Astrology

ನಿತ್ಯ ಭವಿಷ್ಯ 28 ನವೆಂಬರ್ 2017

ಮೇಷ:-

ನಿಮ್ಮ ಮಾತಿನ ಜಾಣ್ಮೆ, ಸರಳವಾದ ನಡೆ ನುಡಿಗಳಿಂದ ಜನರ ಪ್ರಶಂಸೆಯನ್ನು ಪಡೆಯಲು ಇಂದು ಹೇರಳ ಅವಕಾಶಗಳು ಒದಗಿ ಬರುವುದು. ಸಂಗಾತಿಯ ಸಹಕಾರ ದೊರೆಯುವುದು. ಆರ್ಥಿಕ ಸಮಸ್ಯೆ ಕಡಿಮೆ ಆಗುವುದು.

ವೃಷಭ:-

ಒತ್ತಡಗಳ ನಡುವೆ ಇನ್ನೊಂದಿಷ್ಟು ಒತ್ತಡಗಳು ಸೇರಿಕೊಂಡು ನಿಮ್ಮ ತಾಳ್ಮೆಯ ಪರೀಕ್ಷೆಯನ್ನು ಎದುರಿಸುವಿರಿ. ಮನೋನಿಯಾಮಕ ರುದ್ರದೇವರನ್ನು ಅಂತೆಯೇ ದುರ್ಗಾಸುಳಾದಿಯನ್ನು ಏಕ ಮನಸ್ಸಿನಿಂದ ಭಜಿಸಿರಿ.

ಮಿಥುನ:-

ಗುರು ಬಲವಿದೆ. ಆದರೆ ಸಾಕ್ಷಾತ್‌ ಆಗಿ ಗುರುವೇ ನಿಮ್ಮ ಬಳಿ ಬಂದು ನಿಮ್ಮನ್ನು ತಿದ್ದುವುದಿಲ್ಲ. ಮನೆಯ ಹಿರಿಯರ ರೂಪದಲ್ಲಿ ಇದ್ದು ನಿಮಗೆ ಸಕಾಲಿಕ ಎಚ್ಚರಿಕೆ ನೀಡುವರು. ಹಾಗಾಗಿ ಹಿರಿಯರ ಮಾತನ್ನು ಉದಾಸೀನ ಮಾಡದಿರಿ.

ಕಟಕ:-

ದಿಢೀರಾಗಿ ಅನೇಕ ಸಮಸ್ಯೆಗಳು ಎದುರಾಗುವ ಸಂಭವವಿರುತ್ತದೆ. ವಿದೇಶದಿಂದ ಬರುವ ಸುದ್ದಿಯು ನಿಮಗೆ ಸಂತಸವನ್ನುಂಟು ಮಾಡುತ್ತದೆ. ವಿವಿಧ ಮೂಲಗಳಿಂದ ಹಣಕಾಸು ಒದಗಿ ಬರುವುದರಿಂದ ಇಚ್ಛಿತ ಕಾರ್ಯಗಳು ಕೈಗೂಡುವುದು.

ಸಿಂಹ:-

ಸಂಕಷ್ಟಗಳನ್ನು ಎದುರಿಸುವ ಕಲೆಗಾರಿಕೆ ನಿಮಗೆ ಹೇಳಿಕೊಡಬೇಕಾಗಿಲ್ಲ. ಎಲ್ಲವನ್ನೂ ನಗು ನಗುತ್ತಲೇ ನಿಭಾಯಿಸುವ ಗುಣ ಅನುಕರಣೀಯವಾದುದು. ಆದರೆ ನಿಮ್ಮ ಮನೆ ಮಂದಿಯೇ ನಿಮ್ಮನ್ನು ಆಡಿಕೊಳ್ಳುವುದು ನಿಮಗೆ ನುಂಗಲಾರದ ತುತ್ತಾಗುವುದು.

ಕನ್ಯಾ:-

ಬಹುವಿಧ ಪ್ರತಿಭೆಯು ಅನಾವರಣಗೊಳ್ಳುವುದು. ನಿಮ್ಮ ನಿರೀಕ್ಷೆಯಂತೆಯೇ ಕೆಲಸ ಕಾರ್ಯಗಳು ನಡೆಯುವುದರಿಂದ ಮನಸ್ಸಿಗೆ ಸಮಾಧಾನ ಮತ್ತು ಆತ್ಮಸ್ಥೈರ್ಯ ಹೆಚ್ಚಾಗುವುದು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ.

ತುಲಾ:-

ತೋಳ ಗುಂಡಿಗೆ ಬಿದ್ದಾಗ ಆಳಿಗೊಂದು ಕಲ್ಲು ಎನ್ನುವಂತೆ ಯಾವುದೋ ಕಾರಣಕ್ಕೆ ನಿಮ್ಮಿಂದ ತಪ್ಪಾಗಿರುವುದನ್ನೇ ಪುನಃ ಪುನಃ ನೆನೆಸಿ ನಿಮಗೆ ಕಿರುಕುಳ ಕೊಡುವರು. ಇದು ಒಂದು ರೀತಿಯ ಪರೀಕ್ಷೆಯ ಕಾಲ. ಮನಸಾ ಕುಲದೇವರನ್ನು ಸ್ಮರಿಸಿಕೊಳ್ಳಿರಿ.

ವೃಶ್ಚಿಕ:-

ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ತಕರಾರುಗಳನ್ನು ಹಿರಿಯರ ಮೂಲಕ ಸಂಧಾನ ಮಾಡಿಸಿ ಬಗೆಹರಿಸಿಕೊಳ್ಳಿರಿ. ಕೋರ್ಟು , ಕಚೇರಿ ಎಂದು ಹೋದರೆ ನಿಮಗೆ ದಕ್ಕಬೇಕಾದ ಆಸ್ತಿಯು ದಕ್ಕದೆ ಹೋಗಬಹುದು.

ಧನಸ್ಸು:-

ಸಂಶಯಾತ್ಮ ವಿನಶ್ಯತಿ ಎನ್ನುವಂತೆ ಜನ್ಮಸ್ಥ ಶನಿಯು ಕೆಲಸ ಕಾರ್ಯಗಳಲ್ಲಿ ಅನಗತ್ಯ ಸಂಶಯವನ್ನು ಹುಟ್ಟು ಹಾಕುವುದರಿಂದ ಸಕಾಲದಲ್ಲಿ ಕೆಲಸ ಪೂರೈಸಲು ಆಗುವುದಿಲ್ಲ. ಇದರಿಂದ ಮೇಲಧಿಕಾರಿಗಳ ಕೆಂಗಣ್ಣಿಗೆ ಕಾರಣರಾಗುವಿರಿ.

ಮಕರ:-

ಧೂರ್ತರನ್ನು ಸಾಮ, ದಾನ, ಭೇದ, ದಂಡ ಎಂಬ ಚತುರೋಪಾಯಗಳಿಂದಲೇ ಎದುರಿಸಬೇಕು. ಕೆಲಸ ಮಾಡುವ ಕಚೇರಿಯಲ್ಲಿ ವಿನಾಕಾರಣ ನಿಮಗೆ ಕಿರುಕುಳ ಎದುರಾಗುವುದು. ಅದಕ್ಕೆ ಅಂಜದೆ ಅವರದೇ ರೀತಿಯಲ್ಲಿ ಉತ್ತರ ನೀಡಿರಿ.

ಕುಂಭ:-

ಮನೆಯ ಸಮಸ್ಯೆಗಳನ್ನು ಮನೆಯೊಳಗಿನ ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಮನೆಯ ಒಳಗಿನ ಸಮಸ್ಯೆಗಳಿಗೆ ನಿಮ್ಮ ಪರಿಹಾರ ಸೂತ್ರಗಳು ಉಪಯೋಗಕ್ಕೆ ಬರುವುದು ಮತ್ತು ಎಲ್ಲರೂ ಒಪ್ಪುವರು.

ಮೀನ:-

ಮನೆ ಮಂದಿಯ ಸಹಾಯಕ್ಕಿಂತ ಮನೆ ಹೊರಗಿನ ಗೆಳೆಯರೇ ನಿಮ್ಮನ್ನು ಇಷ್ಟಪಡುವರು ಮತ್ತು ನಿಮ್ಮ ಕಾರ್ಯವನ್ನು ಕೊಂಡಾಡುವರು. ಈದಿನ ನಿಮ್ಮ ಹಳೆಯ ಗೆಳೆಯರಿಗೆ ಫೋನ್‌ ಮಾಡಿ ಮಾತುಕತೆ ನಡೆಸಿರಿ.

Amazon Big Indian Festival
Amazon Big Indian Festival
To Top