Awareness

ಬೀದಿ ಬದಿ ವ್ಯಾಪಾರಿಗಳ ಹತ್ತಿರ ಚೌಕಾಸಿ ಮಾಡಬೇಡಿ.. ಒಂದು ಬಾರಿ ನೀವು ಪಾಪ್ ಕಾರ್ನ್ ತಿನ್ನುವ ದುಡ್ಡಲ್ಲಿ ಅವರ ಒಂದು ದಿನದ ಜೀವನ ಸಾಗುತ್ತದೆ..

ಇದೊಂದು ಸಾಮಾಜಿಕ ಅರಿವಿನ ಲೇಖನ ಓದಿ ಇಷ್ಟವಾದರೆ ಶೇರ್ ಮಾಡಿ ನೀವೂ ಅರಿವು ಮೂಡಿಸಿ..

ಹೌದು ಇದೊಂದು ನಮ್ಮ ನಮ್ಮಲ್ಲೇ ಇರುವ ಅತ್ಯಂತ ಕೆಟ್ಟ ನಡವಳಿಕೆ.. ಅದೇ ಬೀದಿ ಬದಿಯಲ್ಲಿ ವಯಸ್ಸಾದವರು ವ್ಯಾಪಾರ ಮಾಡುತ್ತಿರುವವರ ಹತ್ತಿರ ಜಗಳವಾಡಿಯಾದರೂ ಚೌಕಾಸಿ ಮಾಡುತ್ತೇವೆ..

ಆದರೇ ಅದೇ ನಾವುಗಳು ಒಂದು ಮಾಲ್ ಗೆ ಸಿನಿಮಾಗೆ ಹೋದರೇ 240 ರೂಪಾಯಿಯ ಪಾಪ್ ಕಾರ್ನ್ ತೆಗೆದುಕೊಂಡು 250 ರೂಪಾಯಿ ಕೊಟ್ಟು ಕೀಪ್ ದಟ್ ಚೇಂಜ್ ಅಂತ ಸ್ಟೈಲ್ ಆಗಿ ಇಂಗ್ಲಿಷ್ ನಲ್ಲಿ ಹೇಳಿ ಬರುತ್ತೀವಿ..

ಆದರೇ ಅದೇ ಕೊತ್ತಂಬರಿ ಸೊಪ್ಪು ಹತ್ತು ರೂಪಾಯಿಗೆ ಎರಡು ಕಟ್ಟು ಎಂದರೇ ಆಕಾಶವೇ ತಲೆ ಮೇಲೆ ಬಿದ್ದವರ ರೀತಿಯಲ್ಲಿ.. ಆ ಬಡಪಾಯಿಗಳೊಂದಿಗೆ ಕೂಗಾಡುತ್ತೇವೆ..

ಕೇವಲ ಸಿನಿಮಾ ಅಷ್ಟೇ ಅಲ್ಲ ಐಶಾರಾಮಿ ಹೋಟೆಲ್ ಗೆ ಹೋಗಿ ಅದೆಂತದೋ ಪಿಜ್ಜಾ ಬರ್ಗರ್ ತಿಂದು ಟಿಪ್ಸ್ ಕೂಡ ಕೊಡುತ್ತೇವೆ.. ಆದರೆ ಒಂದು ದಿನ ಟೊಮ್ಯಾಟೊ ರೇಟ್ ಜಾಸ್ತಿ ಹೇಳಿ ಬಿಟ್ಟರೇ ಸಾಕು.. ನೆನ್ನೆ ಅಷ್ಟಿತ್ತು ಇವತ್ ಯಾಕೆ ಇಷ್ಟು ಅಂತ ಒಂದು ತಿಂಗಳ ಹಿಂದಿನ ರೇಟ್ ಹೇಳಿ ಆ ವ್ಯಾಪಾರಿಯನ್ನು ನುಂಗಿಯೇ ಬಿಡುತ್ತೇವೆ..

ಪಾಪ ಅವರೇನು ಮನೆಯ ಮೇಲೆ ಮನೆ ಕಟ್ಟಲು ವ್ಯಾಪಾರ ಮಾಡುವವರಲ್ಲ.. ದಿನದ ಹೊಟ್ಟೆಯ ಕೂಳಿಗಾಗಿ ವ್ಯಾಪಾರ ಮಾಡುತ್ತಾರೆ.. ಅದರಲ್ಲೂ ವಯಸ್ಸಾದವರು.. ತಮಗೆ ಯಾರೂ ಇಲ್ಲದಿದ್ದರೂ ಸರಿ.. ಭಿಕ್ಷೆ ಬೇಡದೇ ಸ್ವಾಭಿಮಾನಿಗಳಾಗಿ ವ್ಯಾಪಾರ ಮಾಡುತ್ತಿರುತ್ತಾರೆ.. ಆದರೇ ನಾವುಗಳು ಅಂತವರನ್ನೂ ಬಿಡುವುದಿಲ್ಲ..

ಮಾಲ್ ಗಳಲ್ಲಿ ಇದ್ದ ನಮ್ಮ ಧಾರಾಳತನ ಇವರ ಮುಂದೆ ಮಾಯವಾಗುವುದೇ??
ಹೋಟೆಲ್ ನಲ್ಲಿ ಟಿಪ್ಸ್ ಕೊಡುವಾಗ ಇದ್ದ ದಾನ ಶೂರ ಕರ್ಣತ್ವ ಬೀದಿ ಬದಿ ವ್ಯಾಪಾರಿಳ ಹತ್ತಿರ ಹೋದಾಗ ಎಲ್ಲಿ ಹೋಗುವುದು??

ಒಂದನ್ನು ಚೆನ್ನಾಗಿ ನೆನಪಿಡಿ ಅವರು ಭಿಕ್ಷೆ ಬೇಡುತ್ತಿಲ್ಲ.. ಬದಲಾಗಿ ಕಷ್ಟ ಪಟ್ಟು ದುಡಿಯುತ್ತಿದ್ದಾರೆ.. ಅವರನ್ನೂ ಗೌರವಿಸಿ… ಶೇರ್ ಮಾಡಿ ಶುಭವಾಗಲಿ..

Amazon Big Indian Festival
Amazon Big Indian Festival
To Top