Awareness

ಮುಂಜಾನೆ ಎದ್ದಾಗಿನಿಂದ ಸದಾ ಸುಸ್ತು ನಿಮ್ಮನ್ನು ಕಾಡುತ್ತಿರುತ್ತೆಯೇ ಹಾಗಿದ್ದರೆ ಇದನ್ನು ನೀವು ಓದಲೇಬೇಕು…

ನಿಮಗೆ ಬ್ರೈನ್​​ ಫಾಗ್​​ ಇದೀಯಾ..?

ನಿದ್ದೆ.. ಯಾರಿಗೆ ಇಷ್ಟ ಇಲ್ಲ ಹೇಳಿ..? ಅಬ್ಬಾ ಒಂದು ದಿನಾವಾದ್ರೂ ಆಫೀಸ್​ಗೆ ರಜೆ ಮಾಡಿ ಪೂರಾ ದಿನ ನಿದ್ರೆ ಮಾಡ್ಬೇಕು.. ಹೀಗಂತ ಎಲ್ರೂ ಅನ್ಕೋತೀವಿ. ಆದ್ರೆ ಯಾವತ್ತೂ ಹಾಗೇವ ನಿದ್ದೆ ಮಾಡೋಕೆ ಆಗೋದೇ ಇಲ್ಲ. ಈಗ್ಯಾಕೆ ನಿದ್ದೆ ವಿಷ್ಯ ಅಂತ ಅನ್ಕೊಂಡ್ರಾ. ಕೆಲವರಿಗೆ ನಿದ್ದೆ ಮಾಡಿ ಎದ್ಮೇಲೆ ಸುಸ್ತಾಗುತ್ತೆ. ಅದು ಯಾಕೆ ಅಂತ ಗೊತ್ತಾ..? ನೀವು ಸ್ವಲ್ಪ ತಿಳ್ಕೊಳಿ.

ಹೀಗೆ ನಿದ್ದೆ ಮಾಡಿ ಎದ್ದಾಗ ಸುಸ್ತಾಗೋದು ಮೆದುಳು ಮಬ್ಬಾಗೋದ್ರಿಂದ ಆಗುತ್ತೆ ಅಂತ ಸೈನ್ಸ್​ ಹೇಳುತ್ತೆ. ಹೌದು… ಗೊಂದಲದ ಲಕ್ಷಣಗಳು, ಮರೆತು ಹೋಗೋದು, ಗಮನ ಇಲ್ಲದಿರುವಿಕೆ ಮತ್ತು ಮಾನಸಿಕವಾಗಿ ಅಸ್ಪಷ್ಟತೆಯಾಗಿದ್ರೆ, ಇದನ್ನ ಮೆದುಳು ಮಬ್ಬು ಅಥವಾ ಬ್ರೈನ್ ಫಾಗ್ ಅಂತ ಕರೀತಾರೆ.. ಈ ಲಕ್ಷಣಗಳಿಗೆ ಚಿಕಿತ್ಸೆ ನೀಡಬಹುದು.

ಪ್ರತಿಯೊಬ್ಬ ವ್ಯಕ್ತಿಯೂ ಏಳರಿಂದ ಒಂಬತ್ತು ಗಂಟೆಗಳ ಕಾಲ ನಿದ್ರೆ ಮಾಡಿದ್ರೆ ರಿಫ್ರೆಶ್ ಆಗಿರೋಕೆ ಸಾಧ್ಯ. ನಿದ್ರೆಗಣ್ಣಿಗೆ ಎದ್ದ ಕೂಡಲೇ ಸ್ವಲ್ಪ ಕಾಫಿ ಅಥವಾ ಸ್ನಾನ ಮಾಡಿದ್ರೆ ಹೋಗುತ್ತೆ. ಆದ್ರೆ ಬ್ರೈನ್ ಫಾಗ್ ಇರೋರಿಗೆ ಸ್ವಲ್ಪ ಚಾಸ್ತೀನೆ ಕಾಫಿ ಬೇಕಾಗಬಹುದು. ಈ ಬ್ರೈನ್​ ಫಾಗ್​ ಸ್ಥಿತಿಯನ್ನು ವೈದ್ಯಕೀಯವಾಗಿ ಗುರುತಿಸಲು ಸಾಧ್ಯವಿಲ್ಲವಾದ್ರೂ, ಇಂಥಾ ಒಂದು ಸ್ಥಿತಿ ಇದೆ ಅನ್ನುತ್ತೆ ಸೈನ್ಸ್​​. ಇದು ತುಂಬಾ ಜನರಿಗೆ ಅನುಭವವೂ ಆಗಿರುತ್ತೆ.

ಐದು ಕಾರಣಗಳಿಂದ ಈ ಬ್ರೈನ್​ ಫಾಗ್​ ಬರಬಹುದು.. ಅವೆಲ್ಲಾ ಯಾವುದು ನೋಡೋನ ಬನ್ನಿ..

1: ನಿದ್ರೆಯ ಗುಣಮಟ್ಟ ಕೊರತೆ
ರಾಷ್ಟ್ರೀಯ ಸ್ಲೀಪ್ ಫೌಂಡೇಶನ್ ಅಥವಾ ಎನ್ಎಸ್ಎಫ್​ ಪ್ರಕಾರ, “ಕನಿಷ್ಠ 40 ಮಿಲಿಯನ್ ಅಮೆರಿಕನ್ನರು ಶೇ.70 ರಷ್ಟು ಜನ ಈ ರೀತಿಯ ಹಲವು ನಿದ್ರಾ ಕೊರತೆಯಿಂದ ಬಳಲುತ್ತಾರೆ. ಪ್ರತಿಶತ 60ರಷ್ಟು ವಯಸ್ಕರು ವಾರಕ್ಕೊಮ್ಮೆಯಾದ್ರೂ ನಿದ್ರಾಹೀನತೆಯನ್ನು ಅನುಭವಿಸುತ್ತಾರೆ ಅಂತ ವರಿದಿ ಹೇಳುತ್ತೆ.  ಸರಿಯಾದ ನಿದ್ರೆ ಇಲ್ಲದೆ ಇದ್ರೆ, ಯಾವುದೇ ವ್ಯಕ್ತಿಯಾದ್ರೂ ಆತನ ದೇಹ ಮತ್ತು ಮನಸ್ಸು ಆರೋಗ್ಯವಾಗಿರಲು ಸಾಧ್ಯವಿಲ್ಲ. ನಿದ್ರಾಹೀನತೆ ಕಾಡುವವರು ನಿತ್ಯ ಒಂದೇ ಸಮಯದಲ್ಲಿ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ರಜೆ ದಿನವೂ ಕೂಡ.

2: ಅಪೌಷ್ಟಿಕಾಂಶ ಆಹಾರ ಸೇವನೆ
ನೀವು ಸೇವಿಸುವ ಆಹಾರದಲ್ಲಿ ನಿಮಗೆ ಬೇಕಾದಷ್ಟು ಪೋಷಕಾಂಶಗಳಿರಲಿ. ಊಟದಲ್ಲಿ ನ್ಯೂಟ್ರಿಷನ್ ಕಡಿಮೆ ಇದ್ರೂ ಸಹ ಬ್ರೈನ್​ ಫಾಗ್​​ಗೆ ಒಂದು ಕಾರಣ..  ಆಹಾರದಲ್ಲಿ ಕ್ಯಾಲ್ಸಿಯಂ, ಮೆಗ್ನೀಶಿಯಂ, ವಿಟಮಿನ್ A, C, ಮತ್ತು B ಇರುವುದು ಒಳ್ಳೆಯದು. ಉತ್ತಮ ಗುಣಮಟ್ಟದ ಮಲ್ಟಿವಿಟಮಿನ್ ಅನ್ನು ತೆಗೆದುಕೊಳ್ಳುವುದು ಅಗತ್ಯ.

3: ಧೀರ್ಘಕಾಲದ ಒತ್ತಡ
ಎಸ್​… ದಿನಾ ಆಫೀಸ್​ ಆಫೀಸ್​ ಅಂತಾ ಸಾಯ್ತಾ ಇರ್ತೀವಿ.. ಬೆಳಗೆದ್ರೂ ಆಫೀಸ್.. ರಾತ್ರಿಯಾದ್ರೂ ಆಫೀಸ್​ದೇ ಚಿಂತೆ.. ಒತ್ತಡದ ನಡುವೆ ಕೆಲಸ ಮಾಡೋರೆ ಹೆಚ್ಚು.. ಇಂಥವರು ಸಹ ಬ್ರೈನ್​ ಫಾಗ್​ ಸಮಸ್ಯೆಯಿಂದ ಬಳಲುತ್ತಾರೆ.  ಆದಷ್ಟು ನಿಮ್ಮ ಕೆಲಸದ ಒತ್ತಡದ ನಡುವೆಯೂ ವೈಯಕ್ತಿಕ ವಿಚಾರಗಳಿಗೂ ಸಮಯ ಕೊಡಿ..  ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಆಗಾಗಾ ಸ್ನೇಹಿತರೊಂದಿಗೆ ಸಮಯ ಕಳೆಯಿರಿ.. ಕೆಲಸದ ವೇಳೆಯಲ್ಲೂ ರಿಲ್ಯಾಕ್ಸ್​ ಟೈಮ್​ ಅಂತ ಒಂದು ಸಮಯವನ್ನು ಇಡಿ.

4: ಒಂದೇ ರೀತಿಯ ಜೀವನ
ಪ್ರತಿದಿನ ಒಂದೇ ಥರದ ಜೀವನ ನಡೆಸೋದು.. ಬೆಳಗ್ಗೆ ಎದ್ದು ಅದೇ ಆಫೀಸ್.. ಅದೇ ಮನೆ… ಅಂತ ದಿನಾ ಇರೋದದರ ಬದಲು ನಿತ್ಯ ಬದುಕಿನಲ್ಲಿ ಸ್ವಲ್ಪ ಬದಲಾಣೆಗಳಿದ್ರೆ ಒಳ್ಳೆಯದು. ಇದರ ಜೊತೆಗೆ ದೇಹಕ್ಕೆ ಸ್ವಲ್ಪ ವ್ಯಾಯಾಮ ಕೂಡ ಬೇಕು.

5: ನಿರ್ಜಲೀಕರಣ
ಇದೇನಿದು ಅಂತ ಯೋಚಿಸ್ತಿದ್ದೀರಾ.. ಮನುಷ್ಯನ ದೇಹಕ್ಕೆ ನೀರು ಅತೀ ಮುಖ್ಯ.. ದೇಹದಲ್ಲಿ ನೀರು ಕಡಿಮೆಯಾದ್ರೂ ಬ್ರೈನ್​ ಫಾಗ್​ ಉಂಟಾಗುತ್ತೆ. ನೆನಪಿನ ಶಕ್ತಿ ಕುಂದುತ್ತೆ.. ಹಾಗಾಗಿ ನೀವು ಯಾವಗ್ಲೂ ನಿಮ್ಮೊಂದಿಗೆ ನೀರಿನ ಬಾಟಲಿಯನ್ನು ಕೊಂಡೊಯ್ಯಿರಿ. ಆಗಾಗ ನೀರು ಕುಡಿಯುತ್ತಿರಿ..

ನೆನಪಿಡಿ ಈ ಬ್ರೈನ್​ ಫಾಗ್​ ನಿಮ್ಮನ್ನು ಕಾಡಲು ಬಿಡಬೇಡಿ..

Amazon Big Indian Festival
Amazon Big Indian Festival

Copyright © 2016 TheNewsism

To Top