Achivers

ಇಡ್ಲಿ-ದೋಸೆ ಹಿಟ್ಟು ಮಾಡುವ ಸಂಸ್ಥೆಯೊಂದು ಈಗ ೧೦೦ ಕೋಟಿಗೂ ಅಧಿಕವಾಗಿ ಬೆಳೆದು ನಿಂತಿರುವ ಕಥೆ ಕೇಳಿ!!

ಕೇರಳದ ಒಂದು ಪುಟ್ಟ ಗ್ರಾಮ. ಆ ಗ್ರಾಮ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಇಲ್ಲಿ ಬೆಳೆದ ಪೋರ ದೊಡ್ಡ ಆಸೆ, ಕನಸು ಕಂಡು ಇಂದು ಈ ಗ್ರಾಮಕ್ಕೆ ಕಿರ್ತಿ ತಂದಿದ್ದಾನೆ. ಅಲ್ಲದೆ ತನ್ನ ಛಲದಿಂದಲೇ ಇಂದು ಮನೆ ಮಾತಾಗಿದ್ದಾನೆ. 100 ರೂಪಾಯಿ ಯಿಂದ ಉದ್ಯಮವನ್ನು ಆರಂಭಿಸಿ, 100 ಕೋಟಿ ವಹಿವಾಟು ಮಾಡುವಂತೆ ಆಗಿದ್ದಾನೆ.


ಹೌದು ಮುಸ್ತಾಫ್​​ ಐಡಿ ಫ್ರೆಶ್​ ಫುಡ್​ ಸಂಸ್ಥೆಯ ಸಿಇಒ. ಸದ್ಯ ಇವರು ಬೆಂಗಳೂರಿನಲ್ಲಿ ನೆಲಿಸಿದ್ದು, ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಚಿಕ್ಕದಾಗಿ ಆರಂಭಿಸಿದ ರೆಡಿ ಟು ಕುಕ್ ಫುಡ್ ಇಂದು ಬೃಹದಾಕಾರವಾಗಿ ಬೆಳೆದಿದೆ. ಇದೀಗ ಐಡಿ ಪ್ರೆಶ್ ಫುಡ್, ಇಡ್ಲಿ , ದೋಸೆ ಜೊತೆ ಜೊತೆಗೆ ಇನ್ನಿತರ ಸಿದ್ಧ ಆಹಾರ ಉತ್ಪನ್ನಗಳತ್ತ ಗಮನ ಹರಿಸಿದೆ. ಬೆಂಗಳೂರಿನ 17 ಸ್ಥಳಗಳಲ್ಲಿ ಐಡಿ ಟ್ರಸ್ಟ್ ಶಾಪ್ ತೆರೆಯಲಾಗಿದೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತಿಂಡಿ ತಿಂದವರು ಹಣ ಹಾಕಿ ಹೋಗುತ್ತಿದ್ದಾರೆ. ಇಡ್ಲಿ ಹಾಗೂ ದೋಸಾ ಹಿಟ್ಟಿನ ಗುಣ ಮಟ್ಟವನ್ನು ಕಾಯ್ದುಕೊಳ್ಳುವುದು ನಮ್ಮ ಮೂಲ ಉದ್ದೇಶ. ಈ ಉದ್ದೇಶವನ್ನು ಗಮನದಲ್ಲಿಟ್ಟಕೊಂಡು ಕಂಪನಿ ಕಾರ್ಯ ಮಾಡುತ್ತಿದೆ.


ಚಿಕ್ಕವರಿದ್ದಾಗ ಪಾಕೆಟ್​ ಮನಿಗೆ ಚಿಕ್ಕಪ್ಪರಿಂದ 100 ರೂಪಾಯಿ ಹಣವನ್ನು ಪಡೆದು ಕೇರಾಳದಲ್ಲಿ ಚಾಕಲೆಟ್​ ಹಾಗೂ ಸ್ವಿಟ್ಸ್​​ ಅಂಗಡಿಯನ್ನು ತೆರೆದೆ. ಅಲ್ಲದೆ ಉತ್ತಮ ವ್ಯಾಪಾರ ಆಯಿತು. ಬೇಸಿಗೆ ರಜೆಯಲ್ಲಿ ಕಲಿತ ವಿದ್ಯ ಇಂದಿಗೂ ನನ್ನ ಕೈ ಹಿಡಿದಿದೆ. ಅಲ್ಲದೆ ನಾನು ನಮ್ಮ ಚಿಕ್ಕಪ್ಪನಿಂದ ಪಡೆದ ಹಣವನ್ನು ಅವರಿಗೆ ಹಿಂದಿರುಗಿಸಿದ್ದೇನೆ ಎಂದು ಮುಸ್ತಫಾ ನೆನೆದ್ರು. ಅಲ್ಲದೆ ಇದರಿಂದ ನಮ್ಮ ತಂದೆಗೂ ಕೊಂಚ ಸಹಾಯ ಮಾಡೋಣ ಎಂಬ ಆಶಯ ನಮ್ಮದಾಗಿತ್ತು.


ಗ್ರಾಹಕರ ಅಭಿರುಚಿಗೆ ತಕ್ಕಂತೆ ಗುಣಮಟ್ಟದ ಸಿದ್ದ ಆಹಾರ ಉತ್ಪನ್ನ ಕೊಡುವುದು ಅತ್ಯಂತ ಸವಾಲಿನ ಕೆಲಸ. ಆದರೂ ಇದರಲ್ಲಿ ಯಶಸ್ಸಿಯಾಗುತ್ತೇವೆ. ರವಾ ಇಡ್ಲಿ ಮತ್ತು ವಡಾ ಪಾವ್ ರುಚಿ ಕೆಡದಿರಲು ಯಾವುದೇ ಪ್ರಿಸರ್ವೇಟಿವ್ ಬಳಸಲ್ಲ. ಹೆಚ್ಚು ದಿನ ಬಾಳಿಕೆ ಬರುವ ವಸ್ತುಗಳ ಬದಲಿಗೆ ಕನಿಷ್ಠ ದಿನಗಳ ಅವಧಿಯಲ್ಲಿ ಗುಣಮಟ್ಟದ ಉತ್ಪನ್ನ ನೀಡುವುದೇ ನಮ್ಮ ಧ್ಯೇಯ ವಾಕ್ಯ ಎನ್ನುತ್ತಾರೆ ಮುಸ್ತಪಾ. ಒಟ್ಟಿನಲ್ಲಿ ಆಹಾರ ಕ್ಷೇತ್ರದಲ್ಲಿ ಅದರಲ್ಲೂ ಮುಖ್ಯವಾಗಿ ಸಿದ್ಧ ಆಹಾರ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾಲ ಸನ್ನಿಹಿತವಾಗಿದೆ ಎಂದು ಹೇಳ್ತಾರೆ ಮುಸ್ತಫಾ ತಿಳಿಸಿದ್ದಾರೆ.
ಇನ್ನು ಮುಸ್ತಾಫ್​ರ ಕಂಪನಿಯ ಪ್ರಾಡ್ಕಟ್​ ಬರೀ ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲ, ಪಕ್ಕದ ರಾಜ್ಯಗಳಲ್ಲೂ ಹೆಸರುವಾಸಿ. ದುಬೈಗೆ ಮುಸ್ತಫಾ ಕಂಪನಿಯಿಂದ ದಿನಂಪ್ರತಿ ಹಿಟ್ಟು ಹೊಗುತ್ತದೆ.

Amazon Big Indian Festival
Amazon Big Indian Festival

Copyright © 2016 TheNewsism

To Top