ಆರೋಗ್ಯ

ಹಲ್ಲುಗಳ ಹಾಳಾಗೋದರಿಂದ ಹೇಗೆ ಕಾಪಾಡಿಕೊಳ್ಳಬೇಕು ಎಂಬ ಆತಂಕ ಇದೆಯಾ…ಟೆನ್ಶನ್ ಬಿಡಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ…

ಹಲ್ಲುಗಳು ಒಬ್ಬ ವ್ಯಕ್ತಿಯ ಆರೋಗ್ಯ , ವ್ಯಕ್ತಿತ್ವ , ಸೌಂದರ್ಯ ವನ್ನು ಸೂಚಿಸುತ್ತದೆ. ಹೀಗಿರುವಾಗ ನಾವು ನಮ್ಮ ಹಲ್ಲುಗಳನ್ನು ಹೇಗೆ ರಕ್ಷಿಸಬೇಕು ಎಂದು ತಿಳ್ದುಕೊಳ್ಳೋಣ.ಹಲ್ಲಿನ ಬಗ್ಗೆ ಕೇರ್ ತೆಗೆದುಕೊಳ್ಳದಿದ್ದರೆ ಹುಳುಕು ಹಲ್ಲು ಉಂಟಾಗಿ, ಹಲ್ಲು ನೋವು, ವಸಡಿನಲ್ಲಿ ರಕ್ತ ಬರುವುದು, ಬಾಯಿ ದುರ್ವಾಸನೆ ಉಂಟಾಗುವುದು. ಹಲ್ಲುಗಳ ಸುರಕ್ಷತೆಗೆ ಸರಿಯಾದ ವಿಧಾನದಲ್ಲಿ ಹಲ್ಲು ಉಜ್ಜಬೇಕು.

ದಿನಕ್ಕೆ ಎರಡು ಬಾರಿ ಬ್ರೆಷ್ ಮಾಡಬೇಕು , ಬ್ರೆಷ್ ಅನ್ನು ೪೫ ಡಿಗ್ರಿ ಕೋನದಲ್ಲಿ ಹಿಡಿದು ಬ್ರೆಷ್ ಮಾಡಬೇಕು. ಹಲ್ಲಿನ ಮೇಲ್ಭಾಗ ಉಜ್ಜಿದ ನಂತರ ಒಳ ಭಾಗವನ್ನು ಅದೇ ರೀತಿ ಉಜ್ಜಿ. ನಾಲಗೆಯನ್ನು ಟಂಗ್ ಕ್ಲೀನರ್ ಬಳಸಿ ಕ್ಲೀನ್ ಮಾಡಿ. ಹಲ್ಲುಗಳನ್ನು ಬೆಳ್ಳಗ್ಗೆ ಕಾಣುವಂತೆ ಮಾಡುವ ಟೂಥ್ ಪೇಸ್ಟ್ ಗಳು ಲಭ್ಯವಿರುತ್ತದೆ. ಆದರೆ ಯೌವನದಲ್ಲಿ ಹಲ್ಲುಗಳು ಬೆಳ್ಳಗ್ಗೆ ಇರುವುದರಿಂದ ಅವುಗಳ ಬಳಕೆ ಬೇಡ.

ಆರು ತಿಂಗಳಿಗೆ ಒಮ್ಮೆ ಟೂತ್ ಬ್ರಷ್ ಬದಲಿಸಿ. ವಯಸ್ಸಾದಂತೆ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ ಆಗ ದಂತ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆದು ಹಲ್ಲುಗಳನ್ನು ಸ್ವಚ್ಚಗೊಳಿಸಿ.

ಲಾಲಿ ಪಪ್, ಐಸ್ ಕ್ಯಾಂಡಿ, ಫ್ರೆಂಚ್ ಫ್ರೈ, ಕೆಮ್ಮಿನ ಸಿರಪ್ , ಮಿಂಟ್ -ಕುಕ್ಕೀಸ್ ಇವುಗಳಲ್ಲಿ ಹೆಚ್ಚಿನ ಸಕ್ಕರೆ ಅಂಶವಿರುವುದರಿಂದ ಹಲ್ಲುಗಳು ಹಾಳಾಗುತ್ತವೆ. ಆದ್ದರಿಂದ ಇವುಗಳನ್ನು ಸೇವಿಸಿದ ನಂತರ ಬಾಯಿಯನ್ನು ಸ್ವಲ್ಪ ಕಾದ ಬಿಸಿ ನೀರು ಹಾಕಿ ಮುಕ್ಕಳಿಸಿ. ಆದಷ್ಟು ಸಿಹಿ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿದರೆ ಹಲ್ಲುಗಳು ಆರೋಗ್ಯವಾಗಿರುತ್ತದೆ.

ನಟ್ಸ್, ಹಾಲು, ಮೀನು,ಚಿಕ್ಕನ್ ಇವುಗಳಲ್ಲಿರುವ ಕ್ಯಾಲ್ಸಿಯಂ ಹಲ್ಲುಗಳನ್ನು ಗಟ್ಟಿಯಾಗಿಸುತ್ತದೆ. ಸೇಬು ಮತ್ತು ತರಕಾರಿಗಳ ಸೇವನೆ ಹಲ್ಲುಗಳ ಆರೋಗ್ಯಕ್ಕೆ ಒಳ್ಳೆಯದು. ಸಿಟ್ರಸ್ ಆಹಾರ, ಟೊಮೆಟೊ ಸೇವನೆ ಒಳ್ಳೆಯದು.

Amazon Big Indian Festival
Amazon Big Indian Festival

Copyright © 2016 TheNewsism

To Top