Achivers

ಟ್ಯಾಕ್ಸಿ ನಡೆಸುತ್ತಿದ್ದವರ ಮಗ ೩೦೦ ಕೋಟಿ ಟ್ರಾವೆಲ್ಸ್ ಕಂಪನಿ ಕಟ್ಟಿದ ಕಥೆ ಕೇಳಿ, ಸ್ವಂತ ಉದ್ಯಮಿಯಾಗಬೇಕೆಂಬ ನಿಮ್ಮ ಛಲಕ್ಕೆ ಹುಮ್ಮಸ್ಸು ಬರುತ್ತೆ…

ಕ್ರೀಡಾ ಪಟುಗಳಿಗೆ ಗಾಯ ಬಿಟ್ಟಿದಲ್ಲ.. ಅದೆಷ್ಟೋ ಕ್ರಿಡಾ ಪಟುಗಳ ಜೀವನವನ್ನು ಗಾಯ ಹಾಳು ಮಾಡಿದೆ. ಆದ್ರೆ ಇಲ್ಲೋಬರ ಬದುಕನ್ನು ಗಾಯವೇ ಹಸನಾಗಿಸಿದೆ. ಹೀಗೇಂದು ನಾವೇನು ಹೇಳುತ್ತಿಲ್ಲ. ಇದನ್ನು ಗಾಯಕ್ಕೆ ಒಳಗಾದ ವ್ಯಕ್ತಿಯೇ ಹೇಳಿದ್ದು. ನಾನು ಇನ್ನು ಆಟವನ್ನು ಆಡುತ್ತಿದ್ದರೆ ಪ್ರಾಯಶಃ ನಾನು ನಿವೃತ್ತಿ ಹೊಂದುವಾಗ ರೈಲ್ವೆಯಲ್ಲಿ ಟಿಕೆಟ್​ ಕಲೆಕಟರ್​ ಆಗುತ್ತಿದ್ದೆ ನಗುತ್ತಲೆ ಎಂದು ನಗುತ್ತಾ ತಿಳಿಸಿದ್ರು.


ಹೀಗಾಂತ ಹೇಳಿದ್ದು ಯಾರು ಎಂದುಕೊಂಡ್ರಾ ಭಾರತ ಹಾಗೂ ರಾಜ್ಯ ತಂಡವನ್ನು ಮುನ್ನಡೆಸಿದ ಬಾಸ್ಕೆಟ್​ಬಾಲ್​ ಆಟಗಾರ. ಹೌದು ಮಾಹಾರಾಷ್ಟ್ರ ಪ್ರಸನ್ನ ಪಠವರ್ಧನ್​ ಸದ್ಯ ಉದ್ಯೋಗಿ. ತಂದೆ ಕಂಡ ಕನಸಿನ ಹಿಂದೆ ಬಿದ್ದು, ಯಶ ಕಂಡ ಸಾಧಕ. ಯಾರದ್ದೋ ಕೈಯಲ್ಲಿ ದುಡಿಯುವುದಕ್ಕಿಂತ ನಾನೇ ಏನಾದ್ರೂ, ಸಾಧಿಸಿ ತೋರಿಸ್ತೀನಿ ಎಂಬ ಛಲ, ಇಂದು ಪ್ರಸನ್ನರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಅಂದಹಾಗೆ ಪ್ರಸನ್ನಾ Prasanna Purple Mobility Solutions Pvt. Ltd. ಒಡೆಯ. 1964ರಲ್ಲಿ ತಂದೆ ಆರಂಭಿಸಿದ ಕಂಪನಿಯನ್ನು ಹೆಮ್ಮರವಾಗಿ ಬೆಳಿಸಿದ ಸಾಧಕ.


ಪ್ರಸನ್ನ ಅವರ ಕಂಪನಿಯಲ್ಲಿ ಸದ್ಯ 1200 ಬಸ್​​ಗಳಿದ್ದು, 85 ನಗರಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಿವೆ. ಅಂದಹಾಗೆ ಈ ಕಂಪನಿಗಳಲ್ಲಿ 700 ಬಸ್​ಗಳು ಸ್ವತಃ ಪ್ರಸನ್ನಅವರದ್ದೇ ಆಗಿದೆ. ಸದ್ಯ ಪ್ರಸನ್ನ ಮೂರು ಕಂಪನಿಗಳನ್ನು ನಡೆಸುತ್ತಿರುವ ಉದ್ಯಮಿ. 1964ರಲ್ಲಿ ಪ್ರಸನ್ನಾ ಟ್ರಾವೆಲ್ಸ್​ ಎಂದು ಇದ್ದ ಕಂಪನಿ, ಈಗಿನ ಟ್ರೆಂಡ್​ಗೆ ಅನುಗುಣವಾಗಿ ಹೆಸರನ್ನು ಬದಲಿಸಿಕೊಂಡಿದೆ. ಅಂದಹಾಗೆ ಈಗ ಪ್ರಸನ್ನ ಪರ್ಪಲ್​ ಎಂಬ ಹೆಸರಿನಿಂದ ಎಲ್ಲರ ಮನ ಗೆದ್ದಿದೆ.
ಮಹಾರಾಷ್ಟ್ರದ ಅವಿಭಕ್ತ ಕುಟಂಬದಲ್ಲಿ ಜನಿಸಿದ ಪ್ರಸನ್ನ ಅವರ ಮನೆಯಲ್ಲಿ 24 ಜನ.

ಎಲ್ಲರು ತಮ್ಮ ಕುಟುಂಬವನ್ನು ಸಂಕಷ್ಟದಿಂದ ಮೇಲೆತ್ತಲು ಶ್ರಮಿಸೋರೆ. ಪ್ರಸನ್ನರ ತಂದೆಯ ಸಹೋದರ ಡೈರಿ ಇಟ್ಟುಕೊಂಡಿದ್ರು. ಅಲ್ಲದೆ ಉತ್ತಮ ವ್ಯಾಪಾರ ಸಹ ಇತ್ತು. ಒಂದು ದಿನ ಪ್ರಸನ್ನರ ತಂದೆಗೆ ದೊಡ್ಡ ಹೊಡೆತ ಬಿದ್ದಿತು. ಒಂದು ಶಾಲೆಗೆ ಊಡಿಸುತ್ತಿದ್ದ ಬಸ್​​ಗಳ ಸೇವೆಯನ್ನು ಶಾಲೆ ಸ್ಥಗಿತ ಗೊಳಿಸಿತು. ಅಲ್ಲದೆ ಇನ್ನು ಬೇಕಿದ್ರೆ ಹೇಳ್ತಿವಿ ಎಂದಿತು. ಇದ್ರಿಂದ ಶಾಕ್​ ಬಡೆದವರಂತೆ ಆದರು. ಆದರೆ ಮೇಲೆಳಬೇಕೆಂಬ ನಿರ್ಧಾರವನ್ನು ಬಿಟ್ಟಿರಲಿಲ್ಲ.


1985ರಲ್ಲಿ ಮ್ಯಾನೆಜ್​​ಮೆಂಟ್​​ನಲ್ಲಿ ಡಿಗ್ರಿ ಮಾಡುತ್ತಿದ್ದ ಪ್ರಸನ್ನ ತಂದೆಯ ಕನಸಿನ ಕೂಸಿಗೆ ನೀರು ಹಾಕಲು ಮುಂದಾದ್ರು. ಪರಿಣಾಮ ಇಂದು ಪ್ರಸನ್ನ ಪರ್ಪಲ್​ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ.

Amazon Big Indian Festival
Amazon Big Indian Festival

Copyright © 2016 TheNewsism

To Top