Achivers

ವೀರೇಂದ್ರ ಹೆಗ್ಗಡೆಯವರ ಜೀವನದ ಸಾಧನೆಗಳನ್ನು ಓದಿದರೆ, ಒಬ್ಬ ವ್ಯಕ್ತಿ ಇಷ್ಟೆಲ್ಲಾ ಸಾಧನೆಗಳನ್ನು ಮಾಡಲು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡುತ್ತದೆ!!

ಪಶ್ಚಿಮಘಟ್ಟಗಳ ಚಾರ್ಮಾಡಿಯ ತಪ್ಪಲಿನಲ್ಲಿರುವಂತಹ ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರ ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುವಂತಹ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಅಣ್ಣಪ್ಪ ಸ್ವಾಮಿ ದೈವದೊಂದಿಗೆ ಈ ಕ್ಷೇತ್ರದಲ್ಲಿ ನೆಲೆಯಾಗಿರುವಂತಹ ಮಂಜುನಾಥ ಸ್ವಾಮಿ ಭಕ್ತರ ಅಭೀಷ್ಟಗಳನ್ನು ತಾರತಮ್ಯವಿಲ್ಲದೆ ನೆರವೇರಿಸುತ್ತಾನೆ ಎನ್ನುವ ಬಲವಾದ ನಂಬಿಕೆಯಿಂದಲೇ ಇಲ್ಲಿಗೆ ದೇಶ ಹಾಗೂ ವಿದೇಶಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಶ್ರೀ ಕ್ಷೇತ್ರದ ದೇವಸ್ಥಾನವು ಹೆಗ್ಗಡೆ ಮನೆತನದ ಒಡೆತನದಲ್ಲಿದ್ದು, ಈ ಕ್ಷೇತ್ರದ ಉಸ್ತುವಾರಿಯನ್ನು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ವಹಿಸಿಕೊಂಡಿದ್ದು, ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ದೈವದ ಹಾಗೂ ಭಕ್ತರ ನಡುವಿನ ಕೊಂಡಿಯಂತೆ ಇದ್ದಾರೆ. ಮಂಜುನಾಥನಲ್ಲಿ ಹೇಳುವ ಪ್ರಾರ್ಥನೆಯನ್ನು ಇವರ ಮೂಲಕ ಸಲ್ಲಿಸಿದರೂ ಅದು ದೇವರಿಗೆ ಸಲ್ಲುತ್ತದೆ ಎನ್ನುವ ಅಚಲ ನಂಬಿಕೆ ಇಲ್ಲಿಗೆ ಬರುವ ಭಕ್ತರಲ್ಲಿದ್ದು, ಈ ಕಾರಣಕ್ಕಾಗಿಯೇ ಇವರನ್ನು ಭಕ್ತರು ಮಾತನಾಡುವ ಮಂಜುನಾಥ ಎಂದು ಕೂಡಾ ಕರೆಯುತ್ತಾರೆ.

ಶ್ರೀಕ್ಷೇತ್ರ ಧರ್ಮಸ್ಥಳ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಧರ್ಮಕರ್ತರಾಗಿ, ಜನರ ಹಿತಕ್ಕಾಗಿ ಸೇವೆಸಲ್ಲಿಸುತ್ತಿದ್ದಾರೆ, ವಿಶ್ವದಾದ್ಯಂತ ಅಹಿಂಸಾ ತತ್ವವನ್ನು ಪ್ರಚಾರ ಮಾಡುತ್ತಿದ್ದಾರೆ. ಇಂದು ಡಾ.ಡಿ. ವೀರೇಂದ್ರ ಹೆಗ್ಗಡೆಯವರ ೭೦ ನೇ ಜನ್ಮದಿನ.

ಇವರು ಹುಟ್ಟಿದ್ದು ನವೆಂಬರ್ ೨೫ ೧೯೪೮ ರಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ , ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆ ರತ್ನಮ್ಮ ಹೆಗ್ಗಡೆ ಯವರ ಮೊದಲ ಪುತ್ರ. ಇವರ ಲೋಕೋಪಕಾರಿ ಗುಣದಿಂದ ಜನರ ಮೆಚ್ಚುಗೆ ಪಡೆದ್ದಿದ್ದಾರೆ. ಇವರು ಶ್ರೀಕ್ಷೇತ್ರದ ಧರ್ಮಾಧಿಕಾರ ವಯಸಿಕೊಂಡಾಗ ಅವರಿಗೆ ಕೇವಲ ೨೦ ವರ್ಷ ಇಂತ ಚಿಕ್ಕ ವಯಸ್ಸಿನಲ್ಲಿಯೇ ಅತ್ಯಂತ ಜವಾಬ್ದಾರಿಯುತ ಹುದ್ದೆ ನಿಭಾಯಿಸಿದವರು ಇವರು.

ಇವರಿಗೆ ಮೂವರು ತಮ್ಮಂದಿರು ಹರ್ಷೇನ್ದ್ರ ಕುಮಾರ್ ಹೆಗ್ಗಡೆ , ಸುರೇಂದ್ರ ಕುಮಾರ್ ಹೆಗ್ಗಡೆ, ರಾಜೇಂದ್ರ ಕುಮಾರ್ ಹೆಗ್ಗಡೆ ಹಾಗು ಪದ್ಮಲತಾ ಹೆಗ್ಗಡೆ ಎಂಬ ಒಬ್ಬ ತಂಗಿ ಇದ್ದಾರೆ. ಶ್ರೀ ಹೆಗ್ಗಡೆಯವರು ಮತ್ತು ಅವರ ಪತ್ನಿ ಹೇಮಾವತಿ ಹೆಗ್ಗಡೆಯವರಿಗೆ ಶ್ರದ್ಧಾ ಎಂಬ ಒಬ್ಬ ಮಗಳಿದ್ದಾಳೆ.

ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪೆರ್ಗಡೆ ಸಾಮ್ರಾಜ್ಯದ ೨೧ ನೇ ಧರ್ಮಾಧಿಕಾರಿಯಾಗಿ, ಶ್ರೀ ಧರ್ಮಸ್ಥಳ ಕ್ಷೇತ್ರದ ಸೇವೆ ಹಾಗು ಜನರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಶ್ರೀ ಕ್ಷೇತ್ರದ ಅಧಿಕಾರವಹಿಸಿಕೊಂಡ ಬಳಿಕ ಇವರು ತೆಗೆದುಕೊಂಡ ಪ್ರತಿಯೊಂದು ಅಭಿವೃದ್ಧಿ ಕಾರ್ಯವು, ಧರ್ಮಸ್ಥಳವನ್ನು ಇಡೀ ವಿಶ್ವವೇ ನೋಡುವ ಹಾಗೆ ಮಾಡಿದೆ. ಇವರಿಗೆ ಕಾರುಗಳನ್ನು ಸಂಗ್ರಹಿಸುವ ಮತ್ತು ಫೋಟೋ ತೆಗೆಯುವ ಹವ್ಯಾಸವಿದೆ, ಇವರು ಸಂಗ್ರಹಿಸಿರುವ ಕಾರ್-ಗಳಿಂದಲೇ ಧರ್ಮಸ್ಥಳದಲ್ಲಿ “ಮಂಜೂಷ” ಎಂಬ ಒಂದು ಕಾರ್-ಮ್ಯೂಸಿಎಂ ಆಗಿದೆ, ಅದರಲ್ಲಿ ದೇಶ-ವಿದೇಶದ ಹಲವು ಬ್ರಾಂಡ್-ಗಳ ಕಾರುಗಳಿವೆ.

ಸರ್ವ ಧರ್ಮ ಮತ್ತು ಸಾಹಿತ್ಯ ಸಮ್ಮೇಳನ ಧರ್ಮಸ್ಥಳದಲ್ಲಿ ನಡೆಯುತ್ತವೆ, ಧರ್ಮ, ವಿದ್ಯೆ, ಸಾಹಿತ್ಯ, ಜ್ಞಾನ ಇವೆಲ್ಲವನ್ನೂ ಬೆಳೆಸಲು ಹೆಗ್ಗಡೆ ಯವರು ಈ ಕ್ರಮ ಕೈಗೊಂಡಿದ್ದಾರೆ. ೨೦೧೭ ರಲ್ಲಿ ಇಲ್ಲಿ ೮೫ ನೇ ಸಮ್ಮೇಳನ ನಡೆದಿದೆ. ಇವರು ಕಲೆ ಮತ್ತು ಸಾಹಿತ್ಯವನ್ನು ತುಂಬಾ ಗೌರವಿಸುತ್ತಾರೆ, ಇವರಿಗೆ ಪುಸ್ತಕ ಓದುವ ಹವ್ಯಾಸ ತುಂಬಾ ಹೆಚ್ಚಾಗಿಯೆಯಿದೆ, ಇವರು ಬರೆಯುವ ಪುಸ್ತಕ “ಮಂಜುವಾಣಿ” ಪ್ರತಿ ತಿಂಗಳು ಪ್ರಕಟವಾಗುತ್ತದೆ. ಇವರು ಪ್ರಕೃತಿಚಿಕಿತ್ಸೆ, ಯೋಗ ಮತ್ತು ನೈತಿಕ ಶಿಕ್ಷಣ ಕಲಿಸಲು ೪೦೦ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರನ್ನು ನೇಮಿಸಿದ್ದಾರೆ, ಈ ಶಿಕ್ಷಕರು ೩೦೦೦೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಯೋಗ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಹೇಳಿಕೊಡುತ್ತಾರೆ. ಸುಮಾರು ೪೦೦೦ ಪಾಮ್-ಎಲೆ ಹಸ್ತಪ್ರತಿಗಳು “ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ” ದಲ್ಲಿವೆ ಇವನ್ನು ವಿದ್ವಾಂಸರು ಅಧ್ಯಯನ ಮಾಡುತ್ತಾರೆ.

ಇಲ್ಲಿ ೧೯೭೨ ರಿಂದ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಯುತ್ತವೆ, ಹೆಗ್ಗಡೆಯವರು ಏಪ್ರಿಲ್ ೨೦೦೪ ವೇಳೆಗೆ ಸುಮಾರು ೧೦೦೦೦ ಜನರಿಗೆ ಉಚಿತ ವಿವಾಹ ಮಾಡಿಸಿದ್ದಾರೆ. ಬೆಂಗಳೂರು, ಕಲ್ಲಹಳ್ಳಿ, ಭದ್ರಾವತಿ, ಮೈಸೂರು, ಶ್ರವಣಬೆಳಗೊಳ ಮತ್ತು ಬಂಟ್ವಾಳದಲ್ಲಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗಾಗಿ ಕಲ್ಯಾಣ ಮಂಟಪಗಳನ್ನು ಕಟ್ಟಿಸಿದ್ದಾರೆ. ಹೆಗ್ಗಡೆ ಅವರ ಗ್ರಾಮೀಣ ಅಭಿವೃದ್ಧಿ ಯೋಜನೆಯಿಂದ ೬೦೦ ಹಳ್ಳಿ ಮತ್ತು ೬ ಪಟ್ಟಣಗಳ ೧೩೫೦೦೦ ಜನರಿಗೆ ವಿವಿಧ ರೀತಿಯಿಂದ ಉಪಯೋಗವಾಗಿದೆ. ಸುಮಾರು ೧೫೦೦೦೦ ಯುವಕರಿಗೆ ತಮ್ಮ “ರೂರಲ್ ಡೆವಲಪ್ಮೆಂಟ್ ಅಂಡ್ ಸೆಲ್ಫ್ -ಎಂಪ್ಲಾಯ್ಮೆಂಟ್ ಟ್ರೈನಿಂಗ್ ಇನ್ಸ್ಟಿಟ್ಯೂಟ್” (RUDSETI), ಮತ್ತು ಸಿಂಡಿಕೇಟ್ ಹಾಗು ಕೆನರಾ ಬ್ಯಾಂಕ್ ನೆರವಿನೊಂದಿಗೆ ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಗೆ ಸಹಾಯಮಾಡಿದ್ದಾರೆ. ಇವರು ಎಸ್ ಡಿ ಎಂ ವಿದ್ಯಾ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ, ಎಸ್ ಡಿ ಎಂ ಕಾಲೇಜು ಉಜಿರೆ, ಎಸ್ ಡಿಎಂಐಡಿಎಂ ಮೈಸೂರು ಎಂಬಿಏ ಭಾರತದ ಟಾಪ್ ಕಾಲೇಜು ಆಗಿದೆ, ರತ್ನಮಾನಸ ಹಾಸ್ಟೆಲ್, ಶ್ರೀ ಸಿದ್ದವನ ಗುರುಕುಲ, ಎಸ್ ಡಿ ಎಂ ಆಸ್ಪತ್ರೆ ಇವರು ಸ್ಥಾಪಿಸಿದ ಮತ್ತು ದೇಶದಲ್ಲಿಯೇ ಹೆಸರಾಂತ ವಿದ್ಯಾ ಸಂಸ್ಥೆ ಹಾಗು ಆಸ್ಪತ್ರೆಗಳು.

ಇವರ ಸಾಮಾಜಿಕ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಇವರಿಗೆ ೨೦೧೫ ರಲ್ಲಿ ಪದ್ಮ ವಿಭೂಷಣ್, ೨೦೦೦ ರಲ್ಲಿ ಪದ್ಮ ಭೂಷಣ, ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮ ರಿಂದ “ರಾಜರ್ಷಿ” ಎಂಬ ಬಿರುದು, ಕರ್ನಾಟಕ ಸರ್ಕಾರದಿಂದ ೨೦೦೯ ರಲ್ಲಿ ಕರ್ನಾಟಕ ರತ್ನ, ನವೆಂಬರ್ ೧೯೯೪ ರಲ್ಲಿ ಇಂದಿರಾ ಗಾಂಧಿ ಪ್ರಿಯದರ್ಶಿನಿ ಅವಾರ್ಡ್, ಅಂದಿನ ಪ್ರಧಾನಿ ಪಿ.ವಿ.ನರಸಿಂಹ ರಾವ್ ರಿಂದ ೧೯೯೫ ರಲ್ಲಿ ಫೆಡರೇಶನ್ ಆ ಇಂಡಿಯನ್ ಚೇಂಬರ್ಸ್ ಆ ಕಾಮರ್ಸ್, ೧೯೯೯ ರಲ್ಲಿ ಪ್ರಧಾನಿ ಬಾರಿ ಅಟಲ್ ಬಿಹಾರಿ ವಾಜಪೇಯೀ ಯವರಿಂದ ಫೆಡರೇಶನ್ ಆ ಇಂಡಿಯನ್ ಚೇಂಬರ್ಸ್ ಆ ಕಾಮರ್ಸ್ ಮತ್ತು ೨೦೦೪ ರಲ್ಲಿ ವಾಟಿಕಾ ವರ್ಷದ ಕನ್ನಡಿಗ ಪ್ರಶಸ್ತಿಗಳನ್ನು ಪಡೆದ್ದಿದ್ದಾರೆ.

ಇವರಿಗೆ ಪ್ರಧಾನಿ ನರೇಂದ್ರ ಮೋದಿಯವರಿಂದ ರಾಷ್ಟ್ರಪತಿ ಹುದ್ದೆಗಾಗಿ ಆಹ್ವಾನ ಬಂದರು ಸಾಮಾಜಿಕ ಸೇವೆಗಾಗಿ ಅದು ಅಡ್ಡಿ ಆಗುತ್ತದೆ ಎಂದು ದೇಶದ ಅತ್ಯಂತ ದೊಡ್ಡ ಹುದ್ದೆಗೆ ಬೇಡ ಎಂದು ತಮ್ಮ ಸರಳತೆಯಿಂದ ದೇಶದ ಜನರ ಮನ ಗೆದ್ದರು.

ಒಬ್ಬ ಮನುಷ್ಯ ಜೀವನದಲ್ಲಿ ಏನೆಲ್ಲಾ ಮಾಡಬಹುದೆಂಬುದಕ್ಕೆ ಹೆಗ್ಗಡೆ ಅವರೇ ಮಾದರಿ ಅವರಿಗೆ ಜನ್ಮದಿಂದ ಶುಭಾಶಯಗಳು.

Amazon Big Indian Festival
Amazon Big Indian Festival

Copyright © 2016 TheNewsism

To Top