Astrology

ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಶುಭ ಅಥವಾ ಅಶುಭ ಯಾವುದೇ ಕಾರ್ಯವಾಗಿರಲಿ ತುಳಸಿ ಬೇಕೇ ಬೇಕು. ಪುರಾಣಗಳ ಪ್ರಕಾರ, ತುಳಸಿ ಗಿಡದ ದರ್ಶನ ಹಾಗೂ ಸ್ಪರ್ಶದಿಂದಲೇ ಪಾಪಗಳು ಪರಿಹಾರವಾಗುತ್ತವೆ. ವಾಸ್ತುದೋಷ ಪರಿಹಾರಕ್ಕೂ ತುಳಸಿ ಗಿಡ ಬಳಕೆಯಾಗುತ್ತದೆ. ತುಳಸಿಯಲ್ಲಿ ಮೂರು ವಿಧಗಳಿವೆ. ಅವೆಂದರೆ ಕೃಷ್ಣ ತುಳಸಿ, ಶ್ರೀ ತುಳಸಿ ಮತ್ತು ಕಾಡು ತುಳಸಿ.

ವಾಸ್ತು ದೋಷ ನಿವಾರಣೆಗೆ : ಪ್ರತಿಯೊಬ್ಬರ ಮನೆಯಂಗಳದಲ್ಲಿ ಮೊದಲು ನಮಗೆ ಕಾಣುವುದು ತುಳಸಿ ಗಿಡ. ಪ್ರತಿ ದಿನ ತುಳಸಿಯ ದರ್ಶನ ಮಾಡುವುದರಿಂದ ಪಾಪ ಪರಿಹಾರವಾಗುತ್ತದೆ, ಸ್ಪರ್ಶಮಾತ್ರದಿಂದ ಪವಿತ್ರತೆ ಬರುತ್ತದೆ, ವಂದಿಸುವುದರಿಂದ ರೋಗ ಪರಿಹಾರವಾಗುತ್ತದೆ, ತುಳಸೀತೀರ್ಥ ಪ್ರೋಕ್ಷಣೆಯಿಂದ ಆಯುವೃದ್ಧಿಯಾಗುತ್ತದೆ, ಅಂದು ತುಳಸಿ ಸಸಿ ನೆಡುವುದರಿಂದ ಶ್ರೀಕೃಷ್ಣನ ಸನ್ನಿಧಿ ಲಭ್ಯವಾಗುತ್ತದೆ, ಕೃಷ್ಣ ತುಳಸಿ, ಶ್ರೀ ತುಳಸಿ ಪೂಜಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವುದು ಸನಾತನರ ಅಭಿಪ್ರಾಯ. ಈ ಸಸ್ಯವು ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವನ್ನು ಹೊರಸೂಸುವ ಕಾರಣ ಮನೆಯೊಳಗಿನ ದುಷ್ಟ ಶಕ್ತಿಗಳು ನಿವಾರಣೆಯಾಗುತ್ತವೆ. ಹಾಗಾಗಿ ಮನೆಯ ಮುಖ್ಯ ದ್ವಾರದ ಮುಂಬದಿಯಲ್ಲಿ ತುಳಸಿಗಿಡವನ್ನು ಹಾಕುವುದು ಒಳ್ಳೆಯದು.

ಮನಸ್ಸಿನ ಏಕಾಗ್ರತೆಗೆ ತುಳಸಿಮಣಿಯಿಂದ ಕೂಡಿರುವ ಜಪಮಾಲೆಯಿಂದ ಜಪ ಮಾಡಿ. ತುಳಸಿ ವೃಂದಾವನದ ಬದಿಯಲ್ಲಿ ಕುಳಿತು ಸಂಧ್ಯಾವಂದನೆ, ಧ್ಯಾನ ಮಾಡುವುದರಿಂದ ಮನಸ್ಸಿಗೂ ಮುದವಾಗುತ್ತದೆ. ದೇಹದ ಆರೋಗ್ಯಕ್ಕೂ ಪೂರಕವಾಗುತ್ತದೆ. ಏಕೆಂದರೆ ಪೂಜೆ, ಧ್ಯಾನಕ್ಕಾಗಿ ಬಳಸಲಾಗುವ ಈ ಸ್ಥಳದಲ್ಲಿ ಸಕಾರಾತ್ಮಕ ಇರುವುದರಿಂದ ವಾಸ್ತು ದೋಷ ನಿವಾರಣೆಗೆ ಪ್ರತಿನಿತ್ಯ ಒಂದು ಎಸಳಾದರೂ ತುಳಸಿ ದಳವನ್ನು ಸಾಲಿಗ್ರಾಮಕ್ಕೆ ಅರ್ಪಿಸುವುದು ಒಳ್ಳೆಯದು. ತುಳಸಿ ಮಾನವನ ಆರೋಗ್ಯಕ್ಕೆ ಸಹಕಾರಿಯಾಗುವುದರ ಜೊತೆ ಜೊತೆಗೆ ಕೋಮಲತೆ, ಪಾವಿತ್ರ್ಯದ ಉದಾತ್ತ ತತ್ವಗಳನ್ನು ಸಾರುತ್ತದೆ.

Amazon Big Indian Festival
Amazon Big Indian Festival
To Top