God

ರಾಹು ಮತ್ತು ಕೇತು ದೋಷ ನಿವಾರಣೆಗಾಗಿ ಶ್ರೀ ಕಾಳಹಸ್ತೀಶ್ವರ ಸ್ವಾಮಿ ದೇವಸ್ಥಾನಕೊಮ್ಮೆ ಭೇಟಿ ನೀಡಿ…

ವಿಶ್ವದಲ್ಲಿ ದೇವಾಲಯಗಳ ತಾಣವೆಂದರೆ ಅದು ಭಾರತ. ಭಾರತದಲ್ಲಿ ತುಂಬ ಐತಿಹಸಿಕವಾದ , ಪ್ರಸಿದ್ದಿಹೊಂದಿರುವ ಅತ್ಯಂತ ಶ್ರೀಮಂತ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯಕ್ಕೂ ಅದರದ್ದೇ ಆದ ಪೂಜಾ ವಿಧಾನ ಮತ್ತು ಇತರೆ ನಿಯಮಗಳಿವೆ. ಅವುಗಳನ್ನುಪಾಲಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ದಿನ ನಾವು ಅಂತದ್ದೇ ಒಂದು ಪ್ರಸಿದ್ದವಾದ ದೇವಾಲಯದ ನಿಯಮಗಳ ಬಗ್ಗೆ ನಿಮಗೆ ತಿಳಿಸುತ್ತೇವೆ.

 

ಈ ದೇವಾಲಯ ಅತ್ಯಂತ ದೊಡ್ಡ ಪವಿತ್ರವಾದ ಪುಣ್ಯಕ್ಷೇತ್ರವಾಗಿದೆ , ಈ ದೇವಾಲಯಕ್ಕೆ ಹೋಗಿ ಸ್ವಾಮಿಯ ದರ್ಶನ ಮಾಡಿದ ನಂತರ ಯಾವುದೇ ಕಾರಣಕ್ಕೂ ಬೇರೆ ದೇವಾಲಯಗಳಿಗೆ ಹೋಗುವುದು ನಿಷಿದ್ಧ , ಅದಕ್ಕೆ ಸೂಕ್ತ ಕಾರಣವೂ ಕೂಡ ಇದೆ. ಸಾಮಾನ್ಯವಾಗಿ ಒಂದು ಜಾಗಕ್ಕೆ ಹೋದರೆ ಅಲ್ಲಿನ ಸುತ್ತಮುತ್ತಲ ಪ್ರದೇಶವನ್ನು ನೋಡಬೇಕು ಎಂದು ಅಂದುಕೊಳ್ಳೋದು ಸಹಜ.  ಅಷ್ಟಕ್ಕೂ ಆ ಮಹಿಮಾನ್ವಿತವಾದ ದೇವಾಲಯ ಎಲ್ಲಿದೆ ಅಂತೀರಾ , ಅದು ಪಕ್ಕದ ರಾಜ್ಯ ಆಂಧ್ರ ಪ್ರದೇಶದಲ್ಲಿದ್ದು , ಪವಿತ್ರವಾದ ತೀರ್ಥಕ್ಷೇತ್ರವಾಗಿದೆ. ಹಾಗಾದರೆ ಆ ತೀರ್ಥಕ್ಷೇತ್ರ ಯಾವುದು , ಆ ದೇವಾಲಯಕ್ಕೆ ಹೋದ ಮೇಲೆ ಬೇರೆ ದೇವಾಲಯಕ್ಕೆ ಹೋದರೆ ಏನಾಗುತ್ತದೆ, ಅದರ ಪರಿಣಾಮವೇನು , ಎಂಬ ಹಲವು ಪ್ರೆಶ್ನೆಗೆ ಉತ್ತರವನ್ನ ಪಡೆಯೋಣ.

ಈ ದೇವಾಲಯವು ಸ್ವರ್ಣಮುಖಿ ನದಿ ತೀರದಲ್ಲಿ ನೆಲೆಸಿರುವ ಸ್ವಾಮಿ ಶ್ರೀ ಕಾಳಹಸ್ತಿಶ್ವರನ ಕ್ಷೇತ್ರ. ಸ್ವಯಂ ಭೂ ಲಿಂಗ ಎಂದು ಕೆಲವರು ಇನ್ನೂ ಕೆಲವರು ಬ್ರಹ್ಮ ದೇವನು ಪ್ರತಿಷ್ಟಾಪಿಸಿದ ಲಿಂಗ ಎಂದು ಹೇಳುತ್ತಾರೆ. ಲಿಂಗದ ಮುಂಭಾಗದಲ್ಲಿರುವ ದೀಪವು ಶಿವಲಿಂಗದಿಂದ ಬರುವ ಗಾಳಿಯಿಂದ ಕದಲುತ್ತದೆಯಂತೆ , ಶ್ರೀ ಕಾಳಹಸ್ತಿ ಕ್ಷೇತ್ರ ದಕ್ಷಿಣ ಕಾಶಿ ಎಂದು ಜಗತ್ ಪ್ರಸಿದ್ದಿ ಹೊಂದಿದೆ , ಶಿವರಾತ್ರಿಯ ದಿನದಂದು ವಿಜೃಂಭಣೆಯಿಂದ ಉತ್ಸವವನ್ನು ಆಚರಿಸಲಾಗುತ್ತದೆ.

 

ಶ್ರೀ ಕಾಳಹಸ್ತಿ ದೇವಾಲಯದ ನಿರ್ಮಾಣದಲ್ಲಿ ಒಂದು ವಿಶೇಷವಿದೆ. ಇಲ್ಲಿನ ವಿನಾಯಕ, ಶ್ರೀ ಕಾಳಹಸ್ತಿಶ್ವರ, ಜ್ಞಾನ ಪ್ರಸೂನಾಂಬ ದೇವತೆ, ದಕ್ಷಿಣ ಮೂರ್ತಿ ಒಬ್ಬೊಬ್ಬರು ಒಂದೊದು ದಿಕ್ಕಿಗೆ ಅಭಿಮುಖವಾಗಿದ್ದಾರೆ. ಈ ದೇವಾಲಯದ ದರ್ಶನದಿಂದಾಗಿ ಎಲ್ಲಾ ಕಾರ್ಯವು ಸಿದ್ಧಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ. ಶ್ರೀ ಆದಿ ಶಂಕರಾಚಾರ್ಯರು ಇಲ್ಲಿ ಶ್ರೀ ಚಕ್ರವನ್ನು ಸ್ಥಾಪಿಸಿದರು. ಈ ದೇವಾಲಯ ದಕ್ಷಿಣ ಕೈಲಾಸ, ಸತ್ಯ ಮಾಹಾ ಭಾಸ್ಕರಕ್ಷೇತ್ರ, ಸದಾಮುಕ್ತಿ ಕ್ಷೇತ್ರ ಇನ್ನೂ ಹಲವಾರು ಹೆಸರುಗಳಿಂದ ಪ್ರಸಿದ್ದಿ ಹೊಂದಿದೆ. ಶಿವರಾತ್ರಿಯ ದಿನದಂದು ವಿಜೃಂಭಣೆಯಿಂದ ಉತ್ಸವವನ್ನು ಆಚರಿಸಲಾಗುತ್ತದೆ.  ಶ್ರೀ ಕಾಳಹಸ್ತಿ ಕ್ಷೇತ್ರ ರಾಹು ಹಾಗೂ ಕೇತು ದೋಷವನ್ನು ಪರಿಹರಿಸುವ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ಪೂಜೆಗಳು ಮಾಡಿಸಿದರೆ ಸಕಲ ದೋಷ ನಿವಾರಣೆಯಾಗಿ ಸಂತಾನ ಭಾಗ್ಯ , ವಿವಾಹ , ಉದ್ಯೋಗ , ಮನೆಯಲ್ಲಿ ಶಾಂತಿ , ನೆಮ್ಮದಿ ನೆಲೆಸುತ್ತದೆ ಎಂಬುವ ನಂಬಿಕೆ ಇದೆ , ರಾಹು ಹಾಗೂ ಕೇತು ದೋಷ ಪರಿಹಾರ ಮಾಡಿಸಿಕೊಳ್ಳಲು ದೇಶದ ವಿವಿದೆಡೆ ಇಂದ ನಿತ್ಯವೂ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ.

 

 

ಶ್ರೀ ಕಾಳಹಸ್ತಿಯಲ್ಲಿ ದರ್ಶನ ಮಾಡಿದ ಮೇಲೆ ಅಥವಾ ರಾಹು , ಕೇತು ಶಾಂತಿ ಮಾಡಿದ ನಂತರ ನೇರವಾಗಿ ಮನೆಗೆ ತೆರಳಬೇಕು. ಇಲ್ಲವಾದರೆ ಅನಿಷ್ಟ ಸಂಭವಿಸುತ್ತದೆ ಎಂದು ನಂಬಲಾಗಿದೆ. ಇದಕ್ಕೆ ಕಾರಣ ದೋಷ ಪರಿಹಾರವಾಗಬೇಕಾದರೆ ಶ್ರೀ ಕಾಳಹಸ್ತಿಯಲ್ಲಿ ಪಾಪವನ್ನು ಬಿಟ್ಟು ಹೋಗುವುದೇ ಆಗಿದೆ. ತಿರುಗಿ ಯಾವುದೇ ದೇವಾಲಯಕ್ಕೂ ತೆರಳಬಾರದು ಎಂದು ಹೇಳುತ್ತಾರೆ. ಗ್ರಹಣಗಳು, ಶನಿ ಭಾದೆಗಳು ಪರಮಶಿವನಿಗೆ ಇರುವುದಿಲ್ಲ ಆದರೆ ಇತರೆ ದೇವತೆಗಳಿಗೆ ಈ ಎಲ್ಲಾ ದೋಷಗಳು ಇರುವುದರಿಂದ ಶ್ರೀ ಕಾಳಹಸ್ತಿಯಿಂದ ಬೇರೆ ದೇವಾಲಯಗಳಿಗೆ ಹೋಗಬಾರದು ಎಂದು ಹೇಳುತ್ತಾರೆ. ಇನ್ನು ಎಲ್ಲಾ ದೇವತೆಗಳಿಗೂ ಗ್ರಹಣದ ತೊಂದರೆಗಳು ಇರುತ್ತವೆ ಎಂದು ಹೇಳಲಾಗುತ್ತದೆ.

 

ಇದಕ್ಕೆ ಪುರಾವೆ ಗ್ರಹಣದ ಸಮಯದಲ್ಲಿ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಜೊತೆ ಜೊತೆಗೆ ಎಲ್ಲಾ ಪುಣ್ಯಕ್ಷೇತ್ರಗಳನ್ನು ಮುಚ್ಚುತ್ತಾರೆ , ಗ್ರಹಣ ಮುಗಿದ ಮೇಲೆ ಪ್ರೋಕ್‍ಷಣೆ ಮಾಡಿ ದೇವಾಲಯವನ್ನುತೆರೆಯುತ್ತಾರೆ. ಆದರೆ ಶ್ರೀ ಕಾಳಹಸ್ತಿಯಲ್ಲಿ ಮಾತ್ರ ಗ್ರಹಣದ ಸಮಯದಲ್ಲಿ ಬಾಗಿಲನ್ನು ತೆರೆದಿರುತ್ತಾರೆ , ಆ ದಿನ ಪ್ರತ್ಯೇಕವಾದ ಪೂಜೆಗಳನ್ನು ಮಾಡಲಾಗುತ್ತದೆ.  ಶ್ರೀ ಕಾಳಹಸ್ತಿಗೆ ತಿರುಪತಿಯಿಂದ ೩೦ ಕಿ,ಮೀ ದೂರದಲ್ಲಿರುವ ಈ ದೇವಾಲಯಕ್ಕೆ ತುಂಬ ಬಸ್‍ಗಳ ಸೌಕರ್ಯವಿದೆ. ರೈಲ್ವೆ ಮೂಲಕ ಹೋಗುವವರಿಗೆ ರಾಜಧಾನಿ ಬೆಂಗಳೂರಿನಿಂದ ತಿರುಪತಿಗೆ ನೇರವಾದ ತಿರುಪತಿ ಎಕ್ಸ್ಪ್ರೆಸ್ ರೈಲು ಇದೆ , ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ಶ್ರೀ ಕಾಳಹಸ್ತಿ ದೇವಾಲಯಕ್ಕೆ ತಲುಪಬಹುದಾಗಿದೆ.

ಇಂತಹ ಪುಣ್ಯಕ್ಷೇತ್ರಕ್ಕೆ ಒಮ್ಮೆಯಾದರು ಭೇಟಿ ನೀಡಿ ಶ್ರೀ ಕಾಳಹಸ್ತಿ ಸ್ವಾಮಿಯ ಕೃಪೆಗೆ ಪಾತ್ರರಾಗಿ….!

Amazon Big Indian Festival
Amazon Big Indian Festival

Copyright © 2016 TheNewsism

To Top