Achivers

ಓದಿದ್ದು MTECH.. ಸಿಕ್ಕಿದ್ದು‌ ಸರ್ಕಾರಿ ರೈಲ್ವೆ ಆಫೀಸರ್ ಕೆಲಸ ಆದರೆ ಇವರು ಮಾಡುತ್ತಿರುವ ಕೆಲಸ ಸಮಾಜ ಸೇವೆ.. ಯಾರಿವರು??. ಎಲೆ ಮರೆ ಕಾಯಿಯಂತೆ ಸಮಾಜ ಸೇವೆ ಮಡುತ್ತಿರುವ ಸುನಿತಾ ಮಂಜುನಾಥ್ ರವರ ಬಗ್ಗೆ ನಿಮಗೆಷ್ಟು ಗೊತ್ತು?

ಹೌದು ಚೆನ್ನಾಗಿ ಓದಿಕೊಂಡು ದುಡ್ಡು ಮಾಡಿದರೆ ಸಾಕು ಎಂದು ಚಿಂತಿಸುವವರ ಕಾಲವಿದು.. ಆದರೆ ಇಲ್ಲೊಬ್ಬ ಮಹಿಳೆ ಇದ್ದಾರೆ ಇಂಜಿನಿಯರಿಂಗ್ ಮುಗಿಸಿ M Tec ಕೂಡ ಮಾಡಿ ಸಿಕ್ಕಿದ್ದ ಸರ್ಕಾರಿ ಕೆಲಸವನ್ನು ತ್ಯಜಿಸಿ ಸ್ವಲ್ಪವೂ ಅಹಂಕಾರವಿಲ್ಲದೇ ತಾ ಮಾಡುವ ಕೆಲಸದಿಂದ ಸಮಾಜಕ್ಕೆ ಒಳಿತಾದರೆ ಸಾಕು ಎಂದು ಎಲೆ ಮರೆ ಕಾಯಿಯಂತೆ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ..


ಇವರು ಬೇರೆ ಯಾರೂ ಅಲ್ಲ ಹೆಬ್ಬಾಳ ಕಾನ್ಟಿಟ್ಯುಯೆನ್ಸಿಯ ಬಿಜೆಪಿ ಮಹಿಳಾ ಅಧ್ಯಕ್ಷರಾದ ಸುನಿತಾ ಮಂಜುನಾಥ್ ರವರು.. ಓದಿದ್ದು MTech ಆದರೆ ಮಾಡುತ್ತಿರುವ ಕೆಲಸ ಸಮಾಜ ಸೇವೆ… ಹೌದು ಮೊನ್ನೆ ಮೊನ್ನೆ ತಾನೆ ಮಾನವ ಕಂಪ್ಯೂಟರ್ ಎಂದೇ ಹೆಸರುವಾಸಿಯಾದ ಕಣ್ಣು ಕಾಣದ ಬಸವರಾಜ್ ಉಮ್ರಾನಿಯವರಿಗೆ ಸಹಾಯ ಮಾಡಿ ಅವರ ಬದುಕಿಗೆ ಬೆಳಕಾಗಿದ್ದಾರೆ.. ತಮ್ಮದೇ ರಾಧಾಕೃಷ್ಣ ಶಾಲಾ ಟ್ರಸ್ಟ್ ಹೊಂದಿರುವ ಇವರು ತಮ್ಮ ಟ್ರಸ್ಟ್ ಮೂಲಕ ಅನೇಕ ಸಮಾಜ ಸೇವೆಗಳನ್ನು ಮಾಡುತ್ತಿದ್ದಾರೆ..

ನೂರಾರು ಶಿಕ್ಷಕರನ್ನು ಸನ್ಮಾನಿಸುವುದರ ಮೂಲಕ ಗುರು ಭಕ್ತಿಯ ಹಿರಿಮೆಯನ್ನು ತೊರಿಸಿಕೊಟ್ಟಿದ್ದಾರೆ.. ಈಗಾಗಲೆ ಹೆಬ್ಬಾಳಿನಲ್ಲಿ ತೊಂದರೆ ಎಂದು ಇವರ ಬಳಿ ಹೋದರೆ ಪರಿಹಾರ ಕೊಡದೇ ವಾಪಸ್ ಕಳುಹಿಸಿದ ಉದಾಹರಣೆಗಳೇ ಇಲ್ಲ.. ಜೊತೆಗೆ ಅಳಿವಿನ ಅಂಚಿಗೆ ಹೋಗುತ್ತಿರುವ ಗುಬ್ಬಚ್ಚಿಗಳ ರಕ್ಷಣೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅರಿವು ಮೂಡಿಸುತಿದ್ದಾರೆ.. ಸಮಾಜದ ಬಗ್ಗೆ ಅತೀವ ಕಾಳಜಿ ಇರುವ ಇಂತಹ ಯಂಗ್ ಲೀಡರ್ ಗಳು ಸಮಾಜದ ಕಣ್ಣಿಗೆ ಕಾಣಬೇಕು ಎಂಬುದೇ ನಮ್ಮ ಉದ್ದೇಶ..

ಕಣ್ಣೀರು ಸುರಿಸುವುದರಿಂದ ಯಾವುದೂ ಸಾಧ್ಯವಿಲ್ಲ,
ಆದರೆ, ಬೆವರು ಸುರಿಸುವುದರಿಂದ ಮಾತ್ರ ಚರಿತ್ರೆ ಸೃಷ್ಟಿಸಬಹುದು.

ಎಂದು ದಿಟ್ಟವಾಗಿ ಮಾತನಾಡುವ ಇವರು ಮಾಡುವ ಕೆಲಸದಲ್ಲಿ ನಿಖರರಾಗಿದ್ದಾರೆ ಎಂದು ಹೇಳಬಹುದು.. ಏನೇ ಆಗಲಿ ನಮ್ಮ ನಾಡಿನ ಹೆಣ್ಣು ಮಗಳ ಈ ರೀತಿಯ ಒಳ್ಳೆಯ ಕೆಲಸ ಹೀಗೆ ಮುಂದುವರೆಯಲಿ.. ಶುಭಾವಾಗಲಿ ಎಂದು ಹಾರೈಸೋಣ..

Amazon Big Indian Festival
Amazon Big Indian Festival
To Top