Awareness

ಕೇಬಲ್ ಗ್ರಾಹಕರೇ ಗಮನಿಸಿ ನೀವು ಕೇಬಲ್ ಬಿಲ್ 130ರೂ ಮಾತ್ರ ಪಾವತಿಸಬೇಕು ಹೆಚ್ಚಾಗಿ ಪಾವತಿಸಬೇಡಿ..!

ಹೌದು ನಮ್ಮ ರಾಜ್ಯದಲ್ಲಿ ಕೇಬಲ್ ಮಾಫಿಯಾ ಅನ್ನೋದು ತುಂಬಾನೇ ಬೆಳದಿದೆ ಇಂತಹ ಮಾಫಿಯಾವನ್ನು ಮಟ್ಟಹಾಕಲು ರಾಜ್ಯಸರಕಾರ ಹೊಸ ಕಾನೂನು ಜಾರಿಗೆ ತಂದಿದೆ. ಇದರಿಂದ ಎಷ್ಟೋ ಜನರ ಪಾಲಿಗೆ ಇದು ವರದಾನವಾಗಿದೆ.
ಕೇಬಲ್ ಅನ್ನೋ ಮಾಫಿಯಾ ನಮ್ಮ ಜನರನ್ನು ಕಿತ್ತು ತಿನ್ನುವ ಮಟ್ಟಿಗೆ ಬೆಳೆದಿದೆ ತಿಂಗಳಿಗೆ ೨೦೦ ಮತ್ತು ೩೦೦ ರೂ ಗಳನ್ನು ಪಾವತಿಸಬೇಕು ಇಲ್ಲ ಅಂದ್ರೆ ಕೇಬಲ್ ಕಟ್ ಇಂತ ಬೆದರಿಕೆಗಳನ್ನು ಹಾಕುವುದನ್ನು ನಾವು ನೀವು ಕಂಡಿದ್ದೇವೆ.

cable bill 130 onley-2

source:Fast Company

ಇಂತಹ ಸಮಯದಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ತುಂಬಾನೇ ಒಳ್ಳೇದು. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
100 ಚಾನೆಲ್‌ ವೀಕ್ಷಿಸುವ ಸೌಲಭ್ಯ ನೀಡಿದಲ್ಲಿ 130 ರೂ. ಶುಲ್ಕ ವಿಧಿಸಬೇಕು. ಅದಕ್ಕಿಂತ ಹೆಚ್ಚು ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರಾಗಿದ್ದಾಗ ಜಿ. ಪರಮೇಶ್ವರ್‌ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದರು.

cable bill 130 onley-4

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟಿಆರ್‌ಎಐ) ಕೇಬಲ್‌ ಸಂಪರ್ಕಕ್ಕೆ ದರ ನಿಗದಿ ಮಾಡಿ ನಿರ್ಣಯ ಕೈಗೊಂಡಿದೆ. ಹಾಗಾಗಿ ಹೆಚ್ಚುವರಿ 25 ಚಾನೆಲ್‌ಗಳಿಗೆ ಹೆಚ್ಚುವರಿಯಾಗಿ 20 ರೂ, ಮಾತ್ರ ಶುಲ್ಕ ಪಡೆಯಬೇಕು ಎಂದಿದೆ. ಇದಕ್ಕಿಂತ ಹೆಚ್ಚು ಹಣ ಪಡೆಯುವ ಕೇಬಲ್‌ ಸಂಸ್ಥೆಗಳ ಬಗ್ಗೆ ನಿಗಾ ವಹಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಿತಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದ್ದಾರೆ.

cable bill 130 onley-3

source:Springcom

ಕೇಬಲ್‌ ನೆಟ್‌ವರ್ಕ್‌ ಉದ್ಯಮದಲ್ಲಿ ವರ್ಷಕ್ಕೆ ಅಂದಾಜು 5 ಸಾವಿರ ರೂ. ಕೋಟಿ ವ್ಯವಹಾರ ನಡೆಯುತ್ತಿದೆ. ಆದರೆ, ರಾಜ್ಯ ಸರ್ಕಾರಕ್ಕೆ ನಯಾ ಪೈಸೆ ತೆರಿಗೆ ಬರುತ್ತಿಲ್ಲ. ಕೇಬಲ್‌ ನೆಟ್‌ವರ್ಕ್‌ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರಲು ಮತ್ತು ಈ ಉದ್ಯಮದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆದಾಯ ಸಂಗ್ರಹಿಸಲು ಹೊಸ ಕಾಯ್ದೆ ತರುವುದಾಗಿ ಹೇಳಿದ್ದಾರೆ.

cable bill 130 onley-1

ನೋಡಿ ಈ ವಿಚಾರ ನೆನಪಿಡಿ ಯಾವುದೇ ಕಾರಣಕ್ಕೂ ನೀವು ಮೋಸ ಹೋಗಬೇಡಿ ನಿಮ್ಮ ಕೇಬಲ್ ಬಿಲ್ ಹೆಚ್ಚು ಕೇಳಿದರೆ
ಯಾವುದೇ ಕಾರಣಕ್ಕೂ ಕೊಡಬೇಡಿ. ಯಾಕೆ ಏನು ಅಂತ ಕೇಳಿ ವಿಚಾರ ತಿಳಿದುಕೊಂಡು ಬಿಲ್ ಕಟ್ಟಿ.

Amazon Big Indian Festival
Amazon Big Indian Festival

Copyright © 2016 TheNewsism

To Top