Karnataka

ಕೇರಳದವರಾದರು ಕನ್ನಡದ ಹಾಡುಗಳನ್ನು ಸುಲಲಿತವಾಗಿ ಹಾಡಿದ ಗಾನ ಕೋಗಿಲೆ ಸ್ ಜಾನಕೀ ಅವರ ಕೊನೆಯ ಕಾರ್ಯಕ್ರಮದ ಬಗ್ಗೆ ತಿಳಿದುಕೊಳ್ಳಿ

ದಕ್ಷಿಣ ಭಾರತದ ಗಾನ ಕೋಗಿಲೆ, ಗಾನ ಸರಸ್ವತಿ, ಗಾನ ಸಾಮ್ರಾಜ್ಞಿ ಅಂತಾನೇ ಖ್ಯಾತಿ ಗಳಿಸಿರುವ ಎಸ್ ಜಾನಕಿ ಅವರು ಇನ್ಮುಂದೆ ಹಾಡೋದಿಲ್ಲ ಅಂತ ಘೋಷಣೆ ಮಾಡಿದ್ದಾರೆ. 78 ವರ್ಷದ ಹಿರಿಯ ಗಾಯಕಿ ಕಳೆದ 65 ವರ್ಷಗಳ ಸುದೀರ್ಘ ಗಾನ ಪಯಣವನ್ನು ನಿಲ್ಲಿಸುವ ಬಗ್ಗೆ ಹೇಳಿಕೊಂಡಿದ್ದರು. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಅಲ್ಲದೆ, ಬೆಂಗಾಲಿ, ಒರಿಯಾ, ಇಂಗ್ಲೀಷ್, ಕೊಂಕಣಿ, ತುಳು, ಸೌರಾಷ್ಟ್ರ, ಜಪಾನೀಸ್ ಹಾಗೂ ಜರ್ಮನ್ ಭಾಷೆಯಲ್ಲೂ ಹಾಡಿದ ಸಾಧನೆ ಮಾಡಿದ್ದಾರೆ. ಎಸ್ ಪಿ ಬಾಲಸುಬ್ರಮಣ್ಯಂ ಅಲ್ಲದೆ ಘಂಟಸಾಲ, ಡಾ.ರಾಜ್ ಕುಮಾರ್, ಕೆ ಜೆ ಯೇಸುದಾಸ್, ಪಿಬಿ ಶ್ರೀನಿವಾಸ್ ಅವರ ಜೊತೆ ದನಿಗೂಡಿಸಿದ್ದಾರೆ.

ಎಸ್.ಜಾನಕಿ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಅ.28ರಂದು ಸಂಜೆ 6 ಗಂಟೆಗೆ ಇಲ್ಲಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಗಾಯಕಿ ಎಸ್.ಜಾನಕಿ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ಅವರ ಜೀವನದ ಕೊನೆಯ ಕಾರ್ಯಕ್ರಮವಾಗಲಿದೆ. 6 ತಿಂಗಳ ಹಿಂದೆಯೇ ಅವರು ಸಾರ್ವಜನಿಕ ಕಾರ್ಯಕ್ರಮ ನೀಡುವುದಿಲ್ಲ ಎಂದು ಹೇಳಿದ್ದರು. ಸತತವಾಗಿ ಅವರಲ್ಲಿ ಮನವಿ ಮಾಡಿದ ಫಲವಾಗಿ ಕಾರ್ಯಕ್ರಮ ನೀಡಲು ಒಪ್ಪಿದ್ದು, 60 ವರ್ಷಗಳ ಕಾಲ ತಮ್ಮ ಗಾಯನದ ಮೂಲಕ ಸಂಗೀತ ಪ್ರಿಯರಿಗೆ, ಜನರಿಗೆ ರಸದೌತಣ ಉಣಬಡಿಸಿದ ಹಿರಿಯ ಗಾಯಕಿ ಇನ್ನು ಮುಂದೆ ಕಾರ್ಯಕ್ರಮ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ ಯಾವುದೇ ಟಿವಿ ವಾಹಿನಿಗಳಿಗೆ ಸಂದರ್ಶನ ಅಥವಾ ಯಾವುದೇ ಸಂಗೀತ ಕಾರ್ಯಕ್ರಮವನ್ನು ಕೂಡ ನೀಡುವುದಿಲ್ಲ ಎಂದು ಹೇಳಿದ್ದಾರೆ. 65 ವರ್ಷಗಳ ಹಿಂದೆ ಜಿ.ಕೆ. ವೆಂಕಟೇಶ್ ಅವರ ಸಂಗೀತ ನಿರ್ದೇಶನದಡಿಯಲ್ಲಿ 1952 ರಲ್ಲಿ ಮೈಸೂರು ವಿಶ್ವವ್ಯಾಧಿಯಾಲಯದಲ್ಲಿ ಪಿ.ಬಿ.ಶ್ರೀನಿವಾಸ್ ಅವರೊಂದಿಗೆ ವೇದಿಕೆಯಲ್ಲಿ ಎಸ್. ಜಾನಕಿ ಹಂಚಿಕೊಂಡಿದ್ದರು. ಜಾನಕಮ್ಮ ಅದೇ ಸ್ಥಳದಲ್ಲಿ ತಮ್ಮ ಜೀವನದ ಕೊನೆಯ ಕಾರ್ಯಕ್ರಮ ವಾಗಲಿದೆ.

 

1957ರಲ್ಲಿ ತಮಿಳಿನ ‘ವಿದಿಯಿನ್ ವಿಲಯತ್ತು’ ಚಿತ್ರದ ಮೂಲಕ ಎಸ್ ಜಾನಕಿ ಅವರು ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಈ ವರೆಗೆ ಚಿತ್ರಗೀತೆ, ಭಕ್ತಿಗೀತೆ ಸೇರಿ ಮೂವತ್ತು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ದನಿಯಾಗಿರುವ ಜಾನಕಿ, ಸಂಗೀತ ಕಲಿತವರಲ್ಲ ಎಂಬುದು ಅಚ್ಚರಿಯ ಸಂಗತಿ. ಪುಟ್ಟ ಮಗು, ಯುವತಿ, ವೃದ್ಧೆ ಹೀಗೆ ಎಲ್ಲ ವಯೋಮಾನಕ್ಕೆ ತಕ್ಕಂತೆ ತನ್ನ ಹಿನ್ನೆಲೆ ದನಿಯನ್ನು ಹೊಂದಿಸಬಲ್ಲ ವೈವಿಧ್ಯಮಯ ಗಾಯಕಿಯಾಗಿ ಜಾನಕಿ ಅವರು ಪ್ರಸಿದ್ಧರು. ಎಸ್ ಬಿ ಬಾಲಸುಬ್ರಮಣ್ಯಂ ಹಾಗೂ ಎಸ್ ಜಾನಕಿ ದನಿಯಲ್ಲಿ ಮೂಡಿ ಬಂದಿರುವ ಸಾವಿರಾರು ಜನಪ್ರಿಯ ಯುಗಳ ಗೀತೆಗಳು ಅಮರ ಗೀತೆಗಳಾಗಿವೆ.

‘ರಾಯರ ಸೊಸೆ’ ಚಿತ್ರದ ‘ತಾಳೆನೆಂತು’ ಎಂಬ ಹಾಡನ್ನು ಮೊಟ್ಟ ಮೊದಲ ಬಾರಿಗೆ ಹಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಾಯನವನ್ನು ಆರಂಭಿಸಿದರು. ‘ಅಲಾರೆ ಅಲಾರೆ.. ಮುಕುಂದ ಮೂರರೇ ಗೋಪಾಲ ಬಾರಯ್ಯ ಬಾ..’, ‘ಬಾನಲ್ಲೂ ನೀನೇ ಭುವಿಯಲ್ಲೂ ನೀನೇ…’, ‘ನನ್ನ ನೀನು ಗೆಲ್ಲಲಾರೆ…ತಿಳಿದು ತಿಳಿದು ಛಲವೇತಕೆ…’ ಹೀಗೆ ಅವರು ಹಾಡಿದ ಹಲವು ಹಾಡುಗಳು ಇಂದಿಗೂ ಎಲ್ಲರ ಬಾಯಲ್ಲೂ ಗುನು-ಗುನಿಸುತ್ತದೆ.

ಇದುವರೆಗೆ ಹಲವು ಭಾಷೆಯಲ್ಲಿ ಸುಮಾರು 48 ಸಾವಿರ ಹಾಡುಗಳನ್ನು ಹಾಡಿದ್ದಾರೆ. 4 ರಾಷ್ಟ್ರ ಪ್ರಶಸ್ತಿ, 32 ವಿವಿಧ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ದಕ್ಷಿಣ ಭಾರತದ ಗಾಯಕರನ್ನು ಕಡೆಗಣಿಸಲಾಗುತ್ತಿದೆ, ಈ ಪ್ರಶಸ್ತಿ ತುಂಬಾ ತಡವಾಗಿ ಬಂದಿದೆ ಎಂಬ ಕಾರಣಕ್ಕೆ, 2013ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನು ಎಸ್ ಜಾನಕಿ ಅವರು ನಿರಾಕರಣೆ ಮಾಡಿದ್ದರು.

ಮೂಲತಃ ತೆಲಗುವಿನವರಾದ ಇವರು ಚೆನ್ನೈನಲ್ಲಿ ನೆಲಸಿದ್ದಾರೆ. ಅವರ ಪತಿ ವಿ .ರಾಮ್ ಪ್ರಸಾದ್. ಮಗ ಮುರಳಿ ಕೃಷ್ಣ, ಸೊಸೆ ಉಮಾ. ಅಮೃತವರ್ಷಿಣಿ ಹಾಗೂ ಅಪ್ಸರಾ ಮೊಮ್ಮಕ್ಕಳು. ಭಗವಾನ್ ಶ್ರೀಕೃಷ್ಣ ಹಾಗೂ ಶಿರಡಿ ಸಾಯಿಬಾಬಾನ ಪರಮ ಭಕ್ತೆ ಎಸ್ ಜಾನಕಿ.

ಜನಕಮ್ಮನವರ್ ಈ ಸಂಗೀತ ಕಾರ್ಯಕ್ರಮದಲ್ಲಿ ಚಲನಚಿತ್ರರಂಗದ ಗಣ್ಯರಾದ ಶಿವರಾಜ್‌ಕುಮಾರ್, ಬಿ.ಸರೋಜಾದೇವಿ, ಶೈಲಶ್ರೀ, ಸಾಹುಕಾರ್ ಜಾನಕಿ, ಭಾರತಿ ವಿಷ್ಣುವರ್ಧನ್, ಹಂಸಲೇಖ, ಶ್ರೀನಾಥ್, ರಾಜೇಶ್, ಜಯಂತಿ ಭಾಗವಹಿಸಿದ್ದರು. ಇನ್ನು ಈ ಕಾರ್ಯಕ್ರಮದಲ್ಲಿ ಮೈಸೂರು ರಾಜಮಾತೆ ಡಾ| ಪ್ರಮೋದಾದೇವಿ ಒಡೆಯರ್ ಅವರು ಕೂಡ ಭಾಗವಹಿಸಿದ್ದಾರೆ.

Amazon Big Indian Festival
Amazon Big Indian Festival

Copyright © 2016 TheNewsism

To Top