Awareness

ಸರ್ಕಾರಿ ನೌಕರರಿಗೆ ಖುಷಿ ಸುದ್ದಿ: 2018ನೇ ಸಾಲಿನಲ್ಲಿ ಒಟ್ಟು 87 ಸರ್ಕಾರಿ ರಜೆಗಳು ಲಭಿಸಲಿವೆ..!!

ಬೆಂಗಳೂರು: 2018ನೆ ವರ್ಷದ ಸಾರ್ವತ್ರಿಕ ರಜಾ ಹಾಗೂ ಪರಿಮಿತ ರಜಾ ದಿನಗಳನ್ನು ನಿಗದಿಪಡಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಇತ್ತೀಚಿನ ವರ್ಷಗಳಿಗೆ ಹೋಲಿಸಿದಲ್ಲಿ 2018ನೇ ಸಾಲಿನಲ್ಲಿ ಹೆಚ್ಚು ರಜೆ ಸಿಗಲಿದೆ. ಭಾನುವಾರ, ಎರಡನೇ ಶನಿವಾರ ಸೇರಿ ಒಟ್ಟು 87 ರಜೆಗಳು ಲಭಿಸಲಿವೆ. ಗುರುವಾರ ನಡೆದ ಸಂಪುಟ ಸಭೆ 2018ನೇ ಸಾಲಿನ ರಜಾ ದಿನಗಳ ಪಟ್ಟಿ ಅನುಮೋದಿಸಿದೆ.

2018ರ ಸಾರ್ವತ್ರಿಕ ರಜೆಗಳ ಪಟ್ಟಿ:

 1. ಜನವರಿ 15, ಸೋಮವಾರ – ಸಂಕ್ರಾಂತಿ
 2. ಜನವರಿ 26, ಶುಕ್ರವಾರ – ಗಣರಾಜ್ಯೋತ್ಸವ
 3. ಫೆಬ್ರುವರಿ 13, ಮಂಗಳವಾರ – ಮಹಾಶಿವರಾತ್ರಿ
 4. ಮಾರ್ಚ್ 29, ಗುರುವಾರ – ಮಹಾವೀರ ಜಯಂತಿ
 5. ಮಾರ್ಚ್ 30, ಶುಕ್ರವಾರ – ಗುಡ್ ಫ್ರೈಡೆ
 6. ಏಪ್ರಿಲ್ 18, ಬುಧವಾರ – ಬಸವ ಜಯಂತಿ
 7. ಮೇ 1, ಮಂಗಳವಾರ – ಮೇ ಡೇ(ಕಾರ್ಮಿಕರ ದಿನ)
 8. ಜೂನ್ 16, ಶನಿವಾರ – ಕುತುಬ್ ಎ ರಂಜಾನ್
 9. ಆಗಸ್ಟ್ 15, ಬುಧವಾರ – ಸ್ವಾತಂತ್ರ್ಯ ದಿನಾಚರಣೆ
 10. ಆಗಸ್ಟ್ 22, ಬುಧವಾರ – ಬಕ್ರಿದ್
 11. ಸೆಪ್ಟಂಬರ್ 13, ಗುರುವಾರ – ಗಣೇಶ ಹಬ್ಬ
 12. ಸೆಪ್ಟಂಬರ್ 21, ಶುಕ್ರವಾರ – ಮೊಹರಂ ಕಡೇ ದಿನ
 13. ಅಕ್ಟೋಬರ್ 2, ಮಂಗಳವಾರ – ಗಾಂಧಿ ಜಯಂತಿ
 14. ಅಕ್ಟೋಬರ್ 8, ಸೋಮವಾರ – ಮಹಾಲಯ ಅಮಾವಾಸ್ಯ
 15. ಅಕ್ಟೋಬರ್ 18, ಗುರುವಾರ – ಆಯುಧಪೂಜೆ
 16. ಅಕ್ಟೋಬರ್ 19, ಶುಕ್ರವಾರ – ವಿಜಯದಶಮಿ
 17. ನವೆಂಬರ್ 1, ಗುರುವಾರ – ಕನ್ನಡ ರಾಜ್ಯೋತ್ಸವ
 18. ನವೆಂಬರ್ 6, ಮಂಗಳವಾರ – ನರಕ ಚತುರ್ಥಿ
 19. ನವೆಂಬರ್ 8, ಗುರುವಾರ – ಬಲಿಪಾಡ್ಯಮಿ
 20. ನವೆಂಬರ್ 21, ಬುಧವಾರ – ಈದ್ ಮಿಲಾದ್
 21. ನವೆಂಬರ್ 26, ಸೋಮವಾರ – ಕನಕದಾಸ ಜಯಂತಿ
 22. ಡಿಸೆಂಬರ್ 25, ಮಂಗಳವಾರ – ಕ್ರಿಸ್ಮಸ್

ಪರಿಮಿತ ರಜೆಗಳು(ವಿವೇಚನೆ)

 • ಜನವರಿ 1, ಸೋಮವಾರ – ನೂತನ ವರ್ಷಾರಂಭ
 • ಮಾರ್ಚ್ 1, – ಹೋಳಿ ಹಬ್ಬ
 • ಮಾರ್ಚ 22, – ದೇವರ ದಾಸಿಮಯ್ಯ ಜಯಂತಿ
 • ಮಾರ್ಚ್ 31, – ಹೋಲಿ ಸಾಟರ್ ಡೇ
 • ಏಪ್ರಿಲ್ 20, – ಶ್ರೀ ಶಂಕರಾಚಾರ್ಯ ಜಯಂತಿ
 • ಏಪ್ರಿಲ್ 21, – ಶ್ರೀ ರಾಮಾನುಜಾಚಾರ್ಯ ಜಯಂತಿ
 • ಮೇ 02, – ಷಬ್-ಎ-ಬರಾತ್
 • ಜೂನ್ 12, – ಷಬ್-ಎ-ಖೈದರ್
 • ಜೂನ್ 15, – ಜುಮ್ಮತ್ ಉಲ್ ವಿದಾ
 • ಆಗಸ್ಟ್ 24, – ಶ್ರೀ ವರಮಹಾಲಕ್ಷ್ಮಿ ವೃತ, ತಿರು ಓಣಂ
 • ಆಗಸ್ಟ್ 27, – ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ
 • ಸೆಪ್ಟೆಂಬರ್ 12, – ಸ್ವರ್ಣ ಗೌರಿ ವೃತ
 • ಸೆಪ್ಟೆಂಬರ್ 17, – ಶ್ರೀ ವಿಶ್ವಕರ್ಮ ಜಯಂತಿ
 • ನವೆಂಬರ್ 23, – ಶ್ರೀ ಗುರುನಾಯಕ್ ಜಯಂತಿ
 • ನವೆಂಬರ್ 24, – ಹುತ್ತರಿ ಹಬ್ಬ

ಮಾದ್ವ ನವಮಿ, ಸೌರಮಾನ ಯುಗಾದಿ ಮತ್ತು ತುಲಾ ಸಂಕ್ರಮಣಗಳು ಕ್ರಮವಾಗಿ ರಜೆ ದಿನಗಳಾಗಿ ಗಣರಾಜ್ಯೋತ್ಸವ(ಜ. 26), ಅಂಬೇಡ್ಕರ್ ಜಯಂತಿ (ಏ. 14), ಮತ್ತು ಆಯುಧ ಪೂಜೆ (ಅ. 18), ಯಂದು ಬರುವುದರಿಂದ ಈ ಪಟ್ಟಿಯಲ್ಲಿ ಸೇರಿಲ್ಲ. ಹಾಗೆಯೇ, ಶ್ರೀ ರಾಮನವಮಿ (ಮಾ. 25),, ಬುದ್ಧಪೂರ್ಣೆಮೆ (ಏ. 29), ಯಜುರ್ ಉಪಾಕರ್ಮ, ರಕ್ಷಾ ಬಂಧನ (ಏ. 26), ಶ್ರೀ ಕೃಷ್ಣ ಜನ್ಮಾಷ್ಟಮಿ (ಸೆ. 2), ಮತ್ತು ಅನಂತ ಪದ್ಮನಾಭ ವ್ರತ (ಸೆ. 23), ಭಾನುವಾರ ಬಂದಿರುವ ಕಾರಣ ಇವೂ ಈ ಪಟ್ಟಿಯಲಿಲ್ಲ.

Amazon Big Indian Festival
Amazon Big Indian Festival

Copyright © 2016 TheNewsism

To Top