Sports

ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡ ಕನ್ನಡದ ಕುವರ ರೋಹನ್‌ ಬೋಪಣ್ಣ ಯುವಕರಿಗೆ ಮಾದರಿ..!

ಫ್ರೆಂಚ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಭಾರತದ ರೋಹನ್‌ ಬೋಪಣ್ಣ ಮತ್ತು ಕೆನಡಾದ ಗೇಬ್ರಿಯೆಲಾ ದಬ್ರೋವ್‌ಸ್ಕಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಲಿಯಾಂಡರ್‌ ಫೇಸ್‌, ಮಹೇಶ್‌ ಭೂಪತಿ, ಸಾನಿಯಾ ಮಿರ್ಜಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಟೆನಿಸ್‌ ಪಟು ಎಂಬ ಗೌರವಕ್ಕೆ ಬೋಪಣ್ಣ ಪಾತ್ರರಾಗಿದ್ದಾರೆ.

Image result for rohan bopanna

ಪ್ಯಾರಿಸ್ ನಲ್ಲಿ ನಡೆದ ರೋಚಕ ಅಂತಿಮ ಹಣಾಹಣಿಯಲ್ಲಿ ರೋಹನ್ ಬೋಪಣ್ಣ ಮತ್ತು ಕೆನಡಾದ ಗೇಬ್ರಿಯೆಲಾ ಜೋಡಿ ಕೊಲಂಬಿಯಾದ ರಾಬರ್ಟ್ ಫರಾಹ್ ಮತ್ತು ಜರ್ಮನಿಯ ಅನ್ನಾ ಲೆನಾ ಗ್ರೋನೆಫೆಲ್ಡ್ ವಿರುದ್ಧ 2-6, 6-2, 12-10 ನೇರ ಸೆಟ್ ನಲ್ಲಿ ಜಯ ಸಾಧಿಸಿದ್ದಾರೆ.

ಸೆಮಿಫೈನಲ್‌ ಪಂದ್ಯದಲ್ಲಿ ಬೋಪಣ್ಣ ಜೋಡಿ 7-5, 6-3 ರಿಂದ ನೆರ ಸೆಟ್‌ನಲ್ಲಿಯೇ ಜೆಕ್‌ ನ ಆ್ಯಂಡ್ರಿಯಾ ಹ್ಲಾವಕೊವಾ, ಫ್ರಾನ್ಸ್‌ನ ಎಡ್ವರ್ಡ್‌ ರೋಜರ್‌ ವಾಸಿಲಿನ್‌ ವಿರುದ್ಧ ಜಯ ಸಾಧಿಸುವ ಮೂಲಕ ಮಿಶ್ರ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಮತ್ತು ಕೆನಡಾದ ಗೇಬ್ರಿಯೆಲಾ ಡಾಬ್ರೊಸ್ಕಿ ಜೋಡಿ ಫೈನಲ್‌ ಪ್ರವೇಶಿಸಿತ್ತು.

Related image

ಕೊಡಗಿನ ಕುವರ ರೋಹನ್‌ ಬೋಪಣ್ಣ ಅನ್ನೋ ಪ್ರತಿಭೆ ಪ್ರತಿಯೊಬ್ಬ ಭಾರತೀಯರಿಗೆ ಮಾದರಿ ಆಗಬೇಕು. ಟೆನಿಸ್ ಆಟದಲ್ಲಿ ಸಾನಿಯಾ ಬೀಟು ಅತಿ ಹೆಚ್ಚು ಹೆಸರು ಮಾಡಿದ್ದೂ ನಮ್ಮ್ ಕೊಡಗಿನ ಕುವರ ರೋಹನ್‌ ಬೋಪಣ್ಣ. ಇವತ್ತಿನ ಯುವಕರಿಗೆ ಮಾದರಿ ಆಗಿದ್ದರೆ.

ರೋಹನ್ ತಮ್ಮ “ಯುದ್ಧ ನಿಲ್ಲಿಸಿ; ಟೆನಿಸ್ ಆರಂಭಿಸಿ” ಕಾರ್ಯಕ್ರಮದಡಿಯಲ್ಲಿ ಮಾಡುವ ಸಾಮಗ್ರಿಗಳ ಮಾರಾಟದಿಂದ ಬರುವ ಲಾಭಾಂಶವನ್ನು
ಗೋ ಸ್ಪೋರ್ಟ್ಸ್ ಫೌಂಡೇಶನ್ ಎಂಬ ನೋನ್-ಪ್ರಾಫಿಟ್ ಸಂಸ್ಥೆಗೆ ದಾನ ಮಾಡುತ್ತಾರೆ. ಈ ಸಂಸ್ಥೆಯು ಭಾರತದಲ್ಲಿ ಕ್ರೀಡಾರಂಗದಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವ ನಿಟ್ಟಿನಲ್ಲಿ ದುಡಿಯುತ್ತಲಿದೆ.

Image result for rohan bopanna

ತಮ್ಮ ತಾಯ್ನೆಲ ಕೊಡಗಿನಲ್ಲಿ ದೈಹಿಕ ವೈಶಿಷ್ಟ್ಯವುಳ್ಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸದಾವಕಾಶ ಶಾಲೆ (Opportunity School)ಯೊಂದನ್ನು ತೆರೆಯಲು ಆರ್ಥಿಕ ಸಂಗ್ರಹಕ್ಕಾಗಿ ದುಡಿಯುತ್ತಿದ್ದಾರೆ. ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲೂ ಕೊಡಗಿನ ಸಂಸ್ಥೆಗಳಿಗೆ ದಾತೃಗಳಾಗಿದ್ದಾರೆ.

ಕೊಡಗಿನಲ್ಲಿ ಕಾಫಿ ಬೆಳೆಗಾರರಾದ ಮಚ್ಚಂಡ ಮನೆತನದ ಶ್ರೀ ಜಿ ಬೋಪಣ್ಣ ಮತ್ತು ಮಲ್ಲಿಕಾರವರ ಮಗನಾಗಿ ರೋಹನ್ ೪ನೆ ಮಾರ್ಚ್ ೧೯೮೦ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಬೋಪಣ್ಣನವರಿಗೆ ತಮ್ಮ ಮಗ ಒಂದು ವೈಯಕ್ತಿಕ ಕ್ರೀಡೆಯಲ್ಲೇ ಸಾಧಿಸಬೇಕೆಂಬ ಅಭಿಪ್ರಾಯವಿದ್ದದರಿಂದ ರೋಹನ್ ಅವರನ್ನು ಹನ್ನೊಂದನೇ ವಯಸ್ಸಿನಲ್ಲಿಯೇ ಟೆನಿಸ್‌ನಲ್ಲಿ ತೊಡಗಿಸಿದರು. ಫುಟ್ ಬಾಲ್ ಮತ್ತು ಕೊಡಗಿನವರ ಜನ್ಮಾಗತ ಕ್ರೀಡೆಯಂತಿರುವ ಹಾಕಿಯಲ್ಲಿ ರೋಹನ್ ಅವರಿಗೆ ಅಭಿರುಚಿ ಇದ್ದರೂ, ೧೯ ವರ್ಷ ಪ್ರಾಯವಾಗುವ ಹೊತ್ತಿಗೆ ಟೆನಿಸ್ ಅವರ ಜೀವನೋದ್ದೇಶವಾಗಿ ಬಿಟ್ಟಿತ್ತು.

Amazon Big Indian Festival
Amazon Big Indian Festival

Copyright © 2016 TheNewsism

To Top