Useful Information

ಮಂಗಳಕರವಾದ ಮಾಂಗಲ್ಯದಲ್ಲಿ ಯಾವ ಯಾವ ರಾಶಿಯವರು ಎಷ್ಟೆಷ್ಟು ಕರಿಮಣಿ ಧರಿಸಬೇಕು ಎಂಬುದಕ್ಕೆ ಇಲ್ಲಿದೆ ಕಂಪ್ಲೀಟ್ ಡೀಟೇಲ್..!!

‘‘ಮಾಂಗಲ್ಯಮ್‌ ತಂತುನಾನೇನ ಮಮ ಜೀವನ ಹೇತುನಾ। ಕಂಠೆ ಬಧ್ನಾಮಿ ಸುಭಗೇ ತ್ವಂ ಜೀವ ಶರದಾಂ ಶತಮ್‌।।’’ ಈ ಶ್ಲೋಕ ಎಲ್ಲಾ ಹಿಂದೂ ಮದುವೆಗಳಲ್ಲಿ ತಾಳಿ ಕಟ್ಟುವಾಗ ಕೇಳಿ ಬರೋದು ಸರ್ವೇ ಸಾಮಾನ್ಯ. ಹಿಂದೂ ಧರ್ಮದಲ್ಲಿ ಮದುವೆ-ಮುಂಜಿ ಹೀಗೆ ಹಲವು ಸಂಪ್ರದಾಯದಕ್ಕೆ ಎಷ್ಟು ಮಹತ್ವವಿದೆಯೇ ಅದೇ ರೀತಿ, ವರ-ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಅಷ್ಟೇ ಪಾಮುಖ್ಯತೆ ಇದೆ. ಮದುವೆಯ ಸಾಂಕೇತವಾಗಿ ಸ್ತ್ರಿಯರಿಗೆ ಕರಿಮಣಿ ತಾಳಿ, ಕುಂಕುಮ, ಗಾಜಿನ ಬಳೆ, ಕಾಲುಂಗರ, ಹೂವು ನೀಡಲಾಗುವುದು ಅದು ಗೃಹಿಣಿಗೆ ಸೌಭಾಗ್ಯಕರವಾದವು.

ಮಾಂಗಲ್ಯ ಧಾರಣದ ಸಂಪ್ರದಾಯ ಹೇಗೆ ಬಂತು? ಅಂತ ಮೊದಲಿಗೆ ತಿಳಿಯೋಣ.

ಆದಿಶಂಕರರು ರಚಿಸಿದ ಸೌಂದರ್ಯ ಲಹರಿಯಲ್ಲಿ, ಶಿವನು ಪಾರ್ವತಿಗೆ ಮಂಗಲ ಸೂತ್ರವನ್ನು ಕಟ್ಟಿದನೆಂದಿದೆ. ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿಗಳು ಚಾಲ್ತಿಯಿರುವ ಸ್ತೋತ್ರಗಳಾಗಿದ್ದು ಮಾಂಗಲ್ಯ ಧಾರಣವನ್ನು ಪ್ರಸ್ತಾಪಿಸಿವೆ. ವಿವಾಹಿತ ಹೆಂಗಸಿನ ಮೇಲೆ ಕೆಟ್ಟ ದೃಷ್ಟಿ ಬೀಳದಿರಲೆಂದೇ ಮಂಗಲ ಸೂತ್ರದಲ್ಲಿ ಕಪ್ಪು ಬಣ್ಣದ ಮಣಿಗಳಿರುವುದು ಎಂಬ ನಂಬಿಕೆಯಿದೆ.

ಈಗ ಬಂಗಾರದ ಒಡವೆಯಲ್ಲಿ ಅಥವಾ ಮಾಂಗಲ್ಯದಲ್ಲಿ ಕರಿಮಣಿಗಳೇಕೆ ಪೋಣಿಸಲಾಗುವುದು ಅಂತ ತಿಳಿಯೋಣ.

ಕಪ್ಪು ಮಣಿಗಳಿಗೆ ಋಣಾತ್ಮಕ ಶಕ್ತಿಕ್ಷೇತ್ರವನ್ನೆಲ್ಲ ಹೀರಿ ಕೊಂಡು ಅದು ವಧುವನ್ನು ಮತ್ತು ಅವಳ ಕುಟುಂಬವನ್ನು ತಗಲದಂತೆ ಮಾಡುವ ಗುಣವಿರುತ್ತದೆ. ಕರಿಮಣಿ ಸರದ ಮತ್ತೊಂದು ವೈಶಿಷ್ಟ್ಯ ಏನೆಂದರೆ ಎದೆಯ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಹೀರಿ ಕೊಳ್ಳುತ್ತದೆ. ಇದರ ಅತಿ ಮುಖ್ಯವಾದ ಉಪಯುಕ್ತತೆ ಹಾಲುಣಿಸುವ ತಾಯಿಯಲ್ಲಿ ಎದೆ ಹಾಲಿನ ಉಷ್ಣತೆಯನ್ನು ಹೀರಿ ಕೊಂಡು ಎದೆ ಹಾಲು ಕೆಡದಂತೆ ಶಿಶುವಿಗೆ ಉಣ್ಣಲೂ ಅನುಕೂಲವಾದ ಸಮ ಉಷ್ಣತೆಯಲ್ಲಿರಿಸಲು ಸಹಾಯ ಮಾಡುತ್ತದೆ.

ಆಯಾ ಮತ ಪಂಥಗಳಿಗೆ ಕರಿಮಣಿಯ ಬಗೆಗಳ ಬಗ್ಗೆ ತಿಳಿಯೋಣ…

ಬ್ರಾಹ್ಮಣ ವರ್ಗದಲ್ಲಿ ಎರಡು ಪದಕಗಳ ತಾಳಿ, ಕಾಯಸ್ಥ/ ಮರಾಠಾ ಸ್ತ್ರೀಯರಿಗೆ ಒಂದು ಪದಕದ ತಾಳಿ, ವೈಶ್ಯ ಮತ್ತು ಚಿನಿವಾರ ಪಂಗಡಗಳಲ್ಲಿ ಚಿನ್ನ ವಜ್ರ, ವೈಢೂರ್ಯಗಳಿರುವ ತಾಳಿ – ಹೀಗೆ ವೈವಿಧ್ಯಗಳು. ವೀರಶೈವ ಸ್ತ್ರೀಯರು ತಾಳಿಯೊಂದಿಗೇ ಲಿಂಗದ ಕರಂಡಕವನ್ನು ಕಟ್ಟಿ ಕೊಳ್ಳುವುದೂ ಇದೆ. ದಕ್ಷಿಣ ಭಾರತದಲ್ಲಿ ಹಿಂದುಗಳಷ್ಟೇ ಅಲ್ಲದೆ ಕ್ರಿಶ್ಚಿಯನ್‌ ಮತ್ತು ಮುಸ್ಲಿಂ ಮತಸ್ಥ ಸ್ತ್ರೀಯರೂ ವಿವಾಹದ ನಂತರ ತಾಳಿ/ ಕರಿಮಣಿ ಸರ ಧರಿಸುತ್ತಾರೆ.

ಜ್ಯೋತಿಷ್ಯ ಶಾಸ್ತ್ರ ಗ್ರಂಥಗಳಲ್ಲಿ ಯಾವ ರಾಶಿಯವರು ಎಷ್ಟೆಷ್ಟು ಕರಿಮಣಿಯನ್ನು ಸರದಲ್ಲಿ ಹಾಕಿ ಕೊಳ್ಳ ಬೇಕೆಂಬುದನ್ನು ಉಲ್ಲೇಖಿಸಲಾಗಿದೆ. ಹೆಣ್ಣು ಮಕ್ಕಳು ಆಯಾ ರಾಶಿಗಳಿಗೆ ಅನುಗುಣವಾಗಿ ಕರಿಮಣಿಗಳ ಸಂಖ್ಯೆ ಅನುಗುಣವಾಗಿ ಮಾಂಗಲ್ಯವನ್ನು ಧರಿಸುತ್ತಾರೆ.

ಹಾಗಾದರೆ ಯಾವ ರಾಶಿಗೆ ಎಷ್ಟು ಸಂಖ್ಯೆಯ ಕರಿಮಣಿಗಳನ್ನ ಧರಿಸುತ್ತಾರೆ ಅಂತ ತಿಳಿಯೋಣ….

  • ಮೇಷ ರಾಶಿಗೆ- 21 ಮಣಿಗಳು.
  • ವೃಷಭ ರಾಶಿಗೆ- 40 ಮಣಿಗಳು.
  • ಮಿಥುನ ರಾಶಿಗೆ- 34 ಮಣಿಗಳು.
  • ಕಟಕ ರಾಶಿಗೆ- 20 ಮಣಿಗಳು.
  • ಸಿಂಹ ರಾಶಿಗೆ- 18 ಮಣಿಗಳು.
  • ಕನ್ಯಾ ರಾಶಿಗೆ- 34 ಮಣಿಗಳು.
  • ತುಲಾ ರಾಶಿಗೆ- 40 ಮಣಿಗಳು.
  • ವೃಶ್ಚಿಕ ರಾಶಿಗೆ- 21 ಮಣಿಗಳು.
  • ಧನುಸ್ಸು ರಾಶಿಗೆ- 32 ಮಣಿಗಳು.
  • ಮಕರ ರಾಶಿಗೆ- 38 ಮಣಿಗಳು.
  • ಕುಂಭ ರಾಶಿಗೆ- 38 ಮಣಿಗಳು.
  • ಮೀನ ರಾಶಿಗೆ- 32 ಮಣಿಗಳು.
Amazon Big Indian Festival
Amazon Big Indian Festival
To Top