Awareness

ಮಹಿಳೆಯರಿಗಾಗಿ ಬ್ಯಾಂಕ್ ಗಳಿಂದ ಸಿಗುವ ಸಾಲ ಸೌಲಭ್ಯಗಳು.. ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್..

ಸರ್ಕಾರದಿಂದ ಜನಸಾಮಾನ್ಯರಿಗೆ ಅನೇಕ ಸಾಲ ಸೌಲಭ್ಯಗಳಿವೆ.. ಅದರಲ್ಲೂ ಮಃಇಳೆಯರಿಗೆ ತುಸು ಹೆಚ್ಚೇ ಎಂದುಕೊಳ್ಳಿ.. ಆದರೇ ಇವೆಲ್ಲಾ ಎಷ್ಟೋ ಜನರಿಗೆ ತಿಳಿದೇ ಇರುವುದಿಲ್ಲಾ.. ಇದರ ಬಗ್ಗೆ ಜ್ನಾನ ಇಲ್ಲದೆಯೇ ಎಷ್ಟೋ‌ ಜನರು ಈ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.. ನಿಮಗಾಗಿ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ….

1.ಅನ್ನಪೂರ್ಣ ಯೋಜನೆ

ಇದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (SBI) ರವರು ಮಹಿಳೆಯರಿಗಾಗಿ ನೀಡುತ್ತಿರುವ ಯೋಜನೆ.. ಈ ಯೋಜನೆಯಡಿಯಲ್ಲಿ ಸ್ವಂತ ಹೊಟೇಲ್ ಉದ್ಯೋಗ ಮಾಡಲು ಇಚ್ಛಿಸುವ ಮಹಿಳೆಯರಿಗೆ ಅಂದರೆ ಪ್ಯಾಕ್ ಆಗಿರುವ ಊಟ ಅಥವಾ ಸ್ನ್ಯಾಕ್ಸ್ ತಯಾರಿ ಇತ್ಯಾದಿ ಇಂತಹ ಬ್ಯುಸಿನೆಸ್ ಗಳಿಗಾಗಿ ಬಂಡವಾಳ ಹೂಡಲು.. ಪಾತ್ರೆಗಳು, ಅಡುಗೆ ಮನೆ ಸಾಮಾನು ಖರೀದಿಸಲು ಸಾಲ ಸೌಲಭ್ಯವನ್ನು ಒದಗಿಸುತ್ತದೆ.. ಈ ಯೋಜನೆಯಡಿಯಲ್ಲಿ 50 ಸಾವಿರದವರೆಗೂ ಸಾಲವನ್ನು ಪಡೆಯಬಹುದು.. ಈ ಸಾಲವನ್ನು ಕಂತುಗಳ ರೂಪದಲ್ಲಿ ತೀರಿಸಲು 36 ತಿಂಗಳುಗಳ ಕಾಲಾವಕಾಶವಿರುತ್ತದೆ..

2.ಮಹಿಳೆಯರಿಗಾಗಿ ಸ್ತ್ರೀ ಶಕ್ತಿ ಯೋಜನೆ

ಇದು ಒಂದು SBI ಬ್ಯಾಂಕಿನ ಯೋಜನೆಯಾಗಿದೆ.. ಈ ಯೋಜನೆಯನ್ನು  ಒಂದು ಬ್ಯುಸಿನೆಸ್ ಅಥವಾ ಸಣ್ಣ ಕಂಪನಿಯಲ್ಲಿ 50% ಓನರ್ ಶಿಪ್ ಅನ್ನು ಹೊಂದಿರುವ ಮಹಿಳೆಯರು ಉಪಯೋಗಿಸಿಕೊಳ್ಳಬಹುದು.. ಈ ಯೋಜನೆಯಲ್ಲಿ ತೆಗುದುಕೊಳ್ಳುವ ಸಾಲ 2 ಲಕ್ಷಕ್ಕೂ ಅಧಿಕವಾಗಿದ್ದರೇ ಅದಕ್ಕೆ 0.50% ಬಡ್ಡಿ ರಿಯಾಯಿತಿಯೂ ಸಿಗಲಿದೆ..

3.ಭಾರತೀಯ ಮಹಿಳಾ ಬ್ಯಾಂಕ್ ಬ್ಯುಸಿನೆಸ್ ಲೋನ್

ಇದು ಮಹಿಳೆಯರನ್ನು ಸ್ವಂತ ಉದ್ಯೋಗಸ್ಥರನ್ನಾಗಿಸಲು ಇರುವ ಯೋಜನೆ.. ಇದರಲ್ಲಿ ಪ್ರಾಪರ್ಟಿಯ ಮೇಲೆ ಸಾಲ ಸೌಲಭ್ಯ, ಮೈಕ್ರೋ ಲೋನ್ಸ್, ಹಾಗೂ SME ಲೋನ್ಸ್ ಎಂಬ 3 ಯೋಜನೆಗಳಿವೆ.. ಈ ಯೋಜನೆಯಡಿಯಲ್ಲಿ  ವಸ್ತುಗಳನ್ನು ಉತ್ಪಾದನೆ ಮಾಡುವ ಕಾರ್ಖಾನೆ ತೆರೆಯಲು 20 ಕೋಟಿಯವರೆಗೆ ಸಾಲವನ್ನು ಪಡೆಯಬಹುದಾಗಿದೆ.. ಬಡ್ಡಿ ದರದಲ್ಲಿ 0.25% ರಿಯಾಯಿತಿಯನ್ನೂ ಪಡೆಯಬಹುದು.. ಸಾಮಾನ್ಯವಾಗಿ ಈ ಯೋಜನೆಯಲ್ಲಿ ಬಡ್ಡಿ ದರವು 10.15% ಇರುತ್ತದೆ..

4.ದೇನಾ ಶಕ್ತಿ ಯೋಜನೆ

ಇದು ದೇನಾ ಬ್ಯಾಂಕ್ ನ ಯೋಜನೆಯಾಗಿದೆ..  ಇದು ವ್ಯವಸಾಯ, ವಸ್ತುಗಳ ಉತ್ಪಾದನೆ, ರೀಟೈಲ್ ಅಂಗಡಿಗಳು ಅಥವಾ ಸಣ್ಣ ಬ್ಯುಸಿನೆಸ್ ಶುರು ಮಾಡಿ  ಮಹಿಳೆಯರು ವಾಣಿಜ್ಯೋದ್ಯಮಿಗಳಾಗಲು ಸಾಲವನ್ನು ಒದಗಿಸುತ್ತದೆ.. ಈ ಯೋಜನೆಯಡಿಯಲ್ಲಿ ರೀಟೈಲ್ ಬ್ಯುಸಿನೆಸ್ ಗಾಗಿ 20 ಲಕ್ಷದ ವರೆಗೆ ಸಾಲ ಜೊತೆಗೆ 0.25% ಬಡ್ಡಿರಿಯಾಯಿತಿಯನ್ನೂ ಪಡೆಯಬಹುದು.. ಮೈಕ್ರೋ ಕ್ರೆಡಿಟ್ ಅಡಿಯಲ್ಲಿ ಎಜುಕೇಶನ್, ಹೌಸಿಂಗ್ ಇತ್ಯಾದಿಗಳಿಗಾಗಿ 50 ಸಾವಿರದವರೆಗೆ ಸಾಲವನ್ನು ಪಡೆಯಬಹುದು..

5.ಉದ್ಯೋಗಿನಿ ಯೋಜನೆ

ಇದು ಪಂಜಾಬ್ ಮತ್ತು ಸಿಂದ್ ಬ್ಯಾಂಕ್ ಗಳು ಒದಗಿಸಿರುವ ಯೋಜನೆ..  ವ್ಯವಸಾಯ, ರೀಟೈಲ್ ಮತ್ತು ಸಣ್ಣ ವ್ಯವಹಾರಗಳನ್ನು ಶುರು ಮಾಡಲು ಸಾಲವನ್ನು ಪಡೆಯಬಹುದಾಗಿದೆ. ಈ ಯೋಜನೆಯಡಿಯಲ್ಲಿ 18-45 ವಯಸ್ಸಿನ ಮಹಿಳೆಯರು 1 ಲಕ್ಷದವರೆಗೆ ಸಾಲ ಪಡೆಯಬಹುದು.. ಇದರಲ್ಲಿ ಕುಟುಂಬದ ವಾರ್ಷಿಕ ಆದಾಯವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.. Sc/st ಮಹಿಳೆಯರಿಗೆ ವಾರ್ಷಿಕ ಆದಾಯ 45 ಸಾವಿರ ಎಂದು ನಿಗದಿ ಮಾಡಲಾಗಿದೆ..

6.ಸೆಂಟ್ರಲ್ ಕಲ್ಯಾಣಿ ಯೋಜನೆ

ಇದು ಮಹಿಳೆಯರು ಸ್ವಂತ ಉದ್ಯೋಗ ಸ್ಥಾಪನೆ ಮಾಡಲು, ಅಥವಾ ಇರುವ ಬ್ಯುಸಿನೆಸ್ ಅನ್ನು ವಿಸ್ತಾರಗೊಳಿಸಲು ಸಾಲ ಸೌಲಭ್ಯ ಒದಗಿಸುವ ಯೋಜನೆಯಾಗಿದೆ.. ಈ ಯೋಜನೆಯಡಿಯಲ್ಲಿ ಕಾಟೇಜ್ ಇಂಡಸ್ಟ್ರಿ, ಮಧ್ಯಮ ಮತ್ತು ಸಣ್ಣ ವ್ಯವಹಾರ ನಡೆಸುತ್ತಿರುವವರು, ಸ್ವಂತ ಉದ್ಯೋಗ ಮಾಡುತ್ತಿರುವವರು ರೀಟೈಲ್ ಬ್ಯುಸಿನೆಸ್ ಮಾಡುತ್ತಿರುವವರು.. ಸರ್ಕಾರ ಆಯೋಜಿಸುವ ಕಾರ್ಯಕ್ರಮದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು 1 ಕೋಟಿಯವರೆಗೆ ಸಾಲ ಸೌಲಭ್ಯ ಪಡೆಯಬಹುದಾಗಿದೆ..

7.ಮಹಿಳಾ ಉದ್ಯಮ ನಿಧಿ ಯೋಜನೆ

ಇದು ಪಂಜಾಬ್ ನ್ಯಾಷನಲ್ ಬ್ಯಾಂಕ್ ರವರು ಮಹಿಳೆಯರನ್ನು ವಾಣಿಜ್ಯೋದ್ಯಮಿಗಳನ್ನಾಗಿ ಮಾಡಲು ಸಾಲ ನೀಡುವ ಯೋಜನೆಯಾಗಿದೆ..ಇದರ ಅಡಿಯಲ್ಲಿ ತೆಗೆದುಕೊಳ್ಳುವ ಸಾಲ ಮರುಪಾವತಿಗೆ  10 ವರ್ಷ ಕಾಲಾವಕಾಶವಿರುತ್ತದೆ.. ಈ ಯೋಜನೆಯಡಿಯಲ್ಲಿ ಬ್ಯೂಟಿ ಪಾರ್ಲರ್ ತೆರೆಯಲು, ಡೇ ಕೇರ್ ತೆರೆಯಲು,ಆಟೋ ರಿಕ್ಷಾ ಖರೀದಿಸಲು, ಕಾರ್ ಕೊಳ್ಳಲು ವಿವಿಧ ರೀತಿಯಾಗಿ ಒಟ್ಟು 10 ಲಕ್ಷದವರೆಗೆ ಸಾಲವನ್ನು ಪಡೆಯಬಹುದಾಗಿದೆ.

8.ಮಹಿಳೆಯರಿಗಾಗಿ ಮುದ್ರಾ ಯೋಜನೆ..

ಇದು ಒಂದು ಕೇಂದ್ರ ಸರ್ಕಾರದ ಯೋಜನೆಯಾಗಿದೆ.. ಈ ಯೋಜನೆಯಡಿಯಲ್ಲಿ ಸಣ್ಣ ವಾಣಿಜ್ಯ ಸ್ಥಾಪಿಸಲು, ಬ್ಯೂಟಿ ಪಾರ್ಲರ್ ತೆರೆಯಲು, ಟೈಲರಿಂಗ್ ಯುನಿಟ್, ಟ್ಯೂಶನ್ ಸೆಂಟರ್ ಶುರು ಮಾಡಲು.. ಅಥವಾ ಮಹಿಳೆಯರು ಒಟ್ಟಾಗಿ ಯಾವುದಾದರೂ ವಾಣಿಜ್ಯೋದ್ಯಮ ಶುರು ಮಾಡಲು ಸಾಲ ಪಡೆಯಬಹುದಾಗಿದೆ.. ಇದರಲ್ಲಿ 3 ಸ್ಕೀಮ್ ಗಳ ಮೂಲಕ ಸಾಲ ಪಡೆಯಬಹುದು..

  1. ಶಿಶು ಯೋಜನೆ – ಈ ಯೋಜನೆಯಡಿಯಲ್ಲಿ 50 ಸಾವಿರ ರೂಪಾಯಿಗಳವರೆಗೆ ವಾಣಿಜ್ಯೋದ್ಯಮ ಸ್ಥಾಪನೆ ಮಾಡಲು ಸಾಲ ಪಡೆಯಬಹುದು..
  2. ಕಿಶೋರ್ ಯೋಜನೆ – ಈ ಯೋಜನೆಯಡಿಯಲ್ಲಿ 50 ಸಾವಿರದಿಂದ 5 ಲಕ್ಷ ರೂಪಾಯಿಗಳ ವರೆಗೆ ಈಗಾಗಲೇ ಸ್ಥಾಪನೆಯಾಗಿರುವ ವಾಣಿಜ್ಯಕಾಗಿ ಪಡೆಯಬಹುದು.
  3. ತರುಣ್ ಯೋಜನೆ – ಈ ಯೋಜನೆಯಡಿಯಲ್ಲಿ 10 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆಯಬಹುದಾಗಿದೆ.. ಈಗಾಗಲೆ ಸ್ಥಾಪನೆಯಾಗಿರುವ ವಾಣಿಜ್ಯೋದ್ಯಮವನ್ನು ವಿಸ್ತರಿಸಲು ಸಾಲ ಪಡೆಯಬಹುದು..

ಶುಭವಾಗಲಿ ಶೇರ್ ಮಾಡಿ.. ಮಾಹಿತಿ ಹಂಚುವುದಕ್ಕಿಂತ ಮಹತ್ವವಾದದ್ದು ಬೇರೇನಿದೆ..

Amazon Big Indian Festival
Amazon Big Indian Festival
To Top