Achivers

ಲಕ್ಷಾಂತರ ರೂಪಾಯಿ ಕಿತ್ತುವ ಡಾಕ್ಟರ್-ಗಳ ನಡುವೆ ಯಾವ ಅಪೇಕ್ಷೆಯೂ ಇಲ್ಲದೆ ಕೇವಲ 2 ರೂ ಫೀಸ್ ನಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಈ ಡಾಕ್ಟರ್!!

ತಿರುವೆಂಗಡಂ ವೀರರಾಘವನ್ , ಈ ಹೆಸರು ವ್ಯಾಸರ್ಪಡಿ ಉತ್ತರ ಚೆನ್ನೈನಲ್ಲಿ ಯಾರನ್ನು ಕೇಳಿದರು ಹೇಳುತ್ತಾರೆ , ಇವರ ಸೇವೆಯೇ ಅಂತಹುದು. ಜನರಿಗೆ ಇವರು ೨.ರೂ ಡಾಕ್ಟರ್ ಅಂತಾನೆ ಗೊತ್ತು. ಹೌದು ಇವರು ಕಳೆದ ೪೦ ವರ್ಷಗಳಿಂದ ಜನರಿಗೆ ಅತ್ಯಂತ ಕಡಿಮೆ ಬೆಲೆ ಅಂದರೆ ಕೇವಲ ೨.ರೂ ಚಿಕಿತ್ಸೆ ಕೊಡುತ್ತಿದ್ದಾರೆ.

ಸ್ಟಾನ್ಲಿ ಮೆಡಿಕಲ್ ಕಾಲೇಜಿನಿಂದ ಎಂಬಿಬಿಎಸ್ ಡಿಗ್ರಿ ಪಡೆದ ಇವರು , ಕಾಲೇಜು ದಿನಗಳಿಂದಲೂ ಜನ ಸೇವೆ ಮಾಡುತ್ತಿದ್ದಾರೆ.
ಆರಂಭದಲ್ಲಿ ಉಚಿತವಾಗಿ ಚಿಕಿತ್ಸೆ ಮಾಡುತ್ತಿದ್ದ ಇವರು ನಂತರ ೨ ರೂ ಫೀ ಮಾಡಿದರು ಈಗ ಅವರ ರೋಗಿಗಳ ಒತ್ತಾಯದ ಮೇರೆಗೆ ೫ ರೂ ಫೀ ಮಾಡಿದ್ದಾರೆ. ಇವರಿರುವ ಜಾಗದ ಆಸುಪಾಸಿನಲ್ಲಿ ಇರುವ ಎಲ್ಲ ಕ್ಲಿನಿಕ್ ಗಳು ಕಡಿಮೆ ಎಂದರು ೧೦೦ ರೂ ಚಿಕಿತ್ಸೆ ಶುಲ್ಕ ವಿಧಿಸುತ್ತಿದ್ದಾರೆ. ಕೆಲವರು ತಿನ್ನುವ ವಸ್ತುಗಳು , ಆಹಾರ ಪದಾರ್ಥಗಳು ಹೀಗೆ ತಮಗೆ ತೋಚಿದ ವಸ್ತುಗಳನ್ನು ಕೊಟ್ಟ ಉದಾಹರಣೆಗಳಿವೆ.

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ವಿಜಯ್ ಅವರ ಇತ್ತೀಚಿಗೆ ಬಿಡುಗಡೆಯಾದ ಚಿತ್ರ “ಮರ್ಸಲ್” ನಲ್ಲಿ  ೫.ರೂ ಡಾಕ್ಟರ್ ಅಂತ ಪಾತ್ರ ನಿಬಾಯಿಸ್ಸಿದ್ದರು ಆ ಪಾತ್ರ ಇವರಿಂದ ಸ್ಫೂರ್ತಿ ಪಡೆದು ಮಾಡಲಾಗಿದೆ . ಇವರ ಈ ಸಾಧನೆ ಕಾಸಿಗಾಗಿ ಜನರ ಜೀವದ ಜೊತೆ ಆಟವಾಡುವ ಖಾಸಗಿ ಆಸ್ಪತ್ರೆಗಳಿಗೆ ಒಂದು ಪಾಠವಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ದಿನದ ವೇಳೆಯಲ್ಲಿ ಕೆಲಸ ಮಾಡುವ ಇವರು ನಂತರ ಸಂಜೆಯಿಂದ ಮಧ್ಯರಾತ್ರಿವರೆಗೆ ಚೆನ್ನೈನ ಪ್ರೈವೇಟ್ ಕ್ಲಿನಿಕ್ ಗಳಲ್ಲಿ ಉಚಿತವಾಗಿ ಸೇವೆ ಮಾಡುತ್ತಾರೆ.

ಶ್ರೀ ಕಲ್ಯಾಣಪುರಂ ನಲ್ಲಿ ೧೯೫೦ರಲ್ಲಿ ಹುಟ್ಟಿದ ಇವರು ತಮ್ಮ ೪ ಜನ ತಂಗಿಯರು , ತಂದೆ ಹಾಗು ಇಬ್ಬರು ಚಿಕಪ್ಪ ನವರ ಜೊತೆ ತಮ್ಮ ಪೂರ್ವಜರು ಕಟ್ಟಿದ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಅವರ ತಂದೆ ಹಾಗು ಚಿಕಪ್ಪ ನವರು ಸಂತ ಜಾನ್ ಆಂಬುಲೆನ್ಸ್ ಸರ್ವಿಸ್ ನಲ್ಲಿ ವಾಲಂಟೀರ್ಸ್ ಗಳನ್ನು ಪ್ರಥಮ ಚಿಕಿತ್ಸೆಗಾಗಿ ತರಬೇತಿ ಗೊಳಿಸುತ್ತಿದ್ದರು. ಬಹುಶ ಇವರಿಂದಲೇ ವೀರರಾಘವನ್ ಅವರಿಗೆ ಸ್ಫೂರ್ತಿ ಸಿಕ್ಕಹಾಗಿದೆ. ಇವರ ತುಂಬಿದ ಕುಟುಂಬ ಪೂರ್ವಜರು ಕಟ್ಟಿದ ಮನೆಯಲ್ಲಿಯೇ ೨೦ ಜನ ವಾಸಮಾಡುತ್ತಾರೆ , ಇವರ ತಂದೆ ಹಾಗು ಇಬ್ಬರು ಚಿಕಪ್ಪ ನವರು ರಿಜಿಸ್ಟರ್ಡ್ ಸಿದ್ಧ ಚಿಕಿತ್ಸೆ ಅಭ್ಯಾಸ ಮಾಡುತ್ತಿದ್ದಾರೆ. ಜ್ವರ , ನೆಗಡಿ , ಕೆಮ್ಮು , ಅತಿಸಾರ , ಹೊಟ್ಟೆ ನೋವು ಎಂದು ಬರುವ ರೋಗಿಗಳಿಗೆ ಸದಾ ಇವರ ಬಾಗಿಲು ತೆರಿದಿರುತ್ತದೆ.

ಇವರು ನಡೆದುಬಂದ ಹಾದಿ:
ವಾಷರ್ ಮೆನ್ ಪೆಟ್ ನಲ್ಲಿರುವ ತ್ಯಾಗರಾಯ ಚೆಟ್ಟಿ ಶಾಲೆಯಲ್ಲಿ ೬ ನೇ ತರಗತಿ ಇಂದ ೧೧ ನೇ ತರಗತಿ ವರಗೆ ಓದಿದರು.
ಗಣಪತಿ ಎಂಬುವವರು ನಡೆಸಿದ ಉಚಿತ ತುಯಿಷನ್ ನಿಂದ ಪ್ರೋತ್ಸಾಹ ಪಡೆದು ಎಂಬಿಬಿಎಸ್ ಗೆ ಅರ್ಜಿ ಸಲ್ಲಿಸಿದರು.
೧೯೬೮ ರಲ್ಲಿ , ೧೧೦೦ ವಿದ್ಯಾರ್ಥಿಗಳಲ್ಲಿ ಇವರು ಆಯ್ಕೆಯಾಗಿ ಸ್ಟಾನ್ಲಿ ಮೆಡಿಕಲ್ ಕಾಲೇಜಿನಿಂದ ಡಿಗ್ರಿ ಪಡೆದರು.
ಮೊದಲು ಮದ್ರಾಸ್ ನ ತೊಂಡೈರ್ಪೆಟ್ ನಲ್ಲಿರುವ ಕಂಮ್ಯುನಿಕೇಬಲ್ ಡಿಸೀಸಸ್ ಆಸ್ಪತ್ರೆಯಲ್ಲಿ ಕುಷ್ಠ ರೋಗಿಗಳಿಗೆ ಚಿಕಿತ್ಸೆ ನೀಡಲು ಕಲಿತರು.
೨೦೦೦ ಇಸವಿಯಲ್ಲಿ ಚೆನ್ನೈನಲ್ಲಿ ಕೈಗಾರಿಕಾ ಔಷದ ವನ್ನು ೩ ತಿಂಗಳವರೆಗು ಕಲಿತರು.
೨೦೦೩ ರಿಂದ ಕೈಗಾರಿಕಾ ಔಷದ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಹೆಂಡತಿ ಭಾರತೀಯ ರೈಲ್ವೆ ಯಲ್ಲಿ ಕೆಲಸ ಮಾಡುತ್ತಿದ್ದರು ಈಗ ನಿವೃತ್ತಿ ಹೊಂದಿದ್ದಾರೆ. ಇವರ ಮಗ ದೀಪಕ್ ಹಾಗು ಮಗಳು ಪ್ರೀತಿ ಮಾರಿಷಸ್ ನಲ್ಲಿ ಎಂಬಿಬಿಎಸ್ ಮಾಡುತ್ತಿದ್ದಾರೆ.

ಇಂತ ಇಳಿ ವಯಸ್ಸಿನಲ್ಲೂ ಇವರ ಈ ಸೇವೆ ಈಗಿನ ಯುವಕರಿಗೆ ಸ್ಪೂರ್ತಿದಾಯಕವಾಗಿದೆ…!

Amazon Big Indian Festival
Amazon Big Indian Festival

Copyright © 2016 TheNewsism

To Top