My Story

ಕಾಲೇಜ್ ಎಂಬ ಖತರ್ನಾಕ್ ಲೈಫ್ (ಸರಣಿ ಸಂಚಿಕೆ).. ಓದಿ ನಿಮ್ಮ ಫ್ರೆಂಡ್ಸ್ ಗಳಿಗಾಗಿ ಶೇರ್ ಮಾಡಿ

ಕಾಲೇಜ್ ಎಂಬ ಖತರ್ನಾಕ್ ಲೈಫ್ ..1

(ಸರಣಿ ಸಂಚಿಕೆಯಲ್ಲಿ ನಿಮ್ಮ ಮುಂದೆ….ತಪ್ಪದೇ ಫಾಲೋ ಮಾಡಿ ನಿಮ್ಮನ್ನು ನೀವು ಕಾಣಬಹುದು..)

ನಮಸ್ಕಾರ ಗೆಳೆಯರೆ ಮೊದಲನೆ ಬಾರಿಗೆ ಕಾಲೇಜ್ ಎಂಬ ಖತರ್ನಾಕ್ ಲೋಕ ಶುರು ಮಾಡುತ್ತಿದ್ದೇನೆ.. 10 ಸಂಚಿಕೆಗಳಲ್ಲಿ ಬರುವ ಈ ಲೇಖನಿ ನಿಮ್ಮನ್ನು ನಿಮಗೆ ನೆನಪಿಸುವುದು ಗ್ಯಾರಂಟಿ.. ದಿನವೂ ತಪ್ಪದೇ ನೋಡಿ ಶೇರ್ ಮಾಡಿ..
ಶಾಲೆಯ ಆ ಕೊನೆ ದಿನಗಳನ್ನು ಒಮ್ಮೆ ನೆನಪಿಸಿಕೊಳ್ಳೊಣ.. ಶಾಲೆಯ ತುಂಬಾ ಸರಸ್ವತಿ ಪೂಜೆ ಮಾಡುವ ತಯಾರಿ.. ನಮಗೊ ಪೂಜೆಯ ದಿನ ಯಾವ ಬಟ್ಟೆ ಹಾಕಿಕೊಂಡು ಬರುವುದು ಎಂಬ ಚಿಂತೆ, ಇರುವ ಹೊಸ ಬಟ್ಟೆಯನ್ನು ಮೊನ್ನೆ ಮೊನ್ನೆ ಯುಗಾದಿಗೆ ಹಾಕಿಕೊಂಡುಬಿಟ್ಟಿನ್ನಲ್ಲ ಎಂಬ ಕೊರಗು.. ಇರಲಿ ನೋಡುವ ಅಂದುಕೊಂಡು ನಮ್ಮ ಪಾಡಿಗೆ ಗ್ರೌಂಡ್ ನಲ್ಲಿ ಕ್ರಿಕೇಟ್ ಆಡಲು ಹೋದೆವು.. ಏಕೆಂದರೆ ಪೂಜೆ ತಯಾರಿ ಹೆಣ್ಣು ಮಕ್ಕಳದ್ದಲ್ಲವೇ?

ಹಾಗೇ ಎರಡು ದಿನ ಉರುಳಿತು, ಪೂಜೆಯ ದಿನವೂ ಬಂದಿತು ಶಾಲೆಗೆ ಸೈಕಲ್ ತೆಗೆದುಕೊಂಡು ಹೋಗುವ ಆ ನಮ್ಮ ನೆನಪು ಅತ್ಯಂತ ಸುಮಧುರ..ಹೋದ ತಕ್ಷಣ ನಮ್ಮ ಟೀಚರ್ ಗಳನ್ನೆಲ್ಲ ಒಮ್ಮೆ ಕಣ್ಣಾಯಿಸಿ, ನಮ್ಮ ಹುಡುಗಿ ಯಾವ ರೀತಿ ಬಂದಿರುವಳೊ ಎಂಬ ಕಾತುರದಿಂದ ಕ್ಲಾಸ್ ರೂಮ್ ಗೆ ಓಡುತ್ತಿದ್ದೆವು.. ಅಲ್ಲೊ ಹುಡುಗಿಯರ ಗುಂಪು ರಂಗೋಲಿ ಬಿಡಿಸುತ್ತಾ ಗಾಸಿಪ್ ಗಳನ್ನು ಮಾತನಾಡಿಕೊಳ್ಳುತ್ತಿದ್ದರು.. ಎಷ್ಟೇ ಆದರೂ ಹೆಣ್ಣು ಮಕ್ಕಳ ಹುಟ್ಟು ಗುಣ ಅದೇ ಅಲ್ಲವೇ?? ಕೊನೆಗು ನಮ್ಮ ನಮ್ಮ ಹುಡುಗಿಯರ ದರ್ಶನವಾಯಿತು.. ಮನಸ್ಸಲ್ಲೇನೊ ಮುಲ ಮುಲ.. ಹೇಳಿ ಕೇಳಿ ಆಗ್ ತಾನೆ ಮೀಸೆ ಚಿಗುರಿರುತ್ತದಲ್ಲವೆ.. ಪೂಜೆ ಮುಗೀತು ಪಾಸ್ ಮಾಡ್ಸಪ್ಪ ದೇವ್ರೆ ಅಂತ ಕೇಳಿಕೊಂಡಿದ್ದು ಆಯ್ತು.. ಗ್ರೂಪ್ ಫೋಟೊ ತೆಗ್ಸಿದ್ದು ಆಯ್ತು.. ಹೆಣ್ ಮಕ್ಕಳೆಲ್ಲಾ ಗುಳೋ ಅಂತ ಅಳ್ತಿದ್ದನ್ನ ನೋಡಿದರೆ ಅಯ್ಯೊ ಪಾಪ ಅನ್ಸಿದ್ರೂ ನಗು ಬರ್ತಾಇತ್ತು.. ನಮ್ಮದೊ ಪಾಸ್ ಆದ್ಮೇಲೆ ಯಾವ ಕಾಲೇಜ್ ಗೆ ಸೇರಿಕೊಳ್ಳೋದು ಅಂತ ಯೋಚನೆ ಆಗಿಬಿಟ್ಟಿತ್ತು..

ರಿಸಲ್ಟು ಬಂತು ಪಾಸು ಆಯ್ತು.. ಕೆಲವರು ಪಿ ಯು ಸಿ ಕೆಲವರು ಡಿಪ್ಲೊಮಾ ಸೇರಿಕೊಂಡ್ವಿ..

ಕಾಲೇಜ್ ನ ಮೊದಲನೆ ದಿನ ಹಳೇ ಕ್ರಶ್ ಗಳನ್ನೆಲ್ಲಾ ಮರೆತು ಇನ್ಮುಂದೆ ಚನ್ನಾಗ್ ಓದಬೇಕು.. ಒಳ್ಳೆ ಮಾರ್ಕ್ಸ್ ತಗೊಂಡು ಇಂಜಿನಿಯರಿಂಗ್ ಜಾಯ್ನ್ ಆಗಬೇಕು ಅಂತ ಅಂದುಕೊಂಡಿದ್ದಷ್ಟೆ ಆದರೆ ಕಾಲೇಜ್ ಗೆ ಹೋದಮೇಲೆ ಆಗಿದ್ದೇ ಬೇರೆ……..

ಮುಂದುವರೆಯುವುದು ಮುಂದಿನ ಸಂಚಿಕೆಯಲ್ಲಿ……

Amazon Big Indian Festival
Amazon Big Indian Festival
To Top