Entertainment

ಗಾನ ಸರಸ್ವತಿ ಒಲಿಸಿಕೊಂಡ ಎಸ್.ಜಾನಕಿರವರ ಕೊನೆಯ ಸಾರ್ವಜನಿಕ ಕಾರ್ಯಕ್ರಮ ಕೇಳಿ ಪುಳಕಿತಗೊಂಡ ಅಭಿಮಾನಿ ಜನಸಾಗರ..

ಯುಗ ಯುಗಾದಿ ಕಳೆದರೂ, ದೋಣಿ ಸಾಗಲಿ ಮುಂದೆ ಹೋಗಲಿ, ಮೂಡಣ ಮನೆಯ ಮುತ್ತಿನ ನೀರಿನ ಎರಕಾವಾ ಹೊಯ್ದ, ಭಾರತ ಭೂಶಿರ ಮಂದಿರ ಸುಂದರಿ, ಗಗನವು ಎಲ್ಲೋ ಭೂಮಿಯು ಎಲ್ಲೋ, ಪಂಚಮ ವೇದ ಪ್ರೇಮದ ನಾದ, ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ.. ಈ ಪದಗಳನ್ನು ಓದುತ್ತಿದ್ರೆ ಸಾಕು ನಿಮ್ಮ ಮನದಲ್ಲೇ ಶೃತಿ ಲಯದ ಮಿಶ್ರಣವಾಗಿ, ಹಾಡು ಸುಲಲಿತವಾಗಿ ಬರುತ್ತದೆ. ವರ್ಷಗಳ ಕಾಲ ಜನ ಮಾನಸದಲ್ಲಿ ಇಂತಹ ಹಾಡುಗಳು ಉಳಿಯೋಕು ಒಂದು ಕಾರಣ.. ಹಾಡಿನ ಹಿಂದಿನ ಧ್ವನಿ.

ಎಸ್​ ದಕ್ಷಿಣ ಭಾರತದ ಸಿನಿಮಾ ಅಭಿಮಾನಿಗಳನ್ನು ರಂಜಿಸಿದ ಗಾಯಕಿ, ಶಿಷ್ಟ್ಲಾ ಶ್ರೀರಾಮಮೂರ್ತಿ ಜಾನಕಿ. ಈ ಹೆಸರು ಕೇಳಿದ್ರೆ ಅದೆಷ್ಟೋ ಜನಕ್ಕೆ ಗೊತ್ತಾಗದೆ ಇರಬಹುದು ಆದ್ರೆ, ಎಸ್​ ಜಾನಕಿ ಎಂದಾಕ್ಷಣ ವ್ಹಾ ಎನ್ನುವ ಉದ್ಘಾರ ಬಾರದೆ ಇರದು. ಅಂತಹ ಮೋಡಿಯ ಗಾಯನದ ಮೂಲಕ ಅಪಾರ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದ ಗಾಯಕಿ. ಮೂರು ವರ್ಷದಿಂದ ಶುರುವಾರ ಸಂಗೀತದ ಹುಚ್ಚು, ಹೆಮ್ಮರವಾಗಿ ಬೆಳೆದಿದೆ. ಸುಮಾರು 48 ಸಾವಿರಕ್ಕೂ ಹೆಚ್ಚು ಹಾಡಿದ ಗಾಯಕಿ.

ಜಾನಕಿ ಮೈಸೂರಿನಲ್ಲಿ ಇದೆ ಅಕ್ಟೋಬರ್​ 28 ರಂದು ನಡೆದ ಕಾರ್ಯಕ್ರಮದಲ್ಲಿ ಹಾಡುವುದೇ ತಮ್ಮ ವೃತ್ತಿ ಜೀವನದ ಕೊನೆಯ ಕಾರ್ಯಕ್ರಮ ಎಂದು ತಿಳಿಸಿದ್ದರು. ಮಾನಸ ಗಂಗೋತ್ರಿ ಮೈದಾನದಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ನೀಡಿದ್ದರು. ಅಲ್ಲದೆ ಅನೇಕ ಸಿನಿ, ಸಂಗೀತ ಲೋಕದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಉದ್ಘಾಟನಾ ಮಾತುಗಳ ಬಳಿಕ ಕ್ಷಣ ಮಾತ್ರವೂ ವ್ಯರ್ಥ ಮಾಡದ ಕೋಗಿಲೆ, ಮೊದಲು ಗಣೇಶನನ್ನು ನೆನೆದು ಹಾಡಿದ್ರು. ಅಂತಿಮವಾಗಿ ಸತತ 3 ಗಂಟೆಗಳ ಕಾರ್ಯಕ್ರಮದ ಮೂಲಕ ಎಸ್.ಜಾನಕಿ ತಮ್ಮ ಗಾಯನ ನಿಲ್ಲಿಸಿದರು. ಬಹುತೇಕ ಕನ್ನಡ ಗೀತೆಗಳನ್ನ ಹಾಡಿ ನೆರೆದಿದ್ದವರನ್ನ ರಂಜಿಸಿದ ಜಾನಕಮ್ಮ. ತಮ್ಮ ಮುಗ್ದ ಕಂಠಸಿರಿಗೆ ವಿಶ್ರಾಂತಿ ನೀಡುವ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನದಲ್ಲಿ ಸುಮಧುರ ಧ್ವನಿಯಾಗಿ ಉಳಿದರು.

Amazon Big Indian Festival
Amazon Big Indian Festival

Copyright © 2016 TheNewsism

To Top