Useful Information

ಮರೆತುಹೋಗಿರುವ ಆಟಗಳನ್ನ ಮೆಲುಕು ಹಾಕೋಣ ಬನ್ನಿ..ಇದರಲ್ಲಿ ನಿಮಗೆ ಬಹಳ ಇಷ್ಟವಾದ ಆಟ ಯಾವುದು??

ಇಂದಿನ ದಿನ ಬದಲಾದ ಜೀವನಶೈಲಿ ಹಾಗು ಬೆಳೆಯುತ್ತಿರುವ ನಗರ ಪ್ರದೇಶದ ಜನಸಂಖ್ಯೆಯಿಂದ ಹಳ್ಳಿಗಳು ಪಟ್ಟಣಗಳಾಗಿ, ಪಟ್ಟಣಗಳು ನಗರಗಳಾಗಿ ಮಹಾನಗರವಾಗಿ ಬೆಳೆಯುತ್ತಿವೆ, ಇಷ್ಟು ಜನರಿಗೆ ಇರಲು ಮನೆ, ತಿನ್ನಲು ಆಹಾರವನ್ನು ಒದಗಿಸಲು ಸರ್ಕಾರಗಳು ಮರ-ಗಿಡಗಳನ್ನು ಕಡೆದು ಕಾಡು ನಾಶಮಾಡುತ್ತಿದ್ದಾರೆ.

ಇದರಿಂದ ಕೇವಲ ಕಾಡು ಪ್ರಾಣಿಗಳಿಗೆ ಮಾತ್ರವಲ್ಲ, ಮನುಷ್ಯರಿಗು ತುಂಬ ನಷ್ಟವಾಗುತ್ತಿದೆ. ಇಂದು ನಗರಗಳು ಎಷ್ಟು ಬೆಳೆದಿವೆ ಎಂದರೆ ಮಕ್ಕಳಿಗೆ ಆಟವಾಡಲು ಸಹ ಜಾಗವಿಲ್ಲದಂತಾಗಿದೆ. ಮೊದಲು ಎಲ್ಲಿ ನೋಡಿದರಲ್ಲಿ ಚಿಕ್ಕ ಹಾಗು ದೊಡ್ಡ ಆಟದ ಮೈದಾನಗಳು, ಉದ್ಯಾನವನಗಳು ಇರುತ್ತಿದ್ದವು ಆದರೆ ಈಗ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ದೊಡ್ಡ ರಸ್ತೆ-ಗಳನ್ನು ನಿರ್ಮಿಸಿ ಇಂತಹ ಆಟದ ಮೈದಾನಗಳು ಹಾಗು ಉದ್ಯಾನವನಗಳನ್ನು ಕಾಣೆಮಾಡಿದೆ.

ಮೊದಲು ಮಕ್ಕಳು ಗೋಲಿ, ಬುಗುರಿ, ಗಿಲ್ಲಿ-ದಾಂಡ, ಮರ-ಕೋತಿ ಆಟ, ಕುಂಟು ಬಿಲ್ಲೆ, ಕಣ್ಣ-ಮುಚ್ಚಾಲೆ, ಚುಚೆಂಡು, ಕೊಕ್ಕೋ, ಕಬ್ಬಡಿ, ಜಾರು ಬಂಡೆ ಆಟ ಹೀಗೆ ದೈಹಿಕ, ಹೊರಾಂಗಣ ಅಥವಾ ಬಯಲು ಕ್ರೀಡೆಗಳನ್ನು ಆಡುತ್ತಿದ್ದರು ಇದರಿಂದ ಅವರು ಮಾನಸಿಕ ಮತ್ತು ದೈಹಿಕವಾಗಿ ಶಕಿಶಾಲಿಯಾಗಿರುತ್ತಿದ್ದರು.

ಇಂದಿನ ಪೀಳಿಗೆಯ ಮಕ್ಕಳಿಗೆ ಈ ಆಟಗಳೆ ಸರಿಯಾಗಿ ಗೊತ್ತಿಲ್ಲ, ಅವರು ಕೇವಲ ಟೆಲಿವಿಷನ್, ಕಂಪ್ಯೂಟರ್, ಲ್ಯಾಪ್ಟಾಪ್, ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಸ್ಮಾರ್ಟ್ ಟಿವಿ, ವಿಡಿಯೋ ಗೇಮ್ಸ್ ಗಳಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಮೊದಲು ಬೇಸಿಗೆಯ ರಜೆ ಬಂತೆಂದರೆ ಸಾಕು ಮಕ್ಕಳು ಬಿಸಿಲು ಕೂಡ ಲೆಕ್ಕಿಸದೆ ಸಂಜೆಯ ತನಕ ಮೈದಾನದಲ್ಲಿ ಆಟವಾಡುತ್ತಿದ್ದರು.

ಆದರೆ ಈಗಿನ ಮಕ್ಕಳು ರಜೆಯಲ್ಲಿ, ಮೈದಾನಕಲ್ಲ ಮನೆಯಿಂದಲು ಹೊರಗೆ ಬರುವುದಿಲ್ಲ. ಇಡೀ ದಿನ ಮನೆಯಲ್ಲಿಯೇ ಇರುವ ಸ್ಮಾರ್ಟ್ ಫೋನ್, ಟಿವಿ, ಕಂಪ್ಯೂಟರ್-ನಲ್ಲಿಯೇ ಇರುವ ವಿಡಿಯೋ ಗೇಮ್ಗಳನ್ನು ಆಡಿ ಕಾಲ ಕಳೆಯುತ್ತಿದ್ದಾರೆ.

ಈಗಿನ ಮಕ್ಕಳ ದೈಹಿಕ ಚಟುವಟಿಗೆ ಇಲ್ಲದ ಆಟಗಳಿಂದ, ಅವರ ಮಾನಸಿಕ ಹಾಗು ದೈಹಿಕ ಬೆಳವಣಿಗೆ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಪ್ರೌಢಶಾಲೆಗೆ ಬರುವಷ್ಟರಲ್ಲಿಯೇ ಅವರು ಬೊಜ್ಜು, ಕಣ್ಣಿನ ಸಮಸ್ಯೆ, ಅಧಿಕ ರಕತದೊತ್ತಡ, ಖಿನ್ನತೆಯಿಂದ ಬಳಲುತ್ತಿದ್ದಾರೆ.

ಒಟ್ಟಿನಲ್ಲಿ ಹೇಳೋದಾದ್ರೆ ಮೊಬೈಲ್, ಕಂಪ್ಯೂಟರ್ ಸ್ಮಾರ್ಟ್ ಆಗುತ್ತಿವೆ, ಆದ್ರೆ ಅವುಗಳನ್ನು ಹೆಚ್ಚಾಗಿ ಬಳಸಿ ಜನ ಹುಚ್ಚರಾಗುತ್ತಿದ್ದಾರೆ.

Amazon Big Indian Festival
Amazon Big Indian Festival
To Top