Karnataka

ಪ್ಯಾಂಟ್ ಹಾಕುತ್ತಿದ್ದ ಸಿದ್ದರಾಮಯ್ಯನವರು ಪಂಚೆ ಉಡಲು ಶುರು ಮಾಡಿದ್ದು ಏಕೆ?

ಮುಖ್ಯ ಮಂತ್ರಿಗಳೇ ಬಿಚ್ಚಿಟ್ಟ ಪಂಚೆ ರಹಸ್ಯ..

ಎಲ್ಲರಿಗೂ ತಿಳಿದಿರುವಂತೆ ನಮ್ಮ ಮುಖ್ಯ ಮಂತ್ರಿಗಳು ಸದಾ ಪಂಚೆ ವೇಷಧಾರಿ, ಇವರ ಈ ರೀತಿಯ ಡ್ರೆಸ್ಸಿಂಗ್ ಸ್ಟೈಲ್ ಅನ್ನು ಇಷ್ಟ ಪಡುವವರು ಇದ್ದಾರೆ.. ಹಾಗೆ ಇರಿಸು ಮುರಿಸು ಮಾಡಿಕೊಂಡವರೂ ಇದ್ದಾರೆ.. ಇನ್ನೂ ಹೇಳಬೇಕೆಂದರೆ ಇವರು ದೇವೇ ಗೌಡರ ಸ್ಟೈಲ್ ಅನ್ನೂ ಕಾಪಿ ಮಾಡುತ್ತಿದ್ದಾರೆ ಎಂಬ ಮಾತುಗಳು ಉಂಟು..

ಆದರೆ ಇದೆಲ್ಲದರ ಹಿಂದೆ ಒಂದು ರೋಚಕ ಕಥೆಯೇ ಇದೆ.. ಸ್ವತಃ ಸಿದ್ದರಾಮಯ್ಯನವರೇ ಬಿಚ್ಚಿಟ್ಟಿರುವ ಗುಟ್ಟು ಇದು.. ಎಲ್ಲರಂತೆ ತಾವೂ ಸಹ ಪ್ಯಾಂಟ್ ಹಾಕುತ್ತಿದ್ದರು.. ಹೀಗಿರುವಾಗ ಹಲವು ವರ್ಷಗಳ ಹಿಂದೆ ತಮಗೆ ಚರ್ಮ ಖಾಯಿಲೆಯೊಂದು ಕಾಣಿಸಿಕೊಂಡಿತ್ತು.. ನೋವು ತಡೆಯುವುದು ಸ್ವಲ್ಪ ಕಷ್ಟವೇ ಆಗಿತ್ತು.. ನೋವು ತಡೆಯಲಾಗದೆ ಎಷ್ಟೊ ಡಾಕ್ಟರ್ ಗಳಿಗೆ ತೋರಿಸಿದರೂ ಗುಣವಾಗಲಿಲ್ಲ.. ನಾಟಿ ಔಷಧೀಯ ಪ್ರಭಾವವು ಬೀರಲಿಲ್ಲ.. ಚಳಿಗಾಲದಲ್ಲಿ ಹೆಚ್ಚಾಗುತ್ತಿದ್ದ ತುರಿಕೆ ತಡೆಯಾಲಾರದೆ ನೋವನ್ನು ಅನುಭವಿಸುತ್ತಿದ್ದರು..

ಇದೇ ಸಂಧರ್ಭದಲ್ಲಿ ಒಬ್ಬ ಪುಣ್ಯಾತ್ಮ ಡಾಕ್ಟರ್ ಸಿಕ್ಕು ಒಂದು ಸಲಹೆ ಕೊಟ್ಟರು.. ಸಿದ್ದರಾಮ್ಯಾನವರಿಗೆ ಮೊದಲು ಪ್ಯಾಂಟ್ ತೆಗೆದು ಪಂಚೆ ಉಡಲು ಶುರು ಮಾಡಿ ಸರ್ ಎಂದರು.. ಅವರ ಸಲಹೆ ಮೇರೆಗೆ ಪಂಚೆ ಉಡಲು ಶುರು ಮಾಡಿದರು ನಮ್ಮ ಮುಖ್ಯ ಮಂತ್ರಿಗಳು.. ಅವರ ಚರ್ಮ ಖಾಯಿಲೆ ನಿಧಾನವಾಗಿ ಗುಣಮುಖವೂ ಆಯಿತು.. ಆದರೆ ಪಂಚೆ ಉಟ್ಟು ಅಭ್ಯಾಸ ವಾಗಿಬಿಟ್ಟಿದ್ದರಿಂದ ಅದನ್ನೇ ಮುಂದುವರೆಸಿಕೊಂಡು ಬಂದರು.. ಮತ್ತೆ ಎಲ್ಲಿ ರೋಗ ಬರುವುದು ಎಂಬ ಭಯವೂ ಕೂಡ ಅವರಿಗಿತ್ತು..

ಹಾಗಂತ ಅವರೇನೂ ಪ್ಯಾಂಟ್ ಹಾಕುವುದೇ ಇಲ್ಲವೆಂದೇನಿಲ್ಲ.. ಈಗಲೂ ಫಾರಿನ್ ವಿಸಿಟ್ ಹೋಗುವಾಗ, ಅಲ್ಲಿಯ ನಡವಳಿಕೆಗೆ ಹೊಂದಿಕೊಳ್ಳಬೇಕೆಂದು ಪ್ಯಾಂಟ್ ಹಾಕುವುದೂ ಉಂಟು.. ಈಗಲೂ ಅದನ್ನೂ ನೆನಸಿಕೊಂಡು ಹಾಸ್ಯ ಮಾಡುತ್ತಾ, ಪಂಚೆ ಹಾಕುದ್ರೆ ವೆಂಟಿಲೇಶನ್ ಚನಾಗ್ ಆಗತ್ತೆ ಕಣ್ರಯ್ಯ ಅಂತಾರೆ ನಮ್ಮ ಮುಖ್ಯ ಮಂತ್ರಿಗಳು.

Amazon Big Indian Festival
Amazon Big Indian Festival
To Top