Astrology

ನಿತ್ಯ ಭವಿಷ್ಯ ಅಕ್ಟೋಬರ್ 17, 2017 (ಮಂಗಳವಾರ)

 

ಮೇಷ

01-Mesha

ಇದ್ದಕ್ಕಿದ್ದಂತೆ ಭೂತಕಾಲಕ್ಕೆ ಜಾರಿಬಿಡುವಿರಿ. ಹಿಂದಿನ ನಿರ್ಧಾರಗಳ ಪರಾಮರ್ಶೆ ಮಾಡಿಕೊಳ್ಳುವಿರಿ. ತಪ್ಪು ನಿರ್ಧಾರಗಳ ಬಗ್ಗೆ ಕೊರಗುತ್ತ ಕೂಡುವ ಸಮಯವಲ್ಲ. ಸಮಯವನ್ನು ವ್ಯರ್ಥ ಮಾಡದೆ ಮುಂದಿನ ನಡೆ ಬಗ್ಗೆ ಗಮನ ಕೊಡುವುದು ಒಳ್ಳೆಯದು.

ವೃಷಭ

02-Vrishabha

ಕೆಲಸದ ಒತ್ತಡಗಳಲ್ಲಿ ಸಿಟ್ಟಿನಿಂದ ಮಾತನಾಡುವಿರಿ. ಇದರಿಂದ ನಿಮ್ಮ ಸುತ್ತಮುತ್ತಲಿನ ವಾತಾವರಣ ಕೆಟ್ಟುಹೋಗುವುದು. ಆದಷ್ಟು ತಾಳ್ಮೆಯಿದ್ದರೆ ಒಳ್ಳೆಯದು. ತಾಳಿದವನು ಬಾಳಿಯಾನು ಎಂಬುದನ್ನು ಮರೆಯದಿರಿ.

ಮಿಥುನ

03-Mithuna

ನಿಮ್ಮ ಸಾಮರ್ಥ್ಯ‌ವನ್ನು ಒರೆಗೆ ಹಚ್ಚುವ ಸಂದರ್ಭ ಬರಬಹುದು. ನಿಮ್ಮ ಯಶಸ್ಸು ಕೆಲವರ ಅಸೂಯೆಗೂ ಕಾರಣ ಆದೀತು. ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಮಾನಸಿಕವಾಗಿ ಸಿದ್ಧರಾಗಿರಿ. ಇದರಿಂದ ನಿಮಗೆ ಒಳಿತಾಗುವುದು.

ಕಟಕ

04-Kataka

ಬೌದ್ಧಿಕ ಕೆಲಸಗಳನ್ನು ಮಾಡುವವರಿಗೆ ಒಳ್ಳೆಯ ದಿನ. ವೃತ್ತಿಯಲ್ಲಿ ಮತ್ತು ವೇತನ ವಿಚಾರದಲ್ಲಿ ಬಡ್ತಿ ದೊರೆಯುವ ಸಾಧ್ಯತೆ. ಅದಕ್ಕೆ ಪೂರಕವಾಗಿ ಜವಾಬ್ದಾರಿಯು ಹೆಚ್ಚಾಗುವುದು. ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿರಿ.

ಸಿಂಹ

05-Simha

ನಿಮ್ಮ ಯೋಚನೆ, ಯೋಜನೆಗಳೆಲ್ಲ ಸರಿ ಇವೆ. ಸಮಸ್ಯೆ ಇರುವುದು ಅದರ ಅನುಷ್ಠಾನದಲ್ಲಿ. ಯೋಜನೆಗಳನ್ನು ಕಾರ್ಯಗತಗೊಳಿಸಲು ಇಂದೂ ಮುಂದಾಗದಿದ್ದರೆ ಬಹುದೊಡ್ಡ ಅವಕಾಶವನ್ನು ಕಳೆದುಕೊಳ್ಳುವಿರಿ. ಹಣಕಾಸಿನ ಸ್ಥಿತಿ ಉತ್ತಮ.

ಕನ್ಯಾ

06-Kanya

ಆತ್ಮವಿಶ್ವಾಸದಿಂದ ಪುಟಿಯುತ್ತಿದ್ದೀರಿ. ಸವಾಲುಗಳನ್ನು ಎದುರಿಸಲು ಸಜ್ಜಾಗಿರುವಿರಿ. ಇಂದು ಕಚೇರಿಯಲ್ಲಿ ನಿಮ್ಮ ಬಗ್ಗೆ ಧನಾತ್ಮಕ ಭಾವನೆ ಬೆಳೆಯಲು ಕಾರಣವಾಗುತ್ತದೆ. ಕಾರ್ಯ ನಿಮಿತ್ತ ಅಲ್ಪ ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ.

ತುಲಾ

07-Tula

ಅದೃಷ್ಟ ನಿಮ್ಮ ಹಿಂದೆಯೇ ಇದೆ. ಕೊಂಚ ಪರಿಶ್ರಮ ಪಟ್ಟರೆ, ತುಸು ಯೋಚಿಸಿ ಮುಂದಡಿ ಇಟ್ಟರೆ ಸುಂದರ ಭವಿಷ್ಯ ರೂಪಿಸಿಕೊಳ್ಳುವ ಎಲ್ಲಾ ಅವಕಾಶಗಳು ನಿಮ್ಮೆದುರು ಇವೆ. ಒಮ್ಮೆ ನಿರ್ಧಾರ ಕೈಗೊಂಡ ಮೇಲೆ ಹಿಂದೆಮುಂದೆ ಯೋಚಿಸಬೇಡಿರಿ.

ವೃಶ್ಚಿಕ

08-Vrishika

ಯಾರೊಂದಿಗೂ ವಾದ ವಿವಾದಕ್ಕೆ ಮುಂದಾಗಬೇಡಿ. ಉದ್ವೇಗದಲ್ಲಿ ಬಾಯಿತಪ್ಪಿ ಆಡುವ ಸಣ್ಣ ಮಾತೇ ದೊಡ್ಡ ಜಗಳಕ್ಕೆ ನಾಂದಿ ಹಾಡುವ ಅಪಾಯವಿದೆ. ಸಣ್ಣಪುಟ್ಟ ನಿರಾಶೆ ಕಾಡಬಹುದು. ಆಂಜನೇಯ ಸ್ತೋತ್ರವನ್ನು ಪಠಿಸಿರಿ.

ಧನು

09-Dhanussu

ಇದು ಪರಿವರ್ತನೆಯ ಸಮಯ. ಶುರುವಿನಲ್ಲಿ ನಿಮಗೆ ಕಿರಿಕಿರಿ ಅನ್ನಿಸಬಹುದು. ಆದರೆ ಭವಿಷ್ಯದ ದೃಷ್ಟಿಯಿಂದ ನಿಮಗಿದು ಯಶಸ್ಸಿನ ದೊಡ್ಡ ಮೆಟ್ಟಿಲು. ಅವಿವಾಹಿತರಿಗೆ ಸಂಗಾತಿಯ ಆಯ್ಕೆಯ ಅವಕಾಶಗಳು ಲಭಿಸುವುದು.

ಮಕರ

10-Makara

ವೃತ್ತಿ ಜೀವನದಲ್ಲಿ ಕೊಂಚ ಎಚ್ಚರ ಅಗತ್ಯ. ಸಣ್ಣಪುಟ್ಟ ವಿವಾದಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಮೇಲಧಿಕಾರಿಗಳಿಂದ ತರಾಟೆಗೆ ಒಳಗಾಗುವ ಸಂಭವ ಇದೆ. ಅರೆಕ್ಷ ಣದ ನಿರ್ಲಕ್ಷ ವೂ ದೊಡ್ಡ ಪ್ರಮಾದಕ್ಕೆ ಕಾರಣವಾಗುವುದು.

ಕುಂಭ

11-Kumbha

ನಿಮಗೆ ಡಬಲ್‌ ಬೋನಸ್‌. ಮನೆ ಮತ್ತು ಕಚೇರಿ ಎರಡೂ ಕಡೆ ಸಂತೋಷದ ಸಮಾಚಾರಗಳನ್ನು ಆಲಿಸುವ ಸಂದರ್ಭವಿದೆ. ಸ್ವಂತ ವಹಿವಾಟು ನಡೆಸುತ್ತಿರುವವರಿಗೆ ಅಚ್ಚರಿಯ ರೀತಿಯಲ್ಲಿ ಲಾಭವಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಮೀನ

12-Meena

ಸದಾ ನಿಮ್ಮ ವಿರುದ್ಧ ಮಾತನಾಡುತ್ತಿದ್ದ ಗೆಳೆಯನು ತನ್ನ ತಪ್ಪಿನ ಅರಿವಾಗಿ ನಿಮ್ಮ ಬಳಿ ಕ್ಷ ಮೆ ಯಾಚಿಸಲು ಬರುವನು. ಸಾಧ್ಯವಾದರೆ ಅವನನ್ನು ಕ್ಷ ಮಿಸಿಬಿಡಿ. ಸಮಾಜದಲ್ಲಿ ನಿಮಗೂ ಗೌರವ ಉಂಟಾಗುವುದು.

Amazon Big Indian Festival
Amazon Big Indian Festival

Copyright © 2016 TheNewsism

To Top