Sports

ಪುಣೆ ತಂಡದಿಂದ ಧೋನಿಗೆ ನಾಯಕತ್ವದಿಂದ ಕೊಕ್, ವಿದೇಶಿ ಆಟಗಾರನಿಗೆ ಮಣೆ!!

ಪುಣೆ ತಂಡದ ನಾಯಕತ್ವ ತ್ಯಜಿಸಿದ ಮಾಹಿ

ಮಹೇಂದ್ರ ಸಿಂಗ್ ಧೋನಿ ಯಾರಿಂದಲೂ ಏನನ್ನು ಹೇಳಿಸಿಕೊಂಡವರಲ್ಲ. ಅದು ಆಟದ ವಿಚಾರವಾಗಲಿ, ನಾಯಕತ್ವದವಿಚಾರವಾಗಲಿ, ಅಥವಾ ಹುದ್ದೆಯ ವಿಚಾರವೇ ಆಗಿರಲಿ. ತಮಗೆ ಬೇಡ ಎಂದರೆ ಧೋನಿ ಅತ್ತ ತಲೆ ಸಹ ಹಾಕುವುದಿಲ್ಲ.ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಸೀಮಿತ ಓವರಗಳ ನಾಯಕತ್ವಕ್ಕೆ ಗುಡ್‌ಬೈ ಹೇಳಿ ಅಚ್ಚರಿ ಮೂಡಿಸಿದ್ದ ಮಾಹಿಭಾನುವಾರ ಮತ್ತೊಂದು ಅಚ್ಚರಿ ಸುದ್ದಿ ನೀಡಿದ್ದಾರೆ.

Image result for DHONI RPS

ಐಪಿಎಲ್ ಹಾಗೂ ಭಾರತದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ರೈಸಿಂಗ್ ಪೂಣೆ ಸೂಪರ್ ಜೆಂಟ್ಸ್ ತಂಡದನಾಯಕತ್ವದಿಂದ ಕೆಳಗಿಳಿದಿದ್ದಾರೆ. ಹತ್ತೇನ ಆವೃತ್ತಿ ಐಪಿಎಲ್‌ನಲ್ಲಿ ಪುಣೆ ತಂಡವನ್ನು ಆಸ್ಟ್ರೇಲಿಯಾ ತಂಡದ ಸ್ಟೀವನ್ ಸ್ಮಿತ್ಮುನ್ನಡೆಸಲಿದ್ದಾರೆ.

Image result for DHONI RPS

ಸ್ಫಾಟ್ ಫಿಕ್ಸಿಂಗ್ ಹಾಗೂ ಕಳ್ಳಾಟದ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡ ಚೆನ್ನೈ ಸೂಪರ್ ಕಿಂಗ್ ಹಾಗೂ ರಾಜಸ್ಥಾನ ರಾಯಲ್ಸ್ತಂಡಗಳುನ್ನು ಎರಡು ವರ್ಷಗಳ ಕಾಲ ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಇದರ ಫಲವಾಗಿ ಪುಣೆ ಹಾಗೂ ಗುಜರಾತ್ಎರಡು ಹೊಸ ತಂಡಗಳು ೯ನೇ ಆವೃತ್ತಿ ಐಪಿಎಲ್‌ಗೆ ಪ್ರವೇಶ ಪಡೆದವು.

ಕಳೆದ ವರ್ಷ ಪುಣೆ ತಂಡವನ್ನು ಮುನ್ನಡೆಸಿದ್ದ ಮಾಹಿ ಪಡೆ, ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ೯ನೇ ಆವೃತ್ತಿಯಲ್ಲಿಪುಣೆ ಆಡಿದ ೧೪ ಪಂದ್ಯಗಳಲ್ಲಿ ೫ ರಲ್ಲಿ ಜಯ ಸಾಧಿಸಿತ್ತು. ಉಳಿದ ಪಂದ್ಯಗಳನ್ನು ಕೈ ಚೆಲ್ಲಿತ್ತು. ಧೋನಿ ಕಳೆದ ಐಪಿಎಲ್‌ನಲ್ಲಿಆಡಿದ ೧೨ ಇನಿಂಗ್ಸ್‌ಗಳಲ್ಲಿ ಕೇವಲ ೨೮೪ ರನ್ ಸೇರಿಸಿದ್ದಾರೆ.

ಧೋನಿ ೨೦೧೦, ೨೦೧೧ರಲ್ಲಿ ಚೆನ್ನೈ ತಂಡ ಐಪಿಎಲ್ ಚಾಂಪಿಯನ್ ಆಗಿದ್ದಾಗ ತಂಡದ ನಾಯಕರಾಗಿದ್ದರು.

Amazon Big Indian Festival
Amazon Big Indian Festival

Copyright © 2016 TheNewsism

To Top