Achivers

೫ ರೂಪಾಯಿ ಡಾಕ್ಟರ್ ಶಂಕ್ರೇ ಗೌಡ್ರು, ಯಾವುದೇ ಧರಣಿ ಮಾಡದೇನೆ ರೋಗಿಗಳನ್ನೇ ಚಿಕಿತ್ಸೆ ನೀಡ್ತಾನೆ ಇದ್ದಾರೆ, ವೈದ್ಯೋ ನಾರಾಯಣೋ ಹರಿಃ ಅನ್ನೋದನ್ನ ನಿಜ ಮಾಡ್ತಿದ್ದಾರೆ..

ಡಾ.ಶಂಕರೇಗೌಡ ಈ ಹೆಸರು ಮಂಡ್ಯದಲ್ಲಿ ತುಂಬಾನೆ ಫೇಮಸ್ , ಚಿಕ್ಕವರಿಂದ ಹಿಡಿದು ಯಾರನ್ನು ಕೇಳಿದರು ಹೇಳುತ್ತಾರೆ , ಇವರ ಸೇವೆಯೇ ಅಂತಹುದು. ಸಕ್ಕರೆ ನಾಡಿನ ಜನರಿಗೆ ಇವರು ೫.ರೂ ಡಾಕ್ಟರ್ ಅಂತಾನೆ ಗೊತ್ತು. ಹೌದು ಇವರು ಬಹಳ ವರ್ಷಗಳಿಂದ ಜನರಿಗೆ ಅತ್ಯಂತ ಕಡಿಮೆ ಬೆಲೆ ಅಂದರೆ ಕೇವಲ ೫.ರೂ ಚಿಕಿತ್ಸೆ ಕೊಡುತ್ತಿದ್ದಾರೆ.

ಸರ್ಕಾರದ ಹೊಸ ವಿದೇಯಕದ ವಿರುದ್ದ ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿರುವ ನಡುವೆಯೂ ಐದು ರೂಪಾಯಿ ಡಾಕ್ಟರ್ ಎಂದೇ ಹೆಸರುವಾಸಿಯಾಗಿರುವ ಮಂಡ್ಯದ ಚರ್ಮರೋಗ ವೈದ್ಯ ಡಾ.ಶಂಕರೇಗೌಡ ರೋಗಿಗಳ ಸೇವೆಯನ್ನು ಎಂದಿನಂತೆ ಮುಂದುವರೆಸಿದ್ದು ವಿಶೇಷವಾಗಿತ್ತು.

ಭಾರತೀಯ ವೈದ್ಯಕೀಯ ಸಂಘಕ್ಕೆ ಹಿಂದಿನಿಂದಲೂ ವಿರೋಧಿಸಿಕೊಂಡು ಬಂದಿರುವ ಡಾ.ಶಂಕರೇಗೌಡ ಅವರು ಹಲವು ವರ್ಷಗಳಿಂದಲೂ ಚಿಕಿತ್ಸಾ ಶುಲ್ಕವನ್ನು ೫ ರೂ.ಗಿಂತ ಹೆಚ್ಚಿಸಿಲ್ಲ. ಸುಭಾಷ್ ನಗರದಲ್ಲಿ ಇರುವ ತಾರಾ ಕ್ಲಿನಿಕ್ ನಡೆಸುತ್ತಿರುವ ಚರ್ಮ, ಕುಷ್ಠ ಮತ್ತು ಲೈಂಗಿಕ ರೋಗ ವೈದ್ಯ ಡಾ.ಶಂಕರೇಗೌಡ ಅವರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ.

ಖಾಸಗಿ ವೈದ್ಯರ ಮುಷ್ಕರ ಇವರ ಕಾಯಕಕ್ಕೆ ಯಾವುದೇ ಅಡ್ಡಿಮಾಡಲಿಲ್ಲ , ತಾರಾ ಕ್ಲಿನಿಕ್‍ಗೆ ಬಂದ ನೂರಾರು ರೋಗಿಗಳಿಗೆ ಡಾ.ಶಂಕರೇಗೌಡರು ಬಾಗಿಲು ತೆರೆದು ಚಿಕಿತ್ಸೆ ನೀಡುತ್ತಿದ್ದಾರೆ. ಮಧ್ಯಾಹ್ನ ಸುಮಾರು ೨ ಗಂಟೆಗೆ ಕ್ಲಿನಿಕ್‍ ಗೆ ಆಗಮಿಸಿದ ಅವರು ಸಾಲಿನಲ್ಲಿ ನಿಂತ ರೋಗಿಗಳ ತಪಾಸಣೆ ನಡೆಸಿ ಚಿಕಿತ್ಸೆ ಕೊಡುತ್ತಿದ್ದಾರೆ. ತಾರಾ ಕ್ಲಿನಿಕ್‍ಗೆ ಬರುವ ಮುನ್ನ ತಮ್ಮ ಸ್ವಂತ ಊರಾದ ಶಿವಳ್ಳಿಯ ವೃತ್ತದಲ್ಲಿ ಕಟ್ಟೆಯ ಮೇಲೆ ಕುಳಿತುಕೊಂಡೇ ರೋಗಿಗಳಿಗೆ ಚಿಕಿತ್ಸೆ ಮಾಡುತ್ತಾರೆ.

ದುಡ್ಡಿಗಾಗಿ ಏನೆಲ್ಲ ಮಾಡುವ ಜನರಿರುವ ಈ ಕಾಲದಲ್ಲಿ ಬರಿ ೫.ರೂ.ಗೆ ಚಿಕಿತ್ಸೆ ನೀಡುತ್ತಿರುವುದು ತುಂಬಾ ಗ್ರೇಟ್ ಅಲ್ವಾ…

Amazon Big Indian Festival
Amazon Big Indian Festival

Copyright © 2016 TheNewsism

To Top