Food

ನೆಗಡಿ ನಿವಾರಕ- ರಸಾಲಾ ಮಾಡುವ ವಿಧಾನ..!!!!

 ರಸಾಲಾ ಇದು ಮೊಸರಿನಿಂದ ಯುಕ್ತಿಪೂರ್ವಕವಾಗಿ ತಾಯಾರಿಸಿದ ಪೇಯ. ಇದನ್ನು ಮಾರ್ಜಿಕ, ಶೀಕಾರಿಣಿ ಎಂದು ಕರೆಯುತ್ತಾರೆ. ಭೀಮನಿಂದ ತಯಾರಿಸಲ್ಪಟ್ಟ ಈ ರಸಾಲವನ್ನು ಶ್ರೀಕೃಷ್ಣನು ಆಸ್ವಾದಿಸಿ ಹೊಗಳಿದನೆಂದು ಸೂಪಶಾಸ್ತ್ರದಲ್ಲಿದೆ ಉಲ್ಲೇಖ. ಬೇಸಿಗೆಯಲ್ಲಿ ಸೇವಿಸಬೇಕಾದ ಮುಖ್ಯ ಪಾನೀಯ ಎಂಬುದು ಆಯುರ್ವೇದದ ಮಾತು. ಇಷ್ಟಲ್ಲದೆ ದೀರ್ಘಕಾಲೀನ ನೆಗಡಿಗು, ಬಾಯಿ ರುಚಿ ಇಲ್ಲದ ಅರುಚಿ ರೋಗದಲ್ಲಿಯೂ, ಮೈಯೆಲ್ಲಾ ಒಡೆದಿರುವ ಸಂದರ್ಭದಲ್ಲೂ, ನಿಶ್ಯಕ್ತಿಯಲ್ಲೂ ರಸಾಲ ಅತ್ಯುತ್ತಮ ಔಷಧಿಯಾಗಿದೆ.

ಬೇಕಾಗುವ ಪದಾರ್ಥಗಳು:
  • ನೀರು ಹಾಕದೆ ತಯಾರಿಸಿದ ಎಮ್ಮೆ ಹಾಲಿನ ಮೊಸರು- 320 ಗ್ರಾಂ
  • ಬಿಳಿ ಕಲ್ಲು ಸಕ್ಕರೆ: 160  ಗ್ರಾಂ
  • ತುಪ್ಪ -೧೦ ಗ್ರಾಂ
  • ಜೇನು -೧೦ ಗ್ರಾಂ
  • ಮೆಣಸಿನ ಕಾಳು- ೧೦ ಕಾಳು
  • ಜೀರಿಗೆ- ೫ಗ್ರಾಮ್
  • ಒಣಶುಂಠಿ- ೫ ಗ್ರಾಂ
  • ಚಂದನ- ೧/೨ ಗ್ರಾಂ
  • ಅಗರು,ಕುಂಕುಮ,ಪಚ್ಚಕರ್ಪೂರ ಒಟ್ಟಾಗಿ- ೧/೨ ಗ್ರಾಂ
  • ಮಣ್ಣಿನ ಮಡಿಕೆ- ೧
ತಯಾರಿಸುವ ವಿಧಾನ:
  • ಬಿಳಿ ಕಲ್ಲುಸಕ್ಕರೆಯನ್ನು ನುಣ್ಣಗೆ ಪುಡಿಮಾಡಿ, ಮೆಣಸಿನಕಾಳುಮತ್ತು ಜೀರಿಗೆಯನ್ನು ತುಪ್ಪದಲ್ಲಿ ಕೆಂಪಾಗುವ ವರೆಗೂ ಹುರಿದು ಪುಡಿ ಮಾಡಬೇಕು.
  • ಶ್ರೀಗಂಧ,ಅಗರು, ಕಸ್ತೂರಿ,ಕುಂಕುಮ ಕೇಸರಿಗಳನ್ನು ಒಟ್ಟಿಗೆ ಸೇರಿಸಿ  ಪುಡಿ ಮಾಡುವುದು.ನಂತರ ಮೇಲೆ ಹೇಳಿದ ಎಲ್ಲ ಪುಡಿಗಳನ್ನು ಒಟ್ಟಿಗೆ ಸೇರಿಸಿ ಕಲಿಸುವುದು.
  • ಹಿಂದಿನ ದಿನ ರಾತ್ರಿ ಚೆನ್ನಾಗಿ ಹೆಪ್ಪು ಹಾಕಿ ತಯಾರಿಸಿದ, ಹೆಚ್ಚು ಹುಳಿಯಿರದ ಮೊಸರಿಗೆ ಜೇನು  ಮತ್ತು ತುಪ್ಪಗಳನ್ನು ಸೇರಿಸಿ.
  • ತೊಳೆದು  ಒಣಗಿಸಿದ ಮಡಕೆಯ ಒಳಭಾಗಕ್ಕೆ ಪಚ್ಚಕರ್ಪೂರದ ಪುಡಿಯನ್ನು ಸವರಿ ಮಡಿಕೆಯ ಮುಖವನ್ನು ಒಂದು ಶುದ್ಧವಾದ ಬಟ್ಟೆಯಿಂದ ಕಟ್ಟುವುದು.
  • ಅದರ ಮೇಲೆ ಮೊಸರನ್ನೂ ತಯಾರಿಸಲ್ಪಟ್ಟ ಪುಡಿಯನ್ನೂ ಸ್ವಲ್ಪ ಸ್ವಲ್ಪವಾಗಿ ಹಾಕುತ್ತಾ ಮೆಲ್ಲನೆ ಉಜ್ಜುವುದರಿಂದ ಮೊಸರಿನಲ್ಲಿರುವ ದ್ರವಭಾಗ ಮಡಿಕೆಯಲ್ಲಿ ಹನಿಯುತ್ತದೆ.
  • ಹೀಗೆ ಮಾಡುತ್ತಾ ಮೊಸರಿನ ಘನಭಾಗವನ್ನು, ದ್ರವಭಾಗವನ್ನು ಬೇರ್ಪಡಿಸುವುದು.
  • ಹೀಗೆ ಭೇರ್ಪಟ್ಟ ದ್ರವಭಾಗವೇ ರಸಾಲ.
Amazon Big Indian Festival
Amazon Big Indian Festival
To Top