Useful Information

ಒಂದು ರೂಪಾಯಿ ನೋಟ್ ಚಲಾವಣೆ ಶುರುವಾಗಿ ಒಂದು ನೂರು ವರ್ಷವಾಗಿದೆ, ಹಳೆಯ ನೋಟಿಗೆ ಈಗಿನ ಬೆಲೆ ಕೇಳಿದ್ರೆ ಶಾಕ್ ಆಗ್ತೀರ!!

ಶತಾಯುಷಿ ಒಂದು ರೂಪಾಯಿ..!

ಒಂದು ರೂ. ಮುಖಬೆಲೆಯ ನೋಟ್ ಗೆ ಈಗ ನೂರು ವರ್ಷ ತುಂಬಿದ ಸಂಭ್ರಮ. ಮೊದಲು 1 ರೂ. ನೋಟನ್ನು 1917 ನವೆಂಬರ್ 30 ರಂದು ಬಿಡುಗಡೆ ಮಾಡಲಾಯ್ತು. ಬೇರೆ ನೋಟುಗಳಿಗಿಂತ ಒಂದು ರೂ. ನೋಟು ತನ್ನದೇ ಆದ ವಿಶಿಷ್ಟತೆಯನ್ನ ಹೊಂದಿದೆ. ಈ ನೋಟುಗಳನ್ನ ಭಾರತ ಸರ್ಕಾರ ವಿತರಿಸುತ್ತದೆಯೇ ಹೊರತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿತರಿಸುವುದಿಲ್ಲ.

ಮೊದಲನೇ ವಿಶ್ವಯುದ್ಧದ ಸಂದರ್ಭದಲ್ಲಿ ವಸಾಹತುಶಾಹಿ ಆಡಳಿತಕ್ಕೆ ಬೆಳ್ಳಿ ನಾಣ್ಯವನ್ನು ಮುದ್ರಿಸಲು ಸಾಧ್ಯವಾಗದೆ 1 ರೂ. ನೋಟನ್ನು ಚಲಾವಣೆಗೆ ತಂದರು.. 1917 ನ. 30ರಂದು 1 ರು. ನೋಟು ಮುದ್ರಣ  ಅನಿವಾರ್ಯವೂ ಆಗಿತ್ತು. 100 ವರ್ಷಗಳನ್ನು ಪೂರೈಸಿರುವ ಪ್ರಪ್ರಥಮ ನೋಟು ಎಂಬ ಹೆಗ್ಗಳಿಕೆ ಹೊಂದಿರೋ 1 ರೂ. ನೋಟು ಬ್ರಿಟನ್ ಕಿಂಗ್ ಜಾರ್ಜ್ 5 ಅವರ ಫೋಟೊ ಜತೆಗೆ ಮುದ್ರಿತವಾಗಿತ್ತು. ಅಂದಿನ ಬೆಳ್ಳಿ ನಾಣ್ಯದ ಫೋಟೋವನ್ನ ನೋಟ್ ಮೇಲೆ ಮುದ್ರಿಸಿ 1 ರೂ. ನೋಟು ಜಾರಿಗೆ ತರಲಾಗಿತ್ತು. ಅಂದಿನಿಂದ ಪ್ರತಿ 1 ರೂ. ನೋಟಿನಲ್ಲೂ ಆಯಾ ವರ್ಷದ ಒಂದು ರೂ. ನಾಣ್ಯದ ಫೋಟೋವನ್ನ ಮುದ್ರಿಸಲಾಗಿದೆ..

ಆದರೆ 1926 ರಲ್ಲಿ ಈ ನೋಟಿನ ವಿತರಣೆ ನಿಲ್ಲಿಸಲಾಗಿತ್ತು. ಮತ್ತೆ 1940 ರಲ್ಲಿ ಮರು ಪರಿಚಯಿಸಲಾಯಿತು. 1994 ರಲ್ಲಿ ಮತ್ತೆ ವಿತರಣೆ ನಿಲ್ಲಿಸಿ ಇದೀಗ 2015 ರಿಂದ ಮತ್ತೆ ಚಲಾವಣೆಯಲ್ಲಿದೆ.

ನೋಟ್ ಕಲೆಕ್ಟ್ ಮಾಡುವವರು ಈ ಹಳೆಯ ನೋಟುಗಳಿಗೆ 30 – 40 ಸಾವಿರ ರೂಪಾಯಿಗಳವರೆಗೂ ಕೊಟ್ಟು ಖರೀದಿಸುತ್ತಾರೆ. ಇನ್ನೂ ಅತಿ ಹಳೆಯ 100 ವರ್ಷದ ನೋಟಿಗೆ ಅಂತಾರಾಷ್ಟ್ರೀಯ ಕಲೆಕ್ಟರ್ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಸಿಗುತ್ತೆ.

ಬೇರೆ ನೋಟುಗಳಂತೆ ಇದಕ್ಕೆ ಆರ್‍ಬಿಐ ಗವರ್ನರ್ ಸಹಿ ಮಾಡುವುದಿಲ್ಲ. ಬದಲಾಗಿ ಹಣಕಾಸು ಕಾರ್ಯದರ್ಶಿ ಸಹಿ ಮಾಡುತ್ತಾರೆ. ಮೊದಲ ಒಂದು ರೂ. ನೋಟಿಗೆ ಮೂವರು ಬ್ರಿಟಿಷ್ ಹಣಕಾಸು ಕಾರ್ಯದರ್ಶಿಗಳಾದ ಎಮ್‍ಎಮ್‍ಎಸ್ ಗುಬ್ಬೆ, ಎಸಿ ಮ್ಯಾಕ್ ವಾಟರ್ಸ್ ಮತ್ತು ಎಚ್ ಡೆನ್ನಿಂಗ್ ಅವರ ಸಹಿ ಹಾಕಿದ್ರು. ಸ್ವಾತಂತ್ರ್ಯದ ನಂತರದಿಂದ ಇಲ್ಲಿಯವರೆಗೆ ಪ್ರತಿ ನೋಟಿನ ಮೇಲೂ ಹಣಕಾಸು ಕಾರ್ಯದರ್ಶಿ ಸಹಿ ಹಾಕಿದ್ದು, ಈವರೆಗೆ 18 ಹಣಕಾಸು ಕಾರ್ಯದರ್ಶಿಗಳು ಸಹಿ ಹಾಕಿದ್ದಾರೆ.

Amazon Big Indian Festival
Amazon Big Indian Festival
To Top