Karnataka

ಕ್ಯಾಂಟೀನ್ ಗೆ ಇಂದಿರಾ ಅಂತ ನಾಮಕರಣ ಅಯ್ತು ಇದೀಗ 100 ಶಾಲೆಗಳಿಗೆ ಇಂದಿರಾ ಹೆಸರು. ನಮ್ಮ ರಾಜ್ಯ ಯಾವ ಮಹನೀಯರು ಸರ್ಕಾರಕ್ಕೆ ನೆನಪಿಲ್ಲ ಅನ್ಸುತ್ತೆ..!

ಹೌದು ರಾಜ್ಯಸರ್ಕಾರ ಚುನಾವಣೆ ಹತ್ತಿರ ಬರುತ್ತಿರುವ ಸಮಯದಲ್ಲೇ ಇಂತಹ ಕೆಲಸಗಳನ್ನು ಮಾಡುತಿದ್ದೆ ಅದು ಹೈಕಮಾಂಡ್ ಮೆಚ್ಚಿಸಲು ಅಷ್ಟೇ ಆದ್ರೆ ನಮ್ಮ ರಾಜ್ಯದ ಯಾವದೇ ಮಹನೀಯರಿಗೆ ಬೆಲೆ ಇಲ್ಲದಂತೆ ಮಾಡಿದ ಸರ್ಕಾರ. ಇತ್ತೀಚಿನ ದಿನದಲ್ಲಿ ಭಟ್ಕಳ ಮಕ್ಕಳ ಅನ್ನವನ್ನು ಕಸಿದುಕೊಂಡ ಸರ್ಕಾರ ಹಸಿವು ಮುಕ್ತ ಕರ್ನಾಟಕ ಅಂತ ಹೇಳುತ್ತಿದೆ.

source: publictv.in

ಇದೇನಾ ಹಸಿವು ಮುಕ್ತ ಕರ್ನಾಟಕ ಅಂತ ಆ ಶಾಲೆಯ ಚಿಕ್ಕ ಮಕ್ಕಳು ತಟ್ಟೆ ಹಿಡಿದು ಪ್ರತಿಭಟನೆ ಮಾಡಿದ್ದು ನಿಮಗೆ ಗೊತ್ತಿರುವ ವಿಚಾರ. ಕ್ಯಾಂಟೀನ್ ವಿಚಾರದಲ್ಲಿ ಹಲವು ನಾಯಕರ ಹೆಸರು ಕೇಳಿ ಬಂದರು ರಾಜ್ಯ ಸರ್ಕಾರ ಅಂತಿಮವಾಗಿ ಇಂದಿರಾ ಕ್ಯಾಂಟೀನ್ ಅಂತ ನಾಮಕರಣ ಮಾಡಿತು ಇದರ ಬೆನ್ನಲೇ ಈಗ ರಾಜ್ಯ ಸರ್ಕಾರದಿಂದ 100 ಶಾಲೆಗಳಿಗೆ ಇಂದಿರಾ ಗಾಂಧಿ ಹೆಸರು ರಾಜ್ಯ ಸರ್ಕಾರದ ವತಿಯಿಂದ ಬೆಂಗಳೂರಲ್ಲಿ `ಇಂದಿರಾ ಕ್ಯಾಂಟೀನ್’ ಗೆ ಇಂದು ಚಾಲನೆ ದೊರೆಯುತ್ತಿರುವ ಬೆನ್ನಲ್ಲೆ, 100 ವಸತಿ ಶಾಲೆಗಳಿಗೆ ರಾಜ್ಯ ಸರ್ಕಾರ ಸದ್ದಿಲ್ಲದೇ ಮರುನಾಮಕರಣ ಮಾಡಿ ಆದೇಶ ಹೊರಡಿಸಿದೆ.

source: publictv.in

ಪರಿಶಿಷ್ಟ ಜಾತಿ 66, ಪರಿಶಿಷ್ಟ 24, ಹಿಂದುಳಿದ ವರ್ಗಕ್ಕೆ ಸೇರಿರೋ 10 ವಸತಿ ಶಾಲೆಗಳು ಸೇರಿ ಒಟ್ಟು 100 ಮೊರಾರ್ಜಿ ದೇಸಾಯಿ ವಸತಿಗಳಿಗೆ `ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ’ಯೆಂದು ಮರುನಾಮಕರಣ ಮಾಡಿ ಆದೇಶಿಸಿದೆ. ಇದಕ್ಕೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಮರುನಾಮಕರಣ ಮಾಡೋವಲ್ಲಿ ಉತ್ಸುಕರಾಗಿ, ಇಲಾಖೆ ಮೂಲಕ ಆದೇಶ ಹೊರಡಿಸಿದ್ದಾರೆ. ಇದನೆಲ್ಲ ನೋಡಿದ್ರೆ ನಮ್ಮ ರಾಜ್ಯ ಸರ್ಕಾರ ತನ್ನ ಹೈಕಮಾಂಡ್ ಮೆಚ್ಚಿಸಲು ಇಂದಿರಾ ಹೆಸರು ಮಾತ್ರ ನಾಮಕರಣ ಮಾಡುತಿದ್ದೆ ಆದ್ರೆ ರಾಜ್ಯದ ಯಾವುದೇ ಮಹನೀಯರು ಮತ್ತು ಹೋರಾಟಗಾರ ಹೆಸರು ಸರ್ಕಾರಕ್ಕೆ ಕಾಣಿಸುತ್ತಿಲ್ಲ.

Amazon Big Indian Festival
Amazon Big Indian Festival

Copyright © 2016 TheNewsism

To Top