Food

ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರಿಯ ಬೆಳಗ್ಗಿನ ಉಪಹಾರಗಳಲ್ಲಿ ಒಂದಾದ ಮಂಗಳೂರು ಬನ್ಸ್ ಮಾಡುವ ಸಿಂಪಲ್ ವಿಧಾನ..!!

ಬೇಕಾಗುವ ಪದಾರ್ಥಗಳು

  • ಮೈದಾ ಹಿಟ್ಟು- 1ಕಪ್
  • ಬಾಳೆಹಣ್ಣು- 2
  • ಸಕ್ಕರೆ- ಅರ್ಧ ಕಪ್
  • ಮೊಸರು- 2 ಚಮಚ
  • ಜೀರಿಗೆ- ಸ್ವಲ್ಪ
  • ಅಡುಗೆ ಸೋಡಾ- ಅರ್ಧ ಚಮಚ
  • ಉಪ್ಪು- ಸ್ವಲ್ಪ
  • ಕರಿಯಲು ಅಡುಗೆ ಎಣ್ಣೆ

ಮಾಡುವ ವಿಧಾನ

ಮೊದಲಿಗೆ ಮಾಗಿದ ಬಾಳೆಹಣ್ಣನ್ನು ಚೆನ್ನಾಗಿ ಸ್ಮಾಶ್ ಮಾಡಿ. ಅದಕ್ಕೆ ಮೈದಾ ಹಿಟ್ಟು, ಪುಡಿ ಮಾಡಿದ ಸಕ್ಕರೆ, ಉಪ್ಪು, ಹಾಕಿ ಮಿಕ್ಸ್ ಮಾಡಿ.

ನಂತರ ಅದಕ್ಕೆ ಅಡುಗೆ ಸೋಡಾ, ಜೀರಿಗೆ ಹಾಕಿ ಮೊಸರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ 4ರಿಂದ 5 ಗಂಟೆ ನೆನೆಯಲು ಬಿಡಿ.

ನೆನೆದ ಹಿಟ್ಟನ್ನು ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಪೂರಿ ಆಕಾರಕ್ಕೆ ಉದ್ದಿಕೊಳ್ಳಿ.

ಆಮೇಲೆ ಕಾದ ಎಣ್ಣೆಗೆ ಹಾಕಿ ಸಣ್ಣ ಉರಿಯಲ್ಲಿ ಕಂದು ಬಣ್ಣ ಬರುವವರೆಗೂ ಬೇಯಿಸಿ.

 

ನಂತರ ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ತಿನ್ನಬಹುದು.

ಕೃಪೆ: Hebbars Kitchen

Amazon Big Indian Festival
Amazon Big Indian Festival

Copyright © 2016 TheNewsism

To Top