Travel Nirvana

ಜಾನಪದ ಸೊಗಡಿನ ಹುತ್ತರಿ ಹಬ್ಬದ ವಿಶೇಷತೆ ನಿಮಗೆ ಗೊತ್ತಾ…??

ಇಂದು ಕೊಡಗಿನಲ್ಲಿ ಹುತ್ತರಿ/ಪುತ್ತರಿ ಹಬ್ಬ. ಕೊಡವ ಭಾಷೆಯಲ್ಲಿ ಪುದಿಯ ಅರಿಎಂದರೆ ಹೊಸ ಅಕ್ಕಿ ಎಂದರ್ಥ. ಈ ದಿನ ರಾತ್ರಿ ಗದ್ದೆಯಿಂದ ಕದಿರು ತಂದು ಗದ್ದೆಯ ಪೈರಿನ ಕದಿರನ್ನು ಮನೆ ಬಾಗಿಲಿಗೆ ಕಟ್ಟುವುದು, ಹೊಸ ಅಕ್ಕಿಯಲ್ಲಿ ತಿಂಡಿ ತಿನಿಸುಗಳನ್ನು ಮಾಡುವುದು ಇವತ್ತಿನ ವಿಶೇಷ. ರೋಹಿಣಿ ನಕ್ಷತ್ರವಿರುವ ಹುಣ್ಣಿಮೆಯ ರಾತ್ರಿಯೆಂದು ಈ ಹಬ್ಬವನ್ನು ಆಚರಿಸಲಾಗುವುದು. ಈ ಸಮಯ ಕದಿರು ತರಲು ಸೂಕ್ತ ಕಾಲವೆಂದು ಭಾವಿಸಲಾಗಿದೆ. ಇಂದಿನ ಕೊಡಗಿನವರು ಸಂಕ್ರಾಂತಿ ಹಿಂದೆ-ಮುಂದೆ ಹುತ್ತರಿ ಹಬ್ಬಆಚರಿಸಿ ತಮ್ಮನ್ನು ಕಾಪಾಡುವ `ಇಗ್ಗುತಪ್ಪನಿಗೆ ಬಕುತಿಯಿಂದ ನನ್ನಿ ಸಲ್ಲಿಸುವರು.  

ಈ ಹಬ್ಬದಲ್ಲಿ ಮೊದಲು ಇಗ್ಗುತ್ತತ್ತಪ್ಪ ದೇವಾಸ್ಥಾನದ ಗದ್ದೆಯಲ್ಲಿ ಪೂಜೆಯನ್ನು ಪ್ರಾರಂಭಿಸುತ್ತಾರೆ. ಆರಂಬಕ್ಕೆ ನೆರವಾದ ದನಕರುಗಳನ್ನು ಮತ್ತು ನಗ, ನೇಗಿಲುಗಳನ್ನು ಪೂಜೆ ಮಾಡಿ ಕಿಚ್ಚು ಹಾಯಿಸುವುದು, ಇವು ಹಬ್ಬವನ್ನು ಕೊಂಡಾಡುವ ಕೆಲಬಗೆಗಳು. ಅದರಲ್ಲೂ ಈ ದಿನದಂದು ಮನೆಮಂದಿಯೆಲ್ಲಾ ಸೇರಿಕೊಂಡು ತಮ್ಮ ಗದ್ದೆಗೆ ಬರುತ್ತಾರೆ. ಮನೆಯವರಲ್ಲಿ ಒಬ್ಬ ಒಬ್ಬ ಕುತ್ತಿ ಮತ್ತೊಬ್ಬ ಕೋವಿ ಹಿಡಿದಿರುತ್ತಾನೆ. ಅವರಲ್ಲಿ ಕುತ್ತಿ ತೆಗೆದವನು ಬೆಳೆಯನ್ನು ಪೂಜಿಸಿ “ಪೊಲಿ ಪೊಲಿ ದೇವಾ!” ಎಂದು ಗಟ್ಟಿಯಾಗಿ ಪ್ರಾರ್ಥಿಸುತ್ತಾನೆ. ಆಗ ಕೋವಿಯನ್ನೆತ್ತಿಕೊಂಡವನು ಅದನ್ನು ಆಕಾಶಕ್ಕೆ ಹಿಡಿದು ಗುಂಡು ಹಾರಿಸುವನು. ಆಗ ಗದ್ದೆಯಲ್ಲಿ ನೆರೆದವರೆಲ್ಲರೂ  “ಪೊಲಿ ಪೊಲಿ ದೇವಾ!” ಎಂದು ಉಚ್ಚ ಕಂಠದಲ್ಲಿ ಹೇಳುತ್ತಾರೆ.

ಕುತ್ತಿಯವನು ಮೊದಲು ಪೈರನ್ನು ಕತ್ತರಿಸಿ ಪಕ್ಕದಲ್ಲಿರುವವನಿಗೆ ಕೊಡುತ್ತಾನೆ, ನಂತರ ಅಲ್ಲಿ ನೆರೆವರಿಗೆಲ್ಲಾ ಕೊಡುತ್ತಾರೆ. ಈ ಸಮಯದಲ್ಲಿ ಗುಂಡಿನ ಶಬ್ದ, ಪಟಾಕಿ ಶಬ್ದ, ಜನರು ಪೊಲಿ ಪೊಲಿ ದೇವಾಎಂದು ಹೇಳುವುದು ಇವುಗಳಿಂದ ಹಬ್ಬದ ಸಡಗರ ಮತ್ತಷ್ಟು ಹೆಚ್ಚಾಗುತ್ತದೆ.

ಈ ಹಬ್ಬದಲ್ಲಿ ವಿಶೇಷವಾಗಿ ಪಾಯಸ, ತಂಬಿಟ್ಟು, ಕಜ್ಜಾಯ ಈ ರೀತಿಯ ಅಡುಗೆಯ ಜೊತೆಗೆ ಹುತ್ತರಿ ಗೆಣಸು ಕೂಡ ಇರುತ್ತದೆ. ಈ ಹಬ್ಬದ ನಂತರವೇ ಬೇಳೆ ಕುಯ್ಯುವ ಕೆಲಸವನ್ನು ಪ್ರಾರಂಭಿಸುತ್ತಾರೆ. ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಕುಯ್ದು ಮನೆಗೆ ತರುವ ಸಮಯವಾಯಿತು ಅನ್ನುವ ಸಂಕೇತವಾಗಿ ಈ ಹಬ್ಬವನ್ನು ಆಚರಿಸಲಾಗುವುದು.

Amazon Big Indian Festival
Amazon Big Indian Festival
To Top