ಆರೋಗ್ಯ

ಪಾರಿಜಾತದ ಆರೋಗ್ಯಕಾರಿ ಗುಣಗಳು ಗೊತ್ತಾಗೇ ಬಹುಶಃ ರುಕ್ಮಿಣಿ ಸತ್ಯಭಾಮೆಯರು ತಮ್ಮ ಹಿತ್ತಲಲ್ಲಿ ತಂದಿರಿಸಲು ಕಾತರಿಸ್ತಾ ಇದ್ರು ಅನ್ಸುತ್ತೆ…

ಪಾರಿಜಾತ ಬಹುಕಾಲ ಬದುಕುವ ಒಂದು ಪುಟ್ಟ ಮರ. ಸಂಜೆಯಲ್ಲಿ ಅರಳಿ ರಾತ್ರಿಯಿಡಿ ಸುಗಂಧ ಬೀರುವ ಪುಟ್ಟ ಬಿಳಿಯ ಹೂಗಳು ಮನೆಯಂಗಳದಲ್ಲಿದ್ದರೆ ಶೋಭೆ. ಬೀಜ ನೆಟ್ಟ ಒಂದು ವರ್ಷದ ನಂತರ ಔಷಧಕ್ಕಾಗಿ ಬಳಸಲು ಯೋಗ್ಯವಾದ ಎಲೆಗಳನ್ನು ಪಡೆಯಬಹುದು. ಪಾರಿಜಾತದ ಔಷಧೀಯ ಗುಣಗಳು ಅನೇಕ. ಬಳಕೆಯಾಗುವ ಭಾಗಗಳೆಂದರೆ ಎಲೆ, ಹೂ ಮತ್ತು ಚಕ್ಕೆಗಳು.

ಜ್ವರದ ಉಪಶಮನಕ್ಕೆ:

ಪಾರಿಜಾತದ ಎಲೆಗಳಿಂದ ತೆಗೆದ ಒಂದೆರಡು ಚಮಚ ರಸಕ್ಕೆ ಸಮಪ್ರಮಾಣದಲ್ಲಿ ಜೇನುತುಪ್ಪ ಬೆರೆಸಿ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ದಿನದಲ್ಲಿ ಮೂರು ಬಾರಿ ಆಹಾರಕ್ಕೆ ಮೊದಲು ಸೇವಿಸುವುದರಂದ ಮಲೇರಿಯಾ ಜ್ವರ ನಿಯಂತ್ರಣಕ್ಕೆ ಬರುತ್ತದೆ.
-ಆರೇಳು ಚಿಗುರು ಎಲೆಗಳನ್ನು ಸ್ವಲ್ಪ ಶುಂಠಿ ರಸ ಮತ್ತು ಸ್ವಲ್ಪ ನೀರು ಸೇರಿಸಿ ಅರೆದು ದಿನದಲ್ಲಿ ಎರಡರಿಂದ ಮೂರು ಬಾರಿ ಕೊಡುವುದರಿಂದ ಬಿಟ್ಟು ಬಿಟ್ಟು ಬರುವ ಜ್ವರ ಕಡಿಮೆಯಾಗುತ್ತದೆ.

ಜಂತುಹುಳುವಿದ್ದಲ್ಲಿ;

– ಒಂದು ಚಮಚ ಎಲೆಯ ರಸಕ್ಕೆ ಸ್ವಲ್ಪ ಜೇನು ಮತ್ತು ಸ್ವಲ್ಪ ಉಪ್ಪು ಸೇರಿಸಿ ಮಕ್ಕಳಿಗೆ ದಿನದಲ್ಲಿ ಒಂದು ಬಾರಿ ಆಹಾರಕ್ಕೆ ಮೊದಲು ಕೊಡುವುದರಿಂದ ಜಂತುಹುಳುಗಳ ಜೊಂದರೆ ನಿವಾರಣೆಯಾಗುತ್ತದೆ.


ಸಂಧಿವಾತ ನಿವಾರಣೆಗೆ:
– ಮೂರರಿಂದ ನಾಲ್ಕು ಚಮಚ ಎಲೆಯ ರಸಕ್ಕೆ ಒಂದೂವರೆಯಿಂದ ಎರಡು ಚಮಚ ಜೇನು ಸೇರಿಸಿ ದಿನದಲ್ಲಿ ಎರಡು ಬಾರಿ ಆಹಾರಕ್ಕೆ ಮೊದಲು ಸೇವಿಸುವುದರಿಂದ ಸಂಧಿವಾತ, ಸಯಾಟಿಕಾ, ವಾಯು ಕಡಿಮೆಯಾಗುತ್ತದೆ.

ತಲೆ ಹೊಟ್ಟಿಗೆ:
– ಬೀಜಗಳನ್ನು ಚೆನ್ನಾಗಿ ಅರೆದು ತಲೆಗೆ ಲೇಪಿಸಿ ಸ್ವಲ್ಪ ಸಮಯದ ನಂತರ ಸ್ನಾನ ಮಾಡುವುದರಿಂದ ತಲೆಯ ಹೊಟ್ಟು ಕಡಿಮೆಯಾಗುತ್ತದೆ.

ಕಫ ನಿವಾರಣೆಗೆ;
ಗುಲಗಂಜಿ ಗಾತ್ರದ ಮರದ ತೊಗಟೆಯನ್ನು ಅಡಿಕೆ, ವೀಳೇದೆಲೆ ಜೊತೆ ಸೇರಿಸಿ ತಿನ್ನುವುದರಿಂದ ಕಫ ಕಡಿಮೆಯಾಗುತ್ತದೆ.

Amazon Big Indian Festival
Amazon Big Indian Festival

Copyright © 2016 TheNewsism

To Top