Achivers

ಕೊಹ್ಲಿಯ ಏಕಾಗ್ರತೆಯ ಮತ್ತು ಯಶಸ್ಸಿನ ಗುಟ್ಟೇನು..? ಇಲ್ಲಿದೆ ಉತ್ತರ

ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ. ದಾಖಲೆಗಳಿಗೆ ತಮ್ಮ ಹೆಸರನ್ನು ನಮುದಿಸುತ್ತಲೇ ಸಾಗುತ್ತಿದ್ದಾರೆ. ಕಳೆದವರ್ಷವಂತೂ, ಕೊಹ್ಲಿ ಬ್ಯಾಟ್ ಮಿಂಚು ಮೂಡಿಸಿದೆ. ವಿದೇಶವಾಗಲಿ, ಸ್ವದೇಶವೇವಾಗಲಿ ಶತಕ ಹಾಗೂ ದ್ವಿಶತಕಬಾರಿಸುವದರಲ್ಲಿ ಕೊಹ್ಲಿ ನಿಸ್ಸಿಮರು. ಸತತ ನಾಲ್ಕು ಸರಣಿಗಳಲ್ಲಿ ದ್ವಿಶತಕ ಸಾಧನೆಯನ್ನು ಮಾಡುವ ಮೂಲಕ ಡಾನ್ಬ್ರಾಡ್ಮನ್ ಹಾಗೂ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಅಳಿಸಿದ ಶೂರ ಕೊಹ್ಲಿ. ಹಾಗಿದ್ದರೆ ಅವರಏಕಾಗ್ರತೆ ಹಿಂದಿನ ಕಥೆ ಏನು ಎಂಬುದರ ಬಗ್ಗೆ ಸ್ವತಃ ಕೊಹ್ಲಿ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಮೈದಾನದಲ್ಲಿ ಏಕಾಗ್ರತೆಯಿಂದ ಆಡಿ ಎದುರಾಳಿ ನಿದ್ದೆ ಗೆಡಿಸುವ ಕೊಹ್ಲಿ ತಾಕತ್ತಿನ ಹಿಂದೆ ಯೋಗಿಯ ಕೈವಾಡ ಇದೆ ಎಂದರೆನಂಬಲು ಅಸಾಧ್ಯ. ಆದರೂ ನಿಜ. ಈ ಬಗ್ಗೆ ಕೊಹ್ಲಿ ಅವರೇ ಬರೆದುಕೊಂಡಿದ್ದಾರೆ. ಅಲ್ಲದೆ ಈ ಪುಸ್ತಕವನ್ನು ಓದಿ ತಮ್ಮಅಭಿಪ್ರಾಯವನ್ನು ಹಂಚಿಕೊಳ್ಳುವಂತೆ ತಿಳಿಸಿದ್ದಾರೆ. ಹಾಗಿದ್ದರೆ ಆ ಪುಸ್ತಕ ಯಾವುದು ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

Image result for virat kohli Autobiography of a Yogi

‘ಆಟೋಬಯಾಗ್ರಾಫಿ ಆಫ್ ಯೋಗಿ’ (‘Autobiography of a Yogi’) ಪುಸ್ತಕದ ಬಗ್ಗೆ ಕೊಹ್ಲಿ ಅವರೇ ಸಮಾಜಿಕ ಜಾಲತಾಣದಲ್ಲಿತಮ್ಮ ಅನುಭವ ತೋಡಿಕೊಂಡಿದ್ದಾರೆ. ಅಲ್ಲದೆ ನಾನು ಈ ಪುಸ್ತಕವನ್ನು ತುಂಬ ಇಷ್ಟ ಪಟ್ಟಿದ್ದೇನೆ. ಈ ಪುಸ್ತಕದ ಸಾಹಯದಿಂದನನ್ನ ವಿಚಾರಧಾರೆಗಳು ಬದಲಾವಣೆ ಆಗಿದೆ. ಈ ಪುಸ್ತಕ ನಿಮ್ಮ ಜ್ಞಾನ ಅಭಿವೃದ್ಧಿಗೆ ಸಹಾಯಕ ಹಾಗೂ ಜೀವನ ಶೈಲಿಯನ್ನೇಬದಲಾವಣೆ ಆಗಲಿದೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮೊದಲು ಕೊಹ್ಲಿ ಅವರ ಕೋಚ್ ರಾಜಕುಮಾರ್ ಶರ್ಮಾ ಅವರು ಕೆಲವು ಸಂಗತಿಗಳನ್ನು ಜನರ ಮುಂದೆತೆರೆದಿಟ್ಟಿದ್ದರು. ಈಗ ವಿರಾಟ್ ಕೊಹ್ಲಿ ಅವರೇ ತಮ್ಮ ಏಕಾಗ್ರತೆಯ ವಿಷಯವನ್ನು ಬಯಲಿಗೆ ಇಟ್ಟಿದ್ದಾರೆ.

Amazon Big Indian Festival
Amazon Big Indian Festival

Copyright © 2016 TheNewsism

To Top