God

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶ್ರೀ ಮಾರಿಕಾಂಬೆ ದೇವಸ್ಥಾನದ ಹಿನ್ನೆಲೆ..

Marikamba temple sirsi

ಶಿರಸಿ ಶ್ರೀಮಾರಿಕಾಂಬೆ ಗಿರಿಶಿಕರ ನಿವಾಸಿನಿ. ಶಿರಸಿಯ ಕಾಯುವ ಮಾರೆಮ್ಮಳಾಗಿ, ಮಹಾಕಾಳಿಯಾಗಿ, ಮಹಾಲಕ್ಶ್ಮಿಯಾಗಿ, ಮಹಾ ಸರಸ್ವತೀಯಾಗಿ ಸಕಲರನ್ನೂ ಕಾಯುವ ಮಹಾ ಶಕ್ತಿಯಾಗಿ ಮಲೆನಾಡಿನಲ್ಲಿ ನೆಲೆಸಿರುವವಳು.ಉತ್ತರಕನ್ನಡ ಜಿಲ್ಲೆಯ ಪ್ರಮುಕ ಪಟ್ಟಣ. ಶಿರಸಿಯ ಕಾಯುವ ಶಕ್ತಿ ದೇವತೆಯೆಂದೆ ಪ್ರಸಿದ್ಧಿ.ನೆರೆ ರಾಜ್ಯಗಳಾದ ಕೇರಳ, ಆಂದ್ರ, ತಮಿಳುನಾಡು, ಗೋವಾ, ಮಹಾರಾಷ್ಟ್ರ-ಗಳಿಂದ ಶ್ರೀಮಾರಿಕಾಂಬೆಯ ಬಕ್ತರು ಅಪಾರ ಸಂಖ್ಯೆಯಲ್ಲಿ ಬರುತ್ತಾರೆ. ಅದರಲ್ಲಿಯೂ ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳ ಜನರಿಗಂತೂ ಶ್ರೀಮಾರಿಕಾಂಬೆ ಮುಖ್ಯ ಆರಾದ್ಯ ದೇವತೆ.
Marikamba Devi Temple Marikamba Devi Temple

ನಮ್ಮ ಹಿರಿಯರು ಹೇಳೋ ಪ್ರಕಾರವಾಗಿ ಹಳೆ ಕಾಲದಲ್ಲಿ ದೇಶದಲ್ಲೇಲ್ಲ ತುಂಡು ಪಾಳೆಯಗಾರಿಕೆಗಳೇ ರೂಡಿಯಲ್ಲಿದ್ದು ಕಳವು, ಕೊಲೆ, ಸುಲಿಗೆಗಳು ಸಾಮಾನ್ಯವೆನಿಸಿಬಿಟ್ಟಿದ್ದವು. ಶಿರಸಿ ಆಗ ಚೆನ್ನಾಪುರ ಸೀಮೆಯಲ್ಲಿದ್ದ ಸುಮಾರು ಇನ್ನೂರು ಮನೆಗಳುಳ್ಳ ಒಂದು ಪುಟ್ಟಹಳ್ಳಿಯಾಗಿತ್ತು. ಆಗ ಹಾನಗಲ್ಲಿನಲ್ಲಿ ದೇವಿಯ ಜಾತ್ರೆ ಅದ್ದೂರಿಯಾಗಿ ನಡಿತಾ ಇತ್ತು. ಜಾತ್ರೆ ಮುಗಿದ ಮೇಲೆ ದೇವಿಯ ವಿಗ್ರಹದ ವಿವಿದ ಆಬರಣಗಳನ್ನು ಪೆಟ್ಟಿಗೆಯಲ್ಲಿ ಹಾಕಿ ಇಡಲಾಗುತ್ತಿತ್ತು.ಕಳ್ಳರು ಹಾನಗಲ್ಲಿನಿಂದ ಈ ದೇವಿಯ ವಿಗ್ರಹದ ಪೆಟ್ಟಿಗೆಯನ್ನು ಕದ್ದುತಂದು, ಶಿರಸಿಗೆ ಸಮೀಪದ ಕೆರೆಯಿಂದ ಸ್ವಲ್ಪ ದೂರದಲ್ಲಿ ಕುಳಿತು ಪೆಟ್ಟಿಗೆಯನ್ನೊಡೆದು, ಅದರಲ್ಲಿನ ಆಬರಣಗಳನ್ನು ತಮ್ಮೊಳಗೆ ಹಂಚಿಕೊಂಡು, ವಿಗ್ರಹದ ಬಿಡಿ ಬಾಗಗಳನ್ನು ಮತ್ತದೇ ಪೆಟ್ಟಿಗೆಯಲ್ಲಿ ತುಂಬಿ ಶಿರಸಿಯ ಸಮೀಪದ ಕೋಟೆಕೆರೆಯೊಳಗೆ ಎಸೆದರು ಎಂಬುದಾಗಿ ಇತಿಹಾಸ ಇದೆ.ಬೇರೆ ಸ್ತಳದಿಂದ ಬಂದು, ಕೆರೆಯಲ್ಲಿ ದೊರೆತ ವಿಗ್ರಹ ಮಾರೆಮ್ಮ, ಶಿರಸಿ ಶ್ರೀಮಾರಿಕಾಂಬೆಯಾಗಿ ಶಿರಸಿಯಲ್ಲಿ ಪ್ರಕಟಗೊಂಡಳು. ನಂತರ ಶ್ರೀ ಶಾಲಿವಾಹನ ಶಕೆ 1611 ಶುಕ್ಲ ಸಂವತ್ಸರದ ವೈಶಾಕ ಶುದ್ದ ಅಶ್ಟಮಿ ಮಂಗಳವಾರದಂದು ಈಗಿರುವ ಮಾರಿಕಾಂಬಾ ದೇವಾಲಯದ ಸ್ದಳದಲ್ಲಿ ದೇವಿಯನ್ನು ಪ್ರತಿಷ್ಟಾಪಿಸಲಾಗಿತ್ತಂತೆ. ಮಾರಿಕಾಂಬಾ ದೇವಾಲಯ ಇಂದು ಪ್ರಸಿದ್ದ ಧಾರ್ಮಿಕ ಶಕ್ತಿ ಕೇಂದ್ರವಾಗಿರುವದರೊಂದಿಗೆ ನಾಡಿನ ಹೆಸರಾಂತ ಪ್ರೇಕ್ಷಣಿಯ ಸ್ದಳವಾಗಿ ಹೆಸರುವಾಸಿಯಾಗಿದೆ.

Marikamba temple sirsi Marikamba temple sirsi

ಮಾರಮ್ಮನ ಜಾತ್ರೆ:
ಶಿರಸಿಯ ಶ್ರೀಮಾರಿಕಾಂಬಾ ದೇವಿಯಜಾತ್ರೆ ಕರ್ನಾಟಕದಲ್ಲೇ ಅತಿ ಪ್ರಸಿದ್ದವಾದ ಜಾತ್ರೆಗಳಲ್ಲಿ ಒಂದು. ಮಾರಿಕಾಂಬಾದೇವಿಯ ಜಾತ್ರೆ ಈಗಿನಂತೆ ನಿಯಮಿತ ಅವದಿಗೆ ಸರಿಯಾಗಿ ಅಂದರೆ ಪ್ರತಿ ಎರಡು ವರ್ಷಕ್ಕೊಮ್ಮೆ ನಡಿಯತ್ತೆ. ಮಾರಿ ಜಾತ್ರೆಗೆಂದೇ ಮೀಸಲಿಟ್ಟ ಊರಮದ್ಯದ ಬೀಡಕಿ ಬೈಲಿನಲ್ಲಿ ಜಾತ್ರೆ ವಿಜ್ರಂಭಣೆಯಿಂದ ನಡೆಯುತ್ತದೆ. 8 ದಿನಗಳ ಕಾಲ ನಡೆಯುವ ಈ ಇತಿಹಾಸ ಪ್ರಸಿದ್ದವಾದ ಜಾತ್ರೆಯಲ್ಲಿ ಊರೊಂದೇ ಅಲ್ಲ ದೂರ ದೂರದ ಊರುಗಳಿಂದ, ನೆರೆ ರಾಜ್ಯಗಳಿಂದ ಲಕ್ಷಾಂತರ ಭಕ್ತರು, ಪ್ರವಾಸಿಗರು ಆಗಮಿಸಿ, ದೇವಿಯ ದರ್ಶನ ಪಡೆದು ಹರಕೆ ಒಪ್ಪಿಸಿ, ಸುಭಿಕ್ಷೆ, ಸುಖ, ಸಂತೋಶ, ಸೌಭಾಗ್ಯ ನೀಡುವಂತೆ ಪ್ರಾರ್ಥಿಸುವ ದ್ರಶ್ಯ ಬಣ್ಣಿಸಲಾಗದು.
marikamba temple sirsi marikamba temple sirsi

ಕಂದಾಯ ಇಲಾಖೆ, ನಗರಸಭೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಗಳು ಮೊದಲಾದ ಸರಕಾರೀ ಇಲಾಖೆಗಳ ಸಂಪೂರ್ಣ ಸಹಕಾರ ಪಡೆದು ಶಾಂತಿಯುತವಾಗಿ, ಭಕ್ತಜನರಿಗೆ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ, ದೇವಸ್ತಾನದ ಬಾಬದಾರರು ಹಾಗು ಸಹಾಯಕರು, ಊರ ನಾಗರಿಕರ ಸಹಕಾರದೊಂದಿಗೆ, ಸ್ವಯಂ ಸೇವಾ ಸಂಸ್ತೆಗಳ ನೆರವಿನಲ್ಲಿ, ಸ್ವಯಂ ಸೇವಕರ ಸಹಕಾರದಲ್ಲಿ ಜಾತ್ರೆ ಅವಿಸ್ಮರಣೀಯವಾಗಿ ಜರುಗತ್ತದೆ. ವಿವಿದ ಬಗೆಯ ವ್ಯಾಪಾರಿ ಮಳಿಗೆಗಳು, ಮನರಂಜನೆಗಳು, ನಾಟಕ ಯಕ್ಷಗಾನ ಮೊದಲಾದ ಕಲಾಪ್ರಕಾರಗಳು ಜಾತ್ರೆಯ ಸೊಬಗನ್ನು ಇಮ್ಮಡಿಸುತ್ತವೆ.ಜಾತ್ರೆಯು ಪ್ರಾರಂಭವಾದ ಮೇಲೆ ಮೊದಲ ಮೂರು ಮಂಗಳವಾರ ಹಾಗೂ ನಡುವಿನ ಎರಡು ಶುಕ್ರವಾರಗಳಂದು ಐದು ಹೊರಬೀಡುಗಳು ನಡೆಯುತ್ತವೆ. ಹೊರಬೀಡುಗಳೆಂದರೆ ರಾತ್ರಿಗಡಿ ಗದ್ದುಗೆಗಳ ಬಳಿಗೆ ಹೋಗಿ ದೇವಿಯನ್ನು ಪೂಜಿಸಿ ತಿರುಗಿ ದೇವಸ್ತಾನಕ್ಕೆ ಬರುವುದು. ಜಾತ್ರೆಯ ನಿಯಮದಂತೆ ಹೊರಬೀಡುಗಳು ತುಂಬ ವಿಜ್ರಂಭಣೆಯಿಂದಲೇ ನಡೆಯುತ್ತವೆ. ಮೂರು ಮಂಗಳವಾರಗಳ ಹೊರಬೀಡಿನಲ್ಲಿಯೂ ಉತ್ಸವ ಮೂರ‍್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು, ಮೆರವಣಿಗೆ ಪೂರ್ವ ದಿಕ್ಕಿನ ಗದ್ದುಗೆಯ ಕಡೆಗೆ ಹೋಗುತ್ತದೆ. ಶುಕ್ರವಾರಗಳಂದು ಪಡಲಿಗೆಯೊಂದಿಗೆ ಮೆರವಣಿಗೆ ಉತ್ತರ ದಿಕ್ಕಿನ ಗಡಿಯ ನಿಶ್ಚಿತ ಗದ್ದುಗೆಗೆ ಹೋಗುತ್ತದೆ ಹಾಗೂ ಅಲ್ಲೇ ದೇವತೆಗಳಿಗೆ ಉಡಿ ಸಮರ್ಪಣೆಯಾದ ನಂತರ ಮಾರಿಕಾಂಬಾ ದೇವಸ್ತಾನದಿಂದ ಮರ‍್ಕಿ-ದುರ್ಗಿದೇವಸ್ತಾನಕ್ಕೆ ಹೋಗುವವು.

marikamba temple sirsi marikamba temple sirsi

ಐದನೇ ಹೊರಬೀಡು ಅಂಕೆಯ ಹೊರಬೀಡು. ಅಂದರೆ ಪಟ್ಟದಕೋಣನಿಗೆ ಕಂಕಣಕಟ್ಟುವ ಕಾರ್ಯಕ್ರಮ. ಹೊರಬೀಡಿನ ಮರುದಿವಸ, ಬುದವಾರ ಮಾರಿಕೋಣದ ಮೆರವಣಿಗೆ ಮರ‍್ಕಿ-ದುರ್ಗಿ ದೇವಸ್ತಾನಕ್ಕೆ ಹೋಗಿ ಪೂಜೆಯ ನಂತರ ಜಾತ್ರೆಯ ಗದ್ದಿಗೆಗೆ ತೆರಳಿ ನಿಲ್ಲುವುದು. ಅಲ್ಲಿ ಅಸಾದಿಯರು ಮತ್ತು ಮೇತ್ರಿಯವರು ರಂಗಮಂಟಪದ ವಿದಿ ವಿದಾನಗಳನ್ನು ಪೂರೈಸುವರು. ಇಲ್ಲಿ ಅಸಾದಿಯವರೇ ಕಂಕಣಧಿಕ್ಷೆ ತೊಡುತ್ತಾರೆ.ಆ ದಿವಸ ಶ್ರೀದೇವಿಯ ಉತ್ಸವ ಮೂರ್ತಿಯಿದ್ದ ಪಲ್ಲಕ್ಕಿಯು ಜಾತ್ರೆ ಗದ್ದುಗೆಯ ಮೇಲೆ ಕುಳಿತ ನಂತರ ಮೆರವಣಿಗೆಯಲ್ಲಿ ಹೋಗಿ ಮೇಟಿ {ಬಾಬದಾರರಿಗೆ} ಆಮಂತ್ರಣ ನೀಡಲಾಗುವುದು. ನಂತರ ಮೇಟಿಯವರು ಗಡಿಗೆ ಹಾಗೂ ಹಣತೆಯೊಂದಿಗೆ ಮೆರವಣಿಗೆಯಲ್ಲಿ ಜಾತ್ರೆಯ ಗದ್ದುಗೆಗೆ ಬಂದ ನಂತರ ನಾಡಿಗ ಮನೆತನದವರು ದೇವಿಗೆ ಮಂಗಳಾರತಿ ಮಾಡುತ್ತಾರೆ. ನಾಡಿಗ ಮನೆತನದವರು ದೇವಿಯ ತಂದೆಯ ಪರಂಪರೆಯವರೆಂದು ನಂಬಿಕೆಯಿದೆ. ನಾಡಿಗರು ಮಾಡಿದ ಮಂಗಳಾರತಿಯಿಂದ ಮೇಟಿ ದೀಪವನ್ನು ಹಚ್ಚುತ್ತಾರೆ. ಆ ದೀಪ ಜಾತ್ರೆ ಮುಗಿಯುವವರೆಗೂ ಆರದಂತೆ ಕಾಯ್ದುಕೊಳ್ಳಬೇಕಾದುದು ಮೇಟಿಯವರ ಕೆಲಸ.

marikamba temple sirsi
ನಾಡಿನ ಮನೆ ಮಾತಾಗಿರುವ ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆ ಮಂಗಳವಾರ ಪ್ರಾರಂಭವಾಗುವುದು. ಅಂದು ಬೆಳಗ್ಗೆ ಕಲಶವನ್ನು ಪೂಜಿಸಿ ಅದನ್ನು ರತದ ಗೂಡಿನ ಮೇಲೆ ಸ್ತಾಪಿಸಲಾಗುವುದು. ಬೇಡರ ಜೋಗತಿಯರು ಆ ಸಂಧರ್ಬದಲ್ಲಿ ಹಾಜರಿದ್ದು ಚವರಿ ಬೀಸುವರು. ರಥವನ್ನು ತಳಿರು ತೋರಣಗಳಿಂದ ಸಿಂಗರಿಸಿ. ಸಂಜೆ ಶ್ರೀಮಾರಿಕಾಂಬಾ ದೇವಿಯನ್ನು ಹಾಗೂ ಮರ‍್ಕಿ-ದುರ್ಗಿದೇವಿಯರನ್ನು ದೇವಸ್ತಾನದ ಸಭಾಮಂಟಪದ ಗದ್ದಿಗೆಯಲ್ಲಿ ಕೂರಿಸುವರು. ಮಾರಿಕಾಂಬೆಗೆ ಮತ್ತು ಮರ‍್ಕಿ-ದುರ್ಗಿಯರಿಗೆ ಹೊಸ ಸೀರೆ ಉಡಿಸಿ ಬಂಗಾರದ ಆಭರಣಗಳನ್ನು ತೊಡಿಸಿ ಅಲಂಕರಿಸಿ ದೃಷ್ಟಿ ಇಡುತ್ತಾರೆ. ಈ ವೇಳೆಯಲ್ಲಿ ಒಂದು ಬಲಿ ಸಮರ್ಪಿಸಲಾಗುತ್ತೆ. ಬಲಿಯೆಂದರೆ ಈಗ ಸಾತ್ವಿಕ ಬಲಿಗಳು ಮಾತ್ರ. ಜಾತ್ರೆ ಮುಗಿಯುವತನಕ ಇಂತಹ ಅನೇಕ ಬಲಿ ಸಮರ್ಪಿಸಲಾಗುವ ವಿದಿಗಳಿರುವುವಾದರೂ ಅವೆಲ್ಲವೂ ಸಾತ್ವಿಕ ಬಲಿಗಳೇ ಆಗಿವೆ.ಕರಿ ಕುಂಬಳಕಾಯಿ ಯನ್ನು ಸಾಂಕೇತಿಕವಾಗಿ ಸಮರ್ಪಿಸಲಾಗುತ್ತೆ. ರಕ್ತದ ಬಲಿ ದಾನಗಳು ಹಿಂದೆ ನಡಿತಾ ಇತ್ತಂತೆ. ಈಗ ರಕ್ತದ ಬಲಿ ಸಂಪೂರ್ಣವಾಗಿ ನಿಂತಿದೆ. ದೇವರಿಗಾಗಿ ಮಾಡಿದ ಮಂಗಳಸೂತ್ರವನ್ನು ಆ ರಾತ್ರಿ ಬಾಬದಾರರ ಮನೆಯಿಂದ ಮೆರವಣಿಗೆಯಲ್ಲಿ ತಂದು ನಂತರ ಮೊದಲ ಪ್ರತಿಶ್ಟೆಯ ಪೂಜೆಗಾಗಿ ನಾಡಿಗರಿಗೆ ಆಮಂತ್ರಣ ಕೊಡುವರು. ಅಂದು ಲಗ್ನ. ನಾಡಿಗರ ಮನೆಯಲ್ಲಿ ಅಂದು ಲಗ್ನದ ಸಿಹಿಯೂಟ ನಡೆಸುವ ಕ್ರಮವಿದೆ. ನಾಡಿಗರಿಂದ ಮೊದಲ ಪೂಜೆ ನಡೆದ ಮೇಲೆ ಮುಂದೆ ಎರಡು, ಮೂರು ಹಾಗೂ ನಾಲ್ಕನೆಯ ಪೂಜೆಗಳು ಕ್ರಮವಾಗಿ ಕುಂಬಾರ, ಕೇದಾರಿ ಹಾಗೂ ಎರಡೂ ಮನೆತನಗಳ ಪೂಜಾರಿಗಳಿಂದ ನಡೆಯುವುದು.

shri marikamba temple sirsi
ಶ್ರೀ ಮಾರಿಕಾಂಬಾ ದೇವಿಯನ್ನು ರತದ ಮೇಲೆ ಕೂಡಿಸಿ, ಅದಕ್ಕೆ ಬಲಿ ಸಮರ್ಪಣೆ ಮಾಡಿ, ರತದ ಗಾಲಿಗಳಿಗೆ ಬಾಬುದಾರರು ಕಾಯಿ ಒಡೆಯುತ್ತಾರೆ. ಬುದವಾರ ಬೆಳಗಿನ ಮಂಗಳಮಯ ವಾತಾವರಣದಲ್ಲಿ ಶುಭ ಮಹೂರ್ತದಲ್ಲಿ ರತದ ಮೇಲೆ ಅಂಬೆ ಮಾರಿಕಾಂಬೆ ನೋಡಲು ಬಲು ಸುಂದರ. ಲಕ್ಷಾಂತರ ಜನರ ನಡುವೆ ಸಕಲ ವಾದ್ಯಮೇಳ, ಹಾಡು ಕುಣಿತಗಳ ವಿಶೇಷದೊಂದಿಗೆ ಸಾಗಿಬರುವ ದೇವಿಯ ರತ ನೋಡಲು ಕಣ್ಣೆರಡು ಸಾಲದು.ನಂತರ ಶ್ರೀ ಮಾರಿಕಾಂಬಾ ದೇವಿಯನ್ನು ರತದ ಮೇಲಿಂದ ಜಾತ್ರೆಯ ಗದ್ದಿಗೆಯ ಮೇಲೆ ಕೂಡಿಸಲಾಗುತ್ತದೆ. ಜಾತ್ರೆ ಪ್ರಾರಂಭವಾಗಿ ಎಂಟು ದಿನಗಳ ಕಾಲ ಜಾತ್ರೆಯ ಗದ್ದಿಗೆಯಲ್ಲಿ ಕುಳಿತು ಭಕ್ತರಿಗೆ ದರ್ಶನ ನೀಡಿದ ಮಹಾತಾಯಿ ಮಾರೆಮ್ಮನ ಜಾತ್ರೆ ಅದೇ ಮರು ಬುದವಾರ ಮುಕ್ತಾಯಗೊಳ್ಳುತ್ತದೆ. ವಿವಿದ ಭಗೆಯ ವ್ಯಾಪಾರಿ ಮಳಿಗೆಗಳು, ಮನರಂಜನೆ, ನಾಟಕ, ಯಕ್ಷಗಾನಗಳು, ನಾನಾ ರೀತಿಯ ಮನರಂಜಿಸುವ ಆಟಗಳು ಜಾತ್ರೆಯ ಸೊಬಗನ್ನು ಹೆಚ್ಚಿಸುತ್ತವೆ. ಪ್ರತಿನಿತ್ಯ ಹೊರ ಊರುಗಳಿಂದ ಲಕ್ಷಾಂತರ ಜನರು ಬಂದು ಜಾತ್ರೆಯ ಸಂಭ್ರಮ ನೋಡಿ ಆನಂದಿಸುತ್ತಾರೆ.
shri marikamba temple sirsi

Amazon Big Indian Festival
Amazon Big Indian Festival

Copyright © 2016 TheNewsism

To Top