ್ಲಿ ಕಂಡು ಬಂದ ದೃಶ್ಯ. ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ತಂಡಕ್ಕೆ ಸೆಳೆದುಕೊಳ್ಳಲು ಎಲ್ಲ ಮಾಲೀಕರು ಮುಗಿಬಿದ್ದರು. ಪರಿಣಾಮ ೨ ಕೋಟಿ ಮೂಲಬೆಲೆಯನ್ನು ಹೊಂದಿದ್ದ ಸ್ಟೋಕ್ಸ್‌ಗೆ ೧೪.೫೦ ಕೋಟಿ ರೂ. ಲಭಿಸುವಂತಾಯಿತು. ಭಾರತ ವಿರುದ್ಧದ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದ ಸ್ಟೋಕ್ಸ್ ಮಾಲೀಕರ ಹಾಟ್ ಫೇವರಿಟ್ ಆಯ್ಕೆಯಾಗಿದ್ದರು. ಇವರ ಹೆಸರು ಬರುತ್ತಿದ್ದಂತೆ ಮಾಲೀಕರು ಇವರನ್ನು ಪಡೆಯಲು ಬಿಡ್ ಮಾಡಲು ಆರಂಭಿಸಿದರು.

ಅದರಂತೆ ಇಂಗ್ಲೆಂಡ್‌ನ ಇನ್ನೋರ್ವ ಆಟಗಾರ ಟೈಮಲ್ ಮಿಲ್ಸ್ ಮೂಲ ಬೆಲೆಗಿಂತ ೨೩ ಪಟ್ಟು ಹೆಚ್ಚಿನ ಮೊತ್ತಕ್ಕೆ ಹರಾಜಾದರು. ಇವರು ೧೨ ಕೋಟಿ ರೂ.ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ್ದಾರೆ.

Image result for tymal mills

ರಣಜಿ ಟೂರ್ನಿ ಹಾಗೂ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಸ್ಥಿರ ಪ್ರದರ್ಶವನ್ನು ನೀಡಿದ್ದ ಕರ್ನಾಟಕ ಕೆ.ಗೌತಮ್ ಸಹ ಉತ್ತಮ ಮೊತ್ತವನ್ನು ಜೇಬಿಗೆ ಇಳಿಸಿಕೊಂಡಿದ್ದಾರೆ. ಇವರು ೨ ಕೋಟಿಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ.

ಉಳಿದಂತೆ ನಿರೀಕ್ಷೆಯನ್ನು ಹೆಚ್ಚಿಸಿದ್ದ ಇಶಾಂತ್ ಶರ್ಮಾ, ಇರ್ಫಾನ್ ಪಠಾಣ್, ಇಮ್ರಾನ್ ತಾಹೀರ್ ಮಾಲೀಕರ ಚಿತ್ತವನ್ನು ತಮ್ಮತ್ತ ಸೆಳೆಯುವಲ್ಲಿ ವಿಫಲರಾಗಿದ್ದಾರೆ.

ಈ ಬಾರಿ ಇಬ್ಬರು ಅಫ್ಘಾನ್ ಆಟಗಾರರು ಐಪಿಎಲ್ ಆಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಮೊಹಮ್ಮದ್ ನಬಿ ೩೦ ಲಕ್ಷಕ್ಕೆ ಹೈದರಾಬಾದ್ ಹಾಗೂ ಸ್ಪಿನ್ ಬೌಲರ್ ರಶೀದ್ ಖಾನ್ ೪ ಕೋಟಿಗೆ ಹೈದರಾಬಾದ್ ಸೇರಿಕೊಂಡಿದ್ದಾರೆ.

ಆರ್‌ಸಿಬಿ ಸೇರಿದ ಆಟಗಾರರು

ಪವನ್ ನೇಗಿ, ೧ ಕೋಟಿ
ಟೈಮಲ್ ಮಿಲ್ಸ್, ೧೨ ಕೋಟಿ
ಅಂಕಿತ್ ಚೌಧರಿ, ೨ ಕೋಟಿ
ಪ್ರವೀಣ್ ದುಬೆ, ೧೦ ಲಕ್ಷ
ಬಿಲ್ಲಿ ಸ್ಟಾನ್‌ಲೇಕ್, ೩೦ ಲಕ್ಷ

Amazon Big Indian Festival
Amazon Big Indian Festival

Copyright © 2016 TheNewsism

To Top