Achivers

ಉತ್ತರ ಕರ್ನಾಟಕ ಜನತೆ ಪರ ನಿಂತ ಮಂಡ್ಯ ಹುಡುಗ, ಇದು ಯಶೋಮಾರ್ಗ!!!

ಇತ್ತೀಚೆಗೆ ತಮಿಳುನಾಡಿನಲ್ಲಿ ಸುರಿದ ಮಳೆಗೆ ಜನಜೀವನ ತತ್ತರಿಸಿ ಹೋಗಿದ್ದು, ಅದಕ್ಕಾಗಿ ಚಿತ್ರ ನಟರು ನೆರವಿನ ಹಸ್ತ ನೀಡಿರುವುದನ್ನು ಓದಿದ್ದೀರಿ.. ಅದೇ ರೀತಿ ಸ್ಯಾಂಡಲ್ ವುಡ್ ನಲ್ಲಿಯೂ ನೆರವಿನ ಹಸ್ತ ನೀಡುತ್ತಿರುವ ಸುದ್ದಿಯ ಬಗ್ಗೆಯೂ ಕೇಳಿದ್ದೀರಿ. ಇದೀಗ ಬರಗಾಲದಿಂದ ತತ್ತರಿಸಿ ಹೋಗಿರುವ ಉತ್ತರಕರ್ನಾಟಕ ಜನರ ನೆರವಿಗೆ ರಾಕಿಂಗ್ ಸ್ಟಾರ್ ಯಶ್ ಮುಂದಾಗಿದ್ದಾರೆ.

ಈತನನ್ನು ಹುಡುಕಿ ಕೊಡಿ ಸಿನಿಮಾ ಪಾತ್ರದಲ್ಲಿ ಹೀರೊ ತೋರುವ ಸಾಮಾಜಿಕ ಕಳಕಳಿ ನಿಜ ಜೀವನದಲ್ಲಿ ತೋರಿಸೋದು ಕಡಿಮೆ. ಹೀಗಿರುವಾಗ ರಾಕಿಂಗ್ ಸ್ಟಾರ್ ಯಶ್‌ ಬರದ ನಾಡು ಕೊಪ್ಪಳ ಜಿಲ್ಲೆಯಲ್ಲಿ ತಮ್ಮ ಯಶೋಮಾರ್ಗ ಫೌಂಡೇಶನ್ ಮೂಲಕ ಕೆರೆಯ ಕಾಯಕಲ್ಪಕ್ಕೆ ಮುಂದಾಗಿದ್ದಾರೆ.

ಹೌದು ಬರದ ನಾಡಿನ ಜನರ ಕುಡಿಯುವ ನೀರಿನ ಬವಣೆಯನ್ನು ತಣಿಸಲು ‘ಯಶೋಮಾರ್ಗ’ ಮುಂದಾಗಿದ್ದು, ಉತ್ತರ ಕರ್ನಾಟಕದ 50 ಹಳ್ಳಿಗಳಿಗೆ ದಿನ ಬಿಟ್ಟು ದಿನ ಕುಡಿಯುವ ನೀರು ಪೂರೈಸಲು ಯೋಜಿಸಿದೆ. ಗುಲಬರ್ಗಾ ಜಿಲ್ಲೆಯ 25 ಹಳ್ಳಿಗಳಿಗೆ ನೀರು ಪೂರೈಕೆಗೆ ಚಾಲನೆ ನೀಡಿದ್ದು, ಸದ್ಯದಲ್ಲಿಯೇ ಬಿಜಾಪುರ ಜಿಲ್ಲೆಯ 25 ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡಲಾಗುವುದು.

 

ರಾಕಿಂಗ್ ಸ್ಟಾರ್ ಯಶ್ ಸತತ ಬರಗಾಲದಿಂದ ತತ್ತರಿಸುತ್ತಿರುವ ಜಿಲ್ಲೆಯಲ್ಲಿ ಕೆರೆಯೊಂದರ ಕಾಯಕಲ್ಪಕ್ಕೆ ಮುಂದಾಗುವ ಮೂಲಕ ಜೀವಜಲದ ಉಳಿವಿನ ಬಗ್ಗೆ ಅರಿವಿನ ಜಾಗೃತಿಗೆ ಮುಂದಾಗಿದ್ದಾರೆ. ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆಯ ಕಾಯಕಲ್ಪಕ್ಕೆ ಯಶ್ ಅವರು ಮುಂದಾಗಿದ್ದಾರೆ. ಕೆರೆಯು ಸುಮಾರು 96 ಎಕರೆ ಪ್ರದೇಶದಲ್ಲಿದೆ. ಕಳೆದ ಹದಿನೈದು ವರ್ಷಗಳಲ್ಲಿ ಹನ್ನೊಂದು ವರ್ಷ ಭೀಕರ ಬರಗಾಲ ಇರುವುದರಿಂದ ತಲ್ಲೂರು ಕೆರೆಗೆ ನಿಗಿದಿತ ಪ್ರಮಾಣದಲ್ಲಿ ನೀರು ಹರಿದು ಬಂದಿಲ್ಲ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಚಿತ್ರನಟ ಯಶ್ ಟ್ಯಾಂಕರ್ ಮೂಲಕ ನೀರು ಕೊಡುವುದಕ್ಕಿಂತ ಕೆರೆಯನ್ನೇ ನಿರ್ಮಿಸಲು ಮುಂದಾಗಿದ್ದಾರೆ. ಸುಮಾರು 3 ಕೋಟಿ ರೂಪಾಯಿ ಉದಾರವಾದ ಅನುದಾನವನ್ನು ನೀಡಿ ಕೆರೆ ಅಭಿವೃದ್ಧಿಪಡಿಸಲಿದ್ದಾರೆ. ಜಿಲ್ಲೆಯಲ್ಲಿ ಹನಿ ನೀರಿಗಾಗಿ ಪರಿದಾಡುತ್ತಿರುವ ಜನರು ಜಲ ಸಂರಕ್ಷಣೆಗೆ ಯಶೋಮಾರ್ಗ ಸಹಕಾರದ ಈ ಕಾರ್ಯಕ್ರಮಕ್ಕೆ ಜನತೆ ಕೂಡಾ ಸಹಕಾರ ನೀಡಲು ಮುಂದಾಗಿದ್ದಾರೆ. ಈ ಮೂಲಕ ಯಶ್ ಇತರರಿಗೆ ಮಾದರಿಯಾಗುತ್ತಿದ್ದಾರೆ.

Amazon Big Indian Festival
Amazon Big Indian Festival

Copyright © 2016 TheNewsism

To Top