Food

ಕೇವಲ ರುಚಿಯ ವಿಷಯವಲ್ಲ, ಆರೋಗ್ಯವರ್ಧಕ ಖಾದ್ಯಗಳಲ್ಲಿ ಒಂದಾದ ಹೆಸರುಕಾಳು ಹುಸುಳಿ ಮಾಡುವ ವಿಧಾನ..!!!

ಹೆಸರು ಕಾಳು ಹುಸುಳಿ (ಉಸ್ಲಿ) ದಕ್ಷಿಣ ಭಾರತದ ಸಾಂಪ್ರದಾಯಿಕ ಖಾದ್ಯಗಳಲ್ಲಿ ಒಂದು. ಸಂಜೆಯ ಸ್ನ್ಯಾಕ್ಸ್ ಗೆ ಇಲ್ಲವೇ ಜೋಳದ ರೊಟ್ಟಿ, ಚಪಾತಿಯೊಡನೆ ತಿನ್ನಲು ಈ ಹುಸುಳಿ ಚೆನ್ನಾಗಿರುತ್ತದೆ.

ಬಹುತೇಕ ಮನೆಗಳಲ್ಲಿ ನಿತ್ಯದ ಬಳಕೆಯಲ್ಲಿರುವ ತರಕಾರಿ ಎಂದರೆ ಅದು ಹೆಸರುಕಾಳು. ಕೇವಲ ರುಚಿಯ ವಿಷಯವಲ್ಲ. ಆರೋಗ್ಯವರ್ಧಕವೂ ಹೌದು. ಹೆಸರುಕಾಳಿಗೆ ಆಯುರ್ವೇದದಲ್ಲಿ ಅಷ್ಟೇ ಅಲ್ಲ ದ್ವಿದಳ ಧಾನ್ಯಗಳಲ್ಲಿ ಕೂಡ ಅಗ್ರ ಸ್ಥಾನವಿದೆ. ಆದರೆ ಪುಟ್ಟ ಮಕ್ಕಳಿಗೆ ಹೆಸರುಕಾಳನ್ನು ಹಾಗೇ ನೀಡಿದರೆ ಅವರು ತಿರಸ್ಕರಿಸುತ್ತಾರೆ. ಹೀಗಾಗಿ ಕಡಿಮೆ ಅವಧಿಯಲ್ಲೇ ಸ್ವಾದಿಷ್ಟ ಹೆಸರುಕಾಳು ಹುಸುಳಿ ತಯಾರಿಸಿ ಮಕ್ಕಳಿಗೆ ಕೊಟ್ಟರೆ ಹಾಗು ತಿನ್ನಲು ಇಷ್ಟಪಡುತ್ತಾರೆ.

ಬೇಕಾಗುವ ಸಾಮಗ್ರಿಗಳು

 • ಮೊಳಕೆ ತರಿಸಿದ ಹೆಸರುಕಾಳು-3 ಕಪ್‌,
 • ತೆಂಗಿನಕಾಯಿ ತುರಿ-ಅರ್ಧ ಕಪ್‌,
 • ಕಾಳುಮೆಣಸಿನ ಪುಡಿ-ಅರ್ಧ ಚಮಚ,
 • ಜೀರಿಗೆ ಪುಡಿ-1 ಚಮಚ,
 • ಕತ್ತರಿಸಿದ ಕರಿಬೇವಿನ ಸೊಪ್ಪು-3 ಚಮಚ,
 • ಕತ್ತರಿಸಿದ ಕೊತ್ತಂಬರಿ ಸೊಪ್ಪು-3 ಚಮಚ,
 • ಕತ್ತರಿಸಿದ ಪುದಿನಾ ಸೊಪ್ಪು-2 ಚಮಚ,
 • ಕತ್ತರಿಸಿದ ಹಸಿ ಮೆಣಸಿನಕಾಯಿ-5,
 • ಎಣ್ಣೆ-4 ಚಮಚ,
 • ಸಾಸಿವೆ-1 ಚಮಚ,
 • ಅರಶಿಣ-ಅರ್ಧ ಚಮಚ,
 • ಇಂಗು-ಕಾಲು ಚಮಚ,
 • ಉಪ್ಪು-ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

 • ಮೊಳಕೆ ತರಿಸಿದ ಹೆಸರುಕಾಳುಗಳನ್ನು ಬೇಯಿಸಿ ನೀರು ಬಸಿದಿಡಿ.
 • ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಅರಶಿಣ, ಇಂಗು ಸೇರಿಸಿ ಒಗ್ಗರಣೆ ತಯಾರಿಸಿ. ಇದಕ್ಕೆ ಹಸಿ ಮೆಣಸಿನಕಾಯಿ, ಪುದಿನಾ ಸೊಪ್ಪು, ಕರಿಬೇವಿನ ಸೊಪ್ಪು ಹಾಕಿ ಬಾಡಿಸಿ.
 • ಈ ಮಿಶ್ರಣಕ್ಕೆ ಬೇಯಿಸಿದ ಹೆಸರುಕಾಳು, ಕಾಳು ಮೆಣಸಿನ ಪುಡಿ, ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಚನ್ನಾಗಿ ಕಲಕಿ ಒಲೆಯಿಂದ ಕೆಳಗಿರಿಸಿ ತೆಂಗಿನಕಾಯಿ ತುರಿ ಹಾಗೂ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
Amazon Big Indian Festival
Amazon Big Indian Festival

Copyright © 2016 TheNewsism

To Top