God

ಹಸಿದಿರೋ ಭಕ್ತರಿಗೆ ಅನ್ನ ಉಣಿಸಿ ಭಕ್ತರಲ್ಲಿ ದೇವರ ಕಾಣುವ ದೇವಾಲಯಗಳ ಬಗ್ಗೆ ಕೇಳಿದ್ರೆ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡ್ತಿರಿ..

ಧರ್ಮಸ್ಥಳ ಶ್ರೀ ಮಂಜುನಾಥ ದೇವಾಲಯ 

ಧರ್ಮಸ್ಥಳಕ್ಕೆ ಭೇಟಿ ಕೊಟ್ಟಂತಹ ಪ್ರತಿಯೊಬ್ಬರು ಅನ್ನಪೂರ್ಣ ಭೋಜನಾಲಯದಲ್ಲಿ ಊಟಮಾಡಿನೇ ಹೋಗುತ್ತಾರೆ. ಲಕ್ಷಕ್ಕಿಂತಲೂ ಜಾಸ್ತಿ ಜನರು ಇಲ್ಲಿ ಊಟಮಾಡುತ್ತಾರೆ. ಅನ್ನಪೂರ್ಣ ಭೋಜನಾಲಯದಲ್ಲಿ ದಿನನಿತ್ಯ ಸುಮಾರು 70 ಕ್ವಿಂಟಾಲ್ ಅಕ್ಕಿ , 15 ಕ್ವಿಂಟಾಲ್ ತರಕಾರಿಗಳು, 2000 ತೆಂಗಿನಕಾಯಿ ಗಳನ್ನು ಬಳಸಲಾಗುತ್ತದೆ ಹಾಗು ಒಮ್ಮೆಗೆ 2500 ಜನರಿಗೆ ಊಟ ಬಡಿಸಲಾಗುತ್ತದೆ.

source: 4.bp.blogspot.com

ತಿರುಪತಿ ದೇವಾಲಯ :

ದಿನ ನಿತ್ಯ ಇಲ್ಲಿ 70000 ಸಾವಿರಕ್ಕಿಂತ ಹೆಚ್ಚು ಭಕ್ತಾದಿಗಳಿಗೆ ಊಟವನ್ನು ಬಡಿಸಲಾಗುತ್ತದೆ. ಅದೇ ಭ್ರಮಹೋತ್ಸವ ದಲ್ಲಿ 150000 ಸಾವಿರಕ್ಕಿಂತ ಜಾಸ್ತಿ ಭಕ್ತಾದಿಗಳಿಗೆ ಊಟವನ್ನು ಬಡಿಸಲಾಗುತ್ತದೆ. ದೇವಸ್ಥಾನದ ಭೋಜನಾಲಯದಲ್ಲಿ 4 ಕೋಣೆಗಳಿವೆ, ಪ್ರತಿ ಕೋಣೆಯಲ್ಲಿ 1000 ಜನರಿಗೆ ಊಟವನ್ನು ಕೊಡಲಾಗುತ್ತದೆ. ಇಲ್ಲಿ 10000 ಕ್ಕಿಂತ ಜಾಸ್ತಿ ಕೆಲಸಗ್ರರಿದ್ದಾರೆ.

ಶಿರಡಿ ಶ್ರೀ ಸಾಯಿ ದೇವಾಲಯ ಮಹಾರಾಷ್ಟ್ರ

ಶಿರಡಿ ಭೋಜನಾಲಯ ಇದು ಭಾರತದಲ್ಲಿಯೇ ಅತಿದೊಡ್ಡ ಸೌರ ಅಡಿಗೆಮನೆಗಳಲ್ಲಿ ಒಂದು. ಬಾಬಾ ಸಾಯಿನಾಥ ಶಿರಡಿಯಲ್ಲಿ ಹಸಿದು ಬಂದವರಿಗೆ ತಮ್ಮ ಕೈ ಇಂದ ಮಾಡಿದ ಅಡಿಗೆಯನ್ನು ಬಡಿಸುತ್ತಿದ್ದರು ಅದೇ ರೀತಿ ಈಗಲೂ ಕೂಡ ಸಾಯಿನಾಥ ಮಂದಿರ ಹಸಿದುಬಂದ ಭಕ್ತರಿಗೆ ಊಟವನ್ನು ನೀಡುತ್ತಿದೆ. ಸಾಯಿ ಸಂಸ್ಥಾನಕ್ಕೆ ಬರುವ ಸಾವಿರಾರು ಭಕ್ತರಿಗೆ ಊಟವನ್ನು ನೀಡುವುದಕೋಸ್ಕರ ಇಲ್ಲಿ ಅನೇಕ ಆಧುನಿಕ ಉಪಕರಣಗಳನ್ನು ಹೊಂದಿದ ಭೋಜನಾಲಯವಿದೆ. ಇದು 4 ಮೇಲ್ಛಾವಣಿಗಳು 73 ಸೌರ ಫಲಕಗಳಿಂದ ಕೂಡಿದ್ದು ಪ್ರತಿಯೊಂದು 16 ಚದರ ಮೀಟರ್ ಗಾತ್ರದ್ದು, ದಿನದಲ್ಲಿ ಸುಮಾರು 40,000 ಊಟ ಮಾಡುವ ಅನುಕೂಲತೆಗಳಿವೆ ಅಷ್ಟೇ ಅಲ್ಲದೇ ತಾಜಾ ಊಟ ಜೊತೆಗೆ ಉಪಹಾರ ಪ್ಯಾಕೆಟ್ಗಳನ್ನು ಬೆಳಿಗ್ಗೆ ಉಚಿತವಾಗಿ ವಿತರಿಸಲಾಗುತ್ತದೆ.

ಅಮೃತಸರ, ಪಂಜಾಬ್ ಗೋಲ್ಡನ್ ಟೆಂಪಲ್:

ವಿಶ್ವದ ಅತೀ ದೊಡ್ಡ ಮತ್ತು ಉಚಿತವಾಗಿ ಊಟ ನೀಡುವ ಬಹು ದೊಡ್ಡ ಅಡಿಗೆಮನೆ ಇಲ್ಲಿದೆ. ಇಲ್ಲಿ ದಿನಕ್ಕೆ 2,00,000 ರೋಟಿಗಳನ್ನ ದಿನನಿತ್ಯ ಮಾಡಲಾಗುತ್ತದೆ ಮತ್ತು 1.5 ಟನ್ ಬೇಳೆ ಸಾರು ತಯಾರು ಮಾಡಲಾಗುತ್ತದೆ, 100 ಎಲ್ಪಿಜಿ ಸಿಲಿಂಡರ್ಗಳನ್ನು ಮತ್ತು 5,000 ಕಿಲೋಗ್ರಾಂಗಳಷ್ಟು ಸೌದೆಯನ್ನು ಪ್ರತಿದಿನವು ಬಳಸುತ್ತದೆ. ಮತ್ತು ಇಲ್ಲಿ 100000 ಜನ ಫ್ರೀ ಆಗಿ ಕೆಲಸಮಾಡುತ್ತಾರೆ. ಇಲ್ಲಿ ಪ್ರತಿ ದಿನ 80000 ಕ್ಕಿಂತ ಜಾಸ್ತಿ ಭಕ್ತರು ಊಟಮಾಡುತ್ತಾರೆ.

ಪುರಿ ಜಗನ್ನಾಥ ದೇವಾಲಯ :

ಒಡಿಶಾದ ಪುರಿ ಜಗನ್ನಾಥ ದೇವಾಲಯದ ಮಹಾ ಪ್ರಸಾದವನ್ನು ಪ್ರತಿನಿತ್ಯ 25000 ಭಕ್ತಾದಿಗಳಿಗೆ ಬಡಿಸಲಾಗುತ್ತದೆ ಮತ್ತು ಹಬ್ಬದ ದಿನಗಳಲ್ಲಿ 100,000 ಜನರಿಗೆ ಊಟ ಬಡಿಸಲಾಗುತ್ತದೆ. ಇಲ್ಲಿ ಇನ್ನೊಂದು ವಿಶೇಷವೇನೆಂದರೆ ದೇವಾಲಯದ ಮಹಾ ಪ್ರಸಾದವನ್ನು ಮೊದಲು ದೇವರಿಗೆ ನ್ಯವೇದ್ಯೆ ಮಾಡಿ ನಂತರ ಭಕ್ತರಿಗೆ ನೀಡಲಾಗುತ್ತದೆ ಮತ್ತು ಇಲ್ಲಿ ಬಡಿಸಲಾಗುವ ಪ್ರಸಾದ ಎಂದೂ ಕಡಿಮೆ ಯಾಗುವುದಿಲ್ಲವಂತೆ. ಒಂದೇ ದಿನದಲ್ಲಿ 8 ಲಕ್ಷ ಲಡ್ಡುಗಳನ್ನು ಮಾಡುವುದರ ಮೂಲಕ ಈ ದೇವಸ್ಥಾನ ಗಿನ್ನಿಸ್ ದಾಖಲೆ ಮಾಡಿದೆ.

ಇಸ್ಕಾನ್‍ನ ಫೌಂಡೇಶನ್ ಅಕ್ಷಯ ಪಾತ್ರ ಯೋಜನೆ

ಇಸ್ಕಾನ್ ಫೌಂಡೇಶನ್ ನ ಅಕ್ಷಯ ಪಾತ್ರೆ ಯೋಜನೆಯು ಸಹ ಲಕ್ಷಾಂತರ ಸಂಖ್ಯೆಯಲ್ಲಿ ಶಾಲೆಯ ಮಕ್ಕಳಿಗೆ ಊಟವನ್ನು ನೀಡುತ್ತಿದ್ದು ಹುಬ್ಬಳ್ಳಿಯ ISCKON ಅಡುಗೆ ಮನೆ 150,000 ಊಟವನ್ನು ಪ್ರತಿ ನಿತ್ಯ ನೀಡುತ್ತಿದೆ. ಅಷ್ಟೇ ಅಲ್ಲ ಇದೀಗ ಭಾರತದ ವಿವಿಧ ಸರಕಾರಿ ಶಾಲೆಗಳಲ್ಲಿ ಉಚಿತವಾಗಿ ಊಟವನ್ನು ನೀಡುತ್ತಿದೆ.

source: forums.bsdinsight.com

Amazon Big Indian Festival
Amazon Big Indian Festival

Copyright © 2016 TheNewsism

To Top