ಆರೋಗ್ಯ

ತರಕಾರಿ ಮತ್ತು ಹಣ್ಣಿನ ರಸವನ್ನು ಕುಡಿಯುವುದರಿಂದ ಆಗುವ 12 ಲಾಭಗಳು…!!!

ತರಕಾರಿ ಮತ್ತು ಹಣ್ಣಿನ ರಸವನ್ನು ಕುಡಿಯುವುದರಿಂದ ಆಗುವ ಲಾಭಗಳು.

ತರಕಾರಿ ಮತ್ತು ಹಣ್ಣಿನ ರಸಗಳು ದೇಹಕ್ಕೆ ತುಂಬ ಸಹಕಾರಿ ಹಾಗಾದರೆ ಬನ್ನಿ ಯಾವ ರೋಗ ನಿವಾರಣೆಗೆ, ಯಾವ ಜ್ಯೂಸ್ ಕುಡಿಯಬೇಕು ಎಂಬುದನ್ನು ತಿಳಿಯೋಣ.

೧.ನೆಗಡಿ ಮತ್ತು ಜ್ವರ :

ನೆಗಡಿ ಮತ್ತು ಜ್ವರ ಇವು ಸಾಮಾನ್ಯವಾಗಿ ಎಲ್ಲ ವಯೋಮಾನದವರಿಗು ಬರುವ ಕಾಯಿಲೆ. ಇದರ ನಿವಾರಣೆಗಾಗಿ ನೀವು ಸಾವಿರಾರು ರೂಪಾಯಿ ಹಣ ಖರ್ಚುಮಾಡಿ ದುಬಾರಿ ಔಷದಿ ಕೊಳ್ಳಬೇಕಾಗಿಲ್ಲ ನಿಮ್ಮ ಮನೆಯಲ್ಲಿಯೇ ದೊರಕುವ ಗೆಜ್ಜರಿ, ಹಸಿ ಶುಂಠಿ, ಬೆಳ್ಳುಳಿ ಅಥವಾ ಪೈನ್-ಆಪಲ್ ಅನ್ನು ಜ್ಯೂಸ್ ಮಾಡಿ ಕುಡಿದರೆ ನಿಮ್ಮ ಕಾಯಿಲೆ ವಾಸಿಯಾಗುತ್ತದೆ.

೨.ತಲೆ ನೋವು :

ತಲೆ ನೋವು ಯಾರಿಗೆತಾನೆ ಬರಲ್ಲ ಹೇಳಿ, ಸಾಮಾನ್ಯವಾಗಿ ತಲೆನೋವು ಹೆಚ್ಚು ಒತ್ತಡದಿಂದ ಬರುತ್ತದೆ, ಆಗ ನೀವು ಸೇಬು ಹಣ್ಣು, ಸೌತೆಕಾಯಿ, ಹಸಿ ಶುಂಠಿ ಅಥವಾ ಕೊತುಂಬರಿ ರಸವನ್ನು ಕುಡಿದರೆ ನಿಮ್ಮ ತಲೆನೋವು ಕಡಿಮೆಯಾಗುತ್ತದೆ.

೩.ಖಿನ್ನತೆ :

ಹೆಚ್ಚಿನ ಒತ್ತಡ ಹಾಗು ಬದಲಾದ ಜೀವನಶೈಲಿಯಿಂದ ಖಿನ್ನತೆ ಸಮಸ್ಯೆ ಬರುತ್ತಿದೆ. ಇದನ್ನು ದೂರ ಮಾಡಲು ಗೆಜ್ಜರಿ, ಪಾಲಕ್ ಸೊಪ್ಪು,ಸೇಬು ಅಥವಾ ಕೆಂಪು ಗಡ್ಡೆಯ ರಸವನ್ನು ಕುಡಿಯಬೇಕು.

೪.ಡಯಾಬಿಟಿಕ್ಸ್ :

ಡಯಾಬಿಟಿಕ್ಸ್ ಅಥವಾ ಸಕ್ಕರೆ ಕಾಯಿಲೆ ಇಡೀ ವಿಶ್ವವನ್ನೇ ಕಾಡುತ್ತಿರುವ ದೊಡ್ಡ ಕಾಯಿಲೆ ಇದರಿಂದ ದೂರವಿರಲು ಬಯಸಿದರೆ ಆಗಲುಕಾಯಿ, ಗೆಜ್ಜರಿ, ಕೊತುಂಬರಿ ಅಥವಾ ಪಾಲಕ್ ರಸವನ್ನು ಕುಡಿಯಿರಿ.

೫.ಹುಣ್ಣು :

ಹುಣ್ಣು ಅಥವಾ ಅಲ್ಸರ್-ಗಳು ಸಾಮಾನ್ಯವಾಗಿ ತುಂಬ ಮಸಾಲೆ, ಕಾರ, ಉಪ್ಪು ಅಥವಾ ಹುಳಿಯ ಪದಾರ್ಥಗಳನ್ನು ತಿಂದಾಗ ಆಗುತ್ತವೆ. ಎಲೆಕೋಸು, ಗೆಜ್ಜರಿ ಅಥವಾ ಕೊತುಂಬರಿ ರಸವನ್ನು ಸೇವಿಸಿದರೆ ಇದರಿಂದ ಮುಕ್ತಿ ಹೊಂದಬಹುದು.

೬.ಅಸ್ತಮಾ :

ಇಂದು ಹೆಚ್ಚಿದ ವಾಯು ಮಾಲಿನ್ಯದಿಂದ ಈ ಕಾಯಿಲೆ ಬರುತ್ತಿದೆ, ಇದು ನಗರ ಪ್ರದೇಶದ ಜನರರಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಗೆಜ್ಜರಿ, ನಿಂಬೆಹಣ್ಣು, ಬೆಳ್ಳುಳ್ಳಿ, ಅಥವಾ ಪಾಲಕ್ ರಸವನ್ನು ಸೇವಿಸಿ ಇದರಿಂದ ದೂರವಿರಬಹುದಾಗಿದೆ.

೭.ಹೆಚ್ಚಿನ ರಕ್ತದೊತ್ತಡ :

ಹೆಚ್ಚಿನ ರಕ್ತದೊತ್ತಡ ಅಥವಾ ಹೈ ಬಿಪಿ ಸಮಸ್ಯೆಯಿಂದ ಬಳಲುತ್ತಿರುವವರು ಸೇಬು ಹಣ್ಣು, ಸೌತೆಕಾಯಿ, ಕೆಂಪು ಗಡ್ಡೆ ಅಥವಾ ಕೊತುಂಬರಿ ರಸವನ್ನು ಸೇವಿಸಬೇಕು.

೮.ಕಿಡ್ನಿ ಮತ್ತು ಕಿಡ್ನಿ ಕಲ್ಲುಗಳು :

ಇದನ್ನು ನಿವಾರಿಸಿಕೊಳ್ಳಲು ಕಲಂಗಡಿ ಹಣ್ಣು, ಗೆಜ್ಜರಿ, ಸೌತೆಕಾಯಿ, ಸಂತ್ರ, ಸೇಬು, ನಿಂಬೆ ಹಣ್ಣಿನ ರಸವನ್ನು ನಿಯಮಿತವಾಗಿ ಸೇವಿಸಬೇಕು.

೯.ಕಣ್ಣಿನ ತೊಂದರೆ :

ಕಣ್ಣಿನ ತೊಂದರೆ ಇರುವವರು ಹಾಗು ಈ ಸಮಸ್ಯೆ ಬರಕೂಡದು ಎನ್ನುವವರು ನೆಲ್ಲಿಕಾಯಿ, ಗೆಜ್ಜರಿ ಅಥವಾ ಕೊತುಂಬರಿ ರಸವನ್ನು ಸೇವಿಸಬೇಕು.

೧೦.ಒತ್ತಡ :

ಬಾಳೆಹಣ್ಣು, ಸ್ಟ್ರಾಬೆರಿ ಅಥವಾ ಪಿಆರ್ ಹಣ್ಣಿನ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಒತ್ತಡದಿಂದ ದೂರವಿರಬಹುದು.

೧೧.ಮಲಬದ್ಧತೆ :

ಮಲಬದ್ಧತೆ ಸಮಸ್ಯೆ ಇರುವವರಿಗೆ ಸೇಬು, ಎಲೆಕೋಸು ಅಥವಾ ಗೆಜ್ಜರಿಯ ರಸ ತುಂಬ ಉಪಯುಕ್ತ.

೧೨.ಮರುವು :

ಮರುವಿನ ಸಮಸ್ಯೆಯಿಂದ ದೂರ ವಿರಬೇಕು ಹಾಗು ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳ ಬಯಸುವವರು ದಾಳಿಂಬೆ ಹಣ್ಣು, ಕೆಂಪು ಗಡ್ಡೆ ಅಥವಾ ದ್ರಾಕ್ಷಿ ಹಣ್ಣಿನ ರಸವನ್ನು ಸೇವಿಸಬೇಕು.

Amazon Big Indian Festival
Amazon Big Indian Festival

Copyright © 2016 TheNewsism

To Top