Karnataka

ಕನ್ನಡ ಧ್ವದ ಬಣ್ಣ ಹೊಂದಿದ ಚಿಟ್ಟೆಯನ್ನು “ರಾಜ್ಯ ಚಿಟ್ಟೆ” ಎಂದು ಘೋಷಿಸಿದ ರಾಜ್ಯಸರ್ಕಾರ..!

‘ರಾಜ್ಯ ಚಿಟ್ಟೆ’ಯನ್ನು ಘೋಷಿಸಿದ ದೇಶದ 2ನೇ ರಾಜ್ಯ ಕರ್ನಾಟಕವಾಗಿದೆ. ಮಹಾರಾಷ್ಟ್ರವು ‘ಬ್ಲೂ ಮೊರ್ಮನ್’ ಚಿಟ್ಟೆಯನ್ನು ರಾಜ್ಯ ಚಿಟ್ಟೆಯಾಗಿ ಈಗಾಗಲೇ ಘೋಷಿಸಿದೆ. ನಮ್ಮ ದೇಶದ ಅತಿ ದೊಡ್ಡ ಚಿಟ್ಟೆಯಾಗಿರುವ ಸದರ್ನ್ ಬಡ್ ವಿರ್ಂಗ್ (ಟ್ರ್ಯೋಡೆಸ್ ಮಿನೂಸ್) ಅನ್ನು ಕರ್ನಾಟಕದ ‘ರಾಜ್ಯ ಚಿಟ್ಟೆ’ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.

ಕರ್ನಾಟಕದಲ್ಲಿ ಚಿಟ್ಟೆ ಪ್ರಿಯರು ಹಲವು ವರ್ಷಗಳಿಂದ ರಾಜ್ಯದ ಚಿಟ್ಟೆಯೊಂದನ್ನು ಅಧಿಕೃತವಾಗಿ ಘೋಷಿಸುವ ಬೇಡಿಕೆಯನ್ನಿಟ್ಟಿದ್ದರು. ಅದರಂತೆ 2016ರ ಆಗಸ್ಟ್‌ನಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಈ ‘ಸದರ್ನ್ ಬರ್ಡ್‌ವಿಂಗ್’ ಚಿಟ್ಟೆಯನ್ನು ರಾಜ್ಯ ಚಿಟ್ಟೆ ಎಂದು ಘೋಷಿಸಲು ನಿರ್ಣಯ ಕೈಗೊಂಡಿತ್ತು. ಅದಕ್ಕೀಗ ರಾಜ್ಯಪಾಲರ ಆದೇಶದ ರೂಪದಲ್ಲಿ ಅಧಿಕೃತ ಮುದ್ರೆಯನ್ನೊತ್ತಲಾಗಿದೆ. ಇದೀಗ ಅರಣ್ಯ ಇಲಾಖೆ ಈ ಆದೇಶವನ್ನು ಎಲ್ಲಾ ಜಿಲ್ಲಾ, ವಲಯ ಅರಣ್ಯಾಧಿಕಾರಿಗಳಿಗೆ, ವನ್ಯ ಜೀವಿ ಸಂರಕ್ಷಣಾಧಿಕಾರಿಗಳಿಗೆ ಅಧಿಕೃತ ಮಾಹಿತಿಗಾಗಿ ಕಳುಹಿಸಿದೆ.

ಈ ಚಿಟ್ಟೆ ಕರ್ನಾಟಕದಲ್ಲೇ ಹೆಚ್ಚು;
‘ಸದರ್ನ್ ಬರ್ಡ್ ವಿಂಗ್’ ದಕ್ಷಿಣ ಭಾರತ ಅದರಲ್ಲೂ ಕರ್ನಾಟಕ ರಾಜ್ಯದಲ್ಲಿ ಈ ಚಿಟ್ಟೆ ಸಾಕಷ್ಟು ಸಂಖ್ಯೆಯಲ್ಲಿದೆ. ಪಶ್ಚಿಮಘಟ್ಟದ ನಿತ್ಯ ಹಸುರಿನ ಕಾಡು, ಕರಾವಳಿ ಮತ್ತು ಬಯಲು ಪ್ರದೇಶಗಳೆಲ್ಲದರಲ್ಲಿ ಈ ಚಿಟ್ಟೆಗಳು ಯಥೇಚ್ಛವಾಗಿ ಕಾಣಸಿಗುತ್ತವೆ. ನೋಡಲು ಆಕಷ್ಟಕವಾಗಿರುವ ಈ ಚಿಟ್ಟೆ ಸಾಧಾರಣವಾಗಿ 140-150 ಮಿ.ಮೀ. ಅಗಲವಿರುತ್ತದೆ. 160 ಮಿ.ಮೀ. ಅಗಲ ಬೆಳೆದ ದಾಖಲೆಯೂ ಇದೆ. ಅದಕ್ಕಾಗಿಯೇ ಇದನ್ನು ಬಡ್ ವಿರ್ಂಗ್ ಚಿಟ್ಟೆ (ಹಕ್ಕಿಯ ರೆಕ್ಕೆ) ಎಂದು ಕರೆಯಲಾಗುತ್ತದೆ.

ಈ ಚಿಟ್ಟೆಯ ರೆಕ್ಕೆಯಲ್ಲಿದೆ ಕನ್ನಡ ಧ್ವದ ಬಣ್ಣ;
ಕರ್ನಾಟಕ ರಾಜ್ಯ ಈ ಚಿಟ್ಟೆಯನ್ನು ಆರಿಸುವುದಕ್ಕೆ ಮುನ್ನ ಹಲವು ಜಾತಿಯ ಚಿಟ್ಟೆಗಳನ್ನು ಶಿಫಾರಸು ಮಾಡಲಾಗಿತ್ತು. ಆದರೆ ಸದರ್ನ್ ಬರ್ಡ್‌ವಿಂಗ್ ಚಿಟ್ಟೆಯ ರೆಕ್ಕೆಗಳಲ್ಲಿ ಕೆಂಪು( ಈ ಬಣ್ಣ ರೆಕ್ಕೆಗಳು ಮಡಚಿದ್ದಾಗ ಮಾತ್ರ ಚುಕ್ಕೆಯ ರೀತಿಯಲ್ಲಿದೆ) ಮತ್ತು ಹಳದಿ ಬಣ್ಣ ಇದ್ದು, ಅದು ಕರ್ನಾಟಕ ರಾಜ್ಯದ ಕೆಂಪು ಹಳದಿ ಧ್ವಜವನ್ನು ಹೋಲುತ್ತದೆ. ಇದೇ ಕಾರಣಕ್ಕಾಗಿ ಅದು ನಮ್ಮ ರಾಜ್ಯ ಚಿಟ್ಟೆಯನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ.

Comments

comments

Amazon Big Indian Festival
Click to comment

Leave a Reply

Your email address will not be published. Required fields are marked *

Amazon Big Indian Festival
To Top