Get Inspired

ಈ 20 ಗುಣಗಳು ಇರೋದಕ್ಕೆ ಮಹಾಭಾರತದಲ್ಲಿ ಕರ್ಣನಿಗೆ ವಿಶೇಷ ಸ್ಥಾನ ಸಿಕ್ಕಿದ್ದು.

ಪುರಾಣ ಕಾಲದಿಂದಲೂ ಮಹಾಭಾರತದ ಕಥೆಗಳನ್ನು ಕೇಳುತ್ತ ಬಂದಿದ್ದೇವೆ. ಮಹಾಭಾರತದಲ್ಲಿ ಬರುವ ಎಲ್ಲಾ ಪಾತ್ರಗಳೂ ನಮ್ಮ ಜೀವನದಲ್ಲಿ ಬರುವ ವ್ಯಕ್ತಿಗಳನ್ನು ಆಧರಿಸಿಯೇ ಇದೆ. ಹುಟ್ಟುತ್ತಾ ಅಣ್ಣತಮ್ಮಂದಿರುವ ಬೆಳೆಯುತ್ತಾ ದಾಯಾದಿಗಳು ಎಂಬ ಪದಕ್ಕೆ ಮಹಾಭಾರತ ತಕ್ಕ ಉದಾಹರಣೆ. ಇಂತಹ ಕತೆಗಳು ಆಗಾಗ್ಗೆ ಸಾಕಷ್ಟು ನೀತಿಯನ್ನು ಹೇಳುತ್ತವೆ. ಇವುಗಳನ್ನು ತಿಳಿದುಕೊಂಡರೆ ಸಾಕು ನಮ್ಮ ಬದುಕಿಗೆ ಇವು ದಾರಿದೀಪಗಳಾಗುತ್ತವೆ.

ಮಹಾಭಾರತದಲ್ಲಿ ನೆನಪಿನಲ್ಲಿ ಉಳಿಯುವಂತಹ ಕೆಲವು ಪಾತ್ರಗಳೂ ಇದ್ದು ಅದರಲ್ಲಿ ಸದಾ ನೆನಪಿನಲ್ಲಿ ಉಳಿಯುವುದು ಕರ್ಣ. ಕರ್ಣ ಗೆಳೆತನಕ್ಕೆ ಜೀವಂತ ನಿದರ್ಶನವಾಗಿದ್ದಾನೆ. ಅಂಗರಾಜ, ಹುಟ್ಟಿನಿಂದ ಕ್ಷತ್ರಿಯನಾಗಿದ್ದರೂ, ಎಲ್ಲರಿಂದಲೂ ಸೂತಪುತ್ರ ಎಂದು ಕರೆಸಿಕೊಂಡ ನತದೃಷ್ಟ ಮತ್ತು ಮಹಾಭಾರತದ ದುರಂತ ನಾಯಕ!

ಬದುಕಿಗೆ ಪ್ರೇರಕವಾಗಿರುವ ದಾನಶೂರ ಕರ್ಣನ 20 ಆದರ್ಶ ಗುಣಗಳು

1. ಕುಂತಿಭೋಜನ ಮನೆಯಲ್ಲಿದ್ದ ದೂರ್ವಾಸನನ್ನು ಸತ್ಕರಿಸಿದ್ದಕ್ಕಾಗಿ ವರಪಡೆದಿದ್ದ ಕುಂತಿ. ಮಂತ್ರ ಮಾಹಾತ್ಮ್ಯೆಯನ್ನು ಪರೀಕ್ಷಿಸಬೇಕೆಂಬ ಚಾಪಲ್ಯದಿಂದ ಮದುವೆಗೆ ಮೊದಲು ಸೂರ್ಯನಿಂದ ಕುಂತಿಯ ಮಗನಾಗಿ ಹುಟ್ಟಿದವ ಕರ್ಣ.

2. ಲೋಕ ಅಪವಾದಕ್ಕೆ ಹೆದರಿದ ಕುಂತಿ ಆ ಹಸುಗೂಸನ್ನು ಗಂಗಾನದಿಯಲ್ಲಿ ತೇಲಿಬಿಟ್ಟಳು.

3. ಹಗೆ ತೇಲಿಬಿಟ್ಟ ಮಗು ಸೂತನೊಬ್ಬನ (ಧೃತರಾಷ್ಟ್ರನ ಸಾರಥಿ) ಕೈಗೆ ಸಿಗುತ್ತದೆ. ಹೀಗೆ ಸುತನ ಮನೆಯಲ್ಲಿ ಸೂತ ಪುತ್ರನಾಗಿ ಬೆಳೆಯುವ ಕರ್ಣ.

Related image

source: ayalaan007.blogspot.in

 

4. ಮುಂದೆ ಶಿಕ್ಷಣವನ್ನು ಪಡೆಯುವ ಮಹದಾಸೆಯಿಂದ ದ್ರೋಣಾಚಾರ್ಯನ ಆಶ್ರಮಕ್ಕೆ ಬರುತ್ತಾನೆ. ಸೂತಪುತ್ರನಾದ ಅವನಿಗೆ ಶಸ್ತ್ರವಿದ್ಯಾಭ್ಯಾಸ ಕಲಿಸಲು ಆಚಾರ್ಯರು ನಿರಾಕರಿಸುತ್ತಾರೆ.

5. ಪರುಶರಾಮನ ಬಳಿಗೆ ಬಂದು ತಾನು ವಿಪ್ರನೆಂದು ಸುಳ್ಳು ಹೇಳಿ ಪರಶುರಾಮನಿಂದ ಶಸ್ತ್ರವಿದ್ಯಾಭ್ಯಾಸವನ್ನು ಪಡೆಯುತ್ತಾನೆ.

Image result for parshuram and karna

 

 

6. ಸತ್ಯವನ್ನು ತಿಳಿದ ಪರಶುರಾಮ ಕುಪಿತನಾಗಿ ತಾನು ಕರುಣಿಸಿದ ವಿದ್ಯೆಯನ್ನು ಅವಸಾನ ಕಾಲದಲ್ಲಿ ಮರೆತುಹೋಗಲಿ ಎಂದು ಶಾಪ ನೀಡುತ್ತಾನೆ.

Related image

source: i-heart-hinduism.tumblr.com

 

7. ರಾಜಪುತ್ರರ ವಿದ್ಯಾಪರಿಣತಿಯನ್ನು ಪ್ರದರ್ಶಿಸುವ ಸಭೆಯಲ್ಲಿ ಸೂತಪುತ್ರನಾದ ಕರ್ಣನನ್ನು ಅರ್ಜುನನೊಂದಿಗೆ ಹೊರಡಲು ಅನುಮತಿ ದೊರೆಯದೆ ಇದ್ದಲ್ಲಿ ದುರ್ಯೋಧನ ಕರ್ಣನ ಪರವಾಗಿ ನಿಂತು, ಅವನಿಗೆ ಅಂಗರಾಜ್ಯಾಭಿಷೇಕವನ್ನಿತ್ತು ಗೌರವಿಸಿದ.

Image result for duryodhana and karna

source: indiaopines.com

8. ಅಂದಿನಿಂದ ದುರ್ಯೋಧನ ಕರ್ಣನ ಆಪ್ತ ಗೆಳೆಯನಾಗಿ ಪಾಂಡವರ ವಿನಾಶ ಕಾರ್ಯದಲ್ಲಿ ಮುಂದಾಳಾಗಿ ದುಷ್ಟಚತುಷ್ಟಯರಲ್ಲಿ ಒಬ್ಬನಾದ.

Image result for karna

source: indiaopines.com

9. ದ್ರೌಪದಿ ಸ್ವಯಂವರದಲ್ಲಿ ಅರ್ಜುನನಿಗಿಂತ ಮೊದಲು ಮೀನಿನ ಕಣ್ಣಿಗೆ ಗುರಿ ಇಟ್ಟವನು ಕರ್ಣ, ಆದರೆ ದ್ರೌಪದಿ ಅವ್ನಿಗೆ ಅವಮಾನ ಮಾಡ್ತಾಳೆ.

10. ಒಂದು ಸಣ್ಣ ಮಗುವಿಗೆ ಉಪಕಾರ ಮಾಡಿದ್ದಕ್ಕೆ ಭೂತಾಯಿಂದ ಕರ್ಣನಿಗೆ ಶಾಪ ಕೊಡುತ್ತಾಳೆ. ಇದೆ ಕಾರಣಕ್ಕೆ ಕುರುಕ್ಷೇತ್ರ ಯುದ್ದದ ಸಮಯದಲ್ಲಿ ಈ ಶಾಪದಿಂದಾಗಿಯೇ ಕರ್ಣ ರಥದ ಚಕ್ರ ಮಣ್ಣಲ್ಲಿ ಹೂತು ಹೋಗುವುದು.

11. ಅಕಸ್ಮಾತಾಗಿ ಕರ್ಣ ನಿಂದ ಬ್ರಾಹ್ಮಣನ ಹಸು ಕೊಲ್ಲುತ್ತಾನೆ ಇದರಿಂದಾಗಿ ಆ ಬ್ರಾಹ್ಮಣ ಶಾಪ ಕೊಡುತ್ತಾನೆ ಯಾವ ಬಾಣದಿಂದ ನನ್ನ ಹಸುವನ್ನು ಕೊಂದೆಯೋ ಮುಂದೆ ನಿನಗೂ ಕೂಡ ಬಾಣ ಚುಚ್ಚಿ ಕರ್ಣನ ಸಯುತ್ತಿಯ ಅನ್ನುವಂತಹ ಶಾಪ ಕೊಡುತ್ತಾನೆ. ಈ ಶಾಪದಿಂದಾನೇ ರಥದ ಚಕ್ರ ಹೊರಗೆ ತೆಗಿಯೋಕೆ ಪ್ರಯತ್ನ ಮಾಡ್ತಿದ್ದಾಗ ಅರ್ಜುನ ಬಿಟ್ಟ ಬಾಣದಿಂದ ಕರ್ಣ ಸಾಯೋದು.

source: storypick.com

12. ಕುರುಕ್ಷೇತ್ರದಲ್ಲಿ ಕೃಷ್ಣನ ಆಜ್ಞೆಯಂತೆ ಕುಂತಿ ಕರ್ಣ ಅವಳ ಮೊದಲನೇ ಮಗ ಎನ್ನುವ ಸತ್ಯವನ್ನು ಕರ್ಣನಿಗೆ ಹೇಳುತ್ತಾಳೆ. ಮತ್ತು ಅವನಿಂದ ಕುರುಕ್ಷೇತ್ರದಲ್ಲಿ ಪಾಂಡವರನ್ನು ಕೊಲ್ಲಬಾರದು ಎಂದು ಭಾಷೆಯನ್ನು ಕೇಳುತ್ತಾಳೆ. ಮಹಾ ದಾನಿಯದ ಕರ್ಣ ತಾಯಿಯ ಮಾತನ್ನು ನಡೆದುಕೊಳ್ಳುತ್ತಾನೆ.

Related image

13. ಇಂದ್ರನ ವರ ಪ್ರಸಾದವಾಗಿ ಹುಟ್ಟಿದ ಅರ್ಜುನ ನನ್ನು ಕಾಪಾಡಲು ಮಾರುವೇಷ ಧರಿಸಿ ಬಂದ ಇಂದ್ರ ಉಪಾಯವಾಗಿ- ‘ಕರ್ಣಾ, ನನಗೆ ನಿನ್ನಲ್ಲಿರುವ ಕವಚ-ಕುಂಡಲಗಳನ್ನು ದಾನವಾಗಿ ಕೊಡು’ ಎಂದು ಕೈಯೊಡ್ಡುತ್ತಾನೆ. ತನ್ನ ಸಹಜಗುಣಕ್ಕೆ ಅನುಸಾರವಾಗಿ ತನಗೆ ರಕ್ಷೆಯಂತಿದ್ದ ಕವಚಕುಂಡಲಗಳನ್ನು ಮನಃಪೂರ್ವಕವಾಗಿ ಇಂದ್ರನಿಗೆ ದಾನಮಾಡಿದ ಮಹಾದಾನಿ ಕರ್ಣ.

source: youtube.com

14. ದುರ್ಯೋಧನನ ಹಠ, ದುಶ್ಯಾಸನನ ಅಟ್ಟಹಾಸ, ಜರಾಸಂಧನ ಪೊಗರು ಮತ್ತು ಶಕುನಿಯ ಕುತಂತ್ರದಿಂದ ಕುರುಕ್ಷೇತ್ರ ಯುದ್ಧದಲ್ಲಿ ದ್ರೋಣಾಚಾರ್ಯನ ಮರಣದ ನಂತರ, ಕರ್ಣನ ನೇತೃತ್ವದಲ್ಲಿ ಯುದ್ಧದ ಮುಂದುವರೆಯುತ್ತದೆ.

Related image

15. ಕುರುಕ್ಷೇತ್ರ ಯುದ್ದದಲ್ಲಿ ಮೊದಲು ಕರ್ಣನಿಗೆ ಎದುರಾಗಿ ಧರ್ಮರಾಯ ಬರುತ್ತಾನೆ. ತಮ್ಮನಾದ ಧರ್ಮರಾಯನನ್ನು ಕೊಲ್ಲದೆ ಅವನಿಗೆ ಪ್ರಜ್ಞೆ ತಪ್ಪುವಂತೆ ಮಾಡುವ ಸಾಮರ್ಥ್ಯದ ಬಾಣವನ್ನಷ್ಟೇ ಪ್ರಯೋಗಿಸುತ್ತಾನೆ. ಆನಂತರದಲ್ಲಿ ಕರ್ಣನ ಮುಂದೆ ಬಂದವರು ಭೀಮ, ನಕುಲ-ಸಹದೇವ ಅವರನ್ನು ಕೇವಲ ಗಾಯಗೊಳಿಸಿ, ಪ್ರಜ್ಞೆ ತಪ್ಪುವಂತಷ್ಟೇ ಮಾಡಿ ಅವರ ಜೀವ ಉಳಿಸುತ್ತಾನೆ ಕರ್ಣ.

source: storypick.com

16. ಕರ್ಣಾರ್ಜುನರ ಮುಖಾಮುಖಿ ಯಾಗುತ್ತದೆ. ಸುಮಾರು ಹದಿನೆಂಟಿಪ್ಪತ್ತು ವರ್ಷಗಳಿಂದಲೂ ಕರ್ಣನ ಮೇಲೆ ಅರ್ಜುನನಿಗೆ ದ್ವೇಷವಿರುತ್ತದೆ. ಅದರೂ ಕರ್ಣನ ಮೇಲೆ ಬಾಣ ಪ್ರಯೋಗಿಸಲು ಅರ್ಜುನನಿಗೆ ಮನಸ್ಸೇ ಬರುವುದಿಲ್ಲ.

Image result for arjuna arrow

source: theharekrishnamovement.org

17. ಅರ್ಜುನನ ರಥದ ಚಕ್ರ ನೆಲದಲ್ಲಿ ಹೂತು ಹೋದ ಸಂದರ್ಭದಲ್ಲಿ ಕರ್ಣ ಅರ್ಜುನನ ಮೇಲೆ ದಾಳಿ ಮಾಡೋ ಅವಕಾಶ ಇದ್ರೂ ಕೂಡ ಯುದ್ಧ ನಿಲ್ಲಿಸ್ತಾನೆ. ಚಕ್ರ ಹೊರಗೆ ತೆಗೆದಾದ ಮೇಲೆ ಅವನ ಜೊತೆ ಯುದ್ದವನ್ನು ಮುಂದುವರೆಸುತ್ತಾನೆ.

Image result for karna and arjuna

source: columbia.edu

18. ಅರ್ಜುನನ ನಂತರ ಶ್ರೀಕೃಷ್ಣ ಕರ್ಣನಿಗೂ ಕೂಡ ಉಪದೇಶ ಮಾಡುತ್ತಾನೆ.

Image result for karna and krishna

19. ಪರಶುರಾಮನ ಶಾಪದ ಕಾರಣ, ತನ್ನ ವಿದ್ಯೆ ಮರೆತುಹೋಗಿ ರಥ ಮಣ್ಣಿನಲ್ಲಿ ಹೂತಿದ್ದಾಗ ಅರ್ಜುನನ ಬಾಣದಿಂದ ಸಾಯುತ್ತಾನೆ.

Image result for karna and krishna

20. ಅರ್ಜುನನ ಬಾಣದಿಂದ ಚಿಚ್ಚಿ ನೆಲದಲ್ಲಿ ಬಿದ್ದಿದ್ದ ಕರ್ಣನ ಹತ್ರ ಕೃಷ್ಣ ಬ್ರಾಹ್ಮಣನ ರೂಪದಲ್ಲಿ ಹೋಗಿ ಭಿಕ್ಷೆ ಕೇಳುತ್ತಾನೆ. ಕರ್ಣನ ಹತ್ತಿರ ಇರುವ ಚಿನ್ನದ ಹಲ್ಲುಗಳನ್ನು ದಾನವಾಗಿ ಕೇಳುತ್ತಾನೆ. ಕೊನೆ ಗಳಿಗೆಯಲ್ಲೂ ಕರ್ಣ ಹಲ್ಲುಗಳನ್ನು ದಾನ ಮಾಡ್ತಾನೆ ಆದರೆ ಅದರಲ್ಲಿ ಎಂಜಿಲಿದೆ ಅಂತ ಕೃಷ್ಣ ಸಿಟ್ಟಾದಾಗ. ಕರ್ಣ ಭೂಮಿಗೆ ಬಾಣ ಬಿಟ್ಟು, ನೀರುಕ್ಕಿಸಿ ಅದರಲ್ಲಿ ಚಿನ್ನದ ಹಲ್ಲನ್ನ ತೊಳೆದು ಕೊಡುತ್ತಾನೆ ಇದರಿಂದ ಕರ್ಣನಿಗೆ ಶ್ರೀಕೃಷ್ಣ ವಿಶ್ವರೂಪದರ್ಶನ ಕೊಡುತ್ತಾನೆ. ಕರ್ಣನನ್ನೂ ಸೇರಿಸಿ ಮೂರೇ ಮೂರು ಜನ ಕೃಷ್ಣನ ವಿಶ್ವರೂಪವನ್ನ ನೋಡಿರೋದು.

Image result for karna and krishna

source: ScoopWhoop

Amazon Big Indian Festival
Amazon Big Indian Festival

Copyright © 2016 TheNewsism

To Top