ಫೇಸ್‌ಬುಕ್‌ ವಾಟಸಪ್ ಬಳಸುತ್ತಿದ್ದೀರಾ?? ಹಾಗಿದ್ದರೆ ಇಲ್ಲೊಮ್ಮೆ ನೋಡಿ..

ಇತ್ತೀಚೆಗಿನ ಕಾಲದಲ್ಲಿ ಫೇಸ್ ಬುಕ್ ವಾಟ್ಸಪ್ ನಮ್ಮ ಜೀವನದ ಒಂದು ಭಾಗವಾಗಿಬಿಟ್ಟಿದೆ.. ಆದರೆ ಇದರಿಂದ ಎಷ್ಟು ಅನುಕೂಲಗಳಿವೆಯೋ ಅಷ್ಟೇ ಅನಾನುಕೂಲಗಳು ಇವೆ ಎಂಬುದರ ಅರಿವು ಇಲ್ಲದ ನಾವು.. ಅವುಗಳಲ್ಲಿ ಮುಳುಗುತ್ತೇವೆ..

ಪ್ರತಿದಿನದ ನಮ್ಮ ದಿನಚರಿಯನ್ನೊಮ್ಮೆ ನೆನೆಯೋಣ.. ಬೆಳಗ್ಗೆ ಎದ್ದ ಕೂಡಲೇ ನಾವು ದೇವರ ಮುಖವನ್ನು ನೋಡುತ್ತೇವೆಯೋ ಇಲ್ಲವೋ ಆದರೇ ಮೊಬೈಲ್ ಹಿಡಿದುಕೊಳ್ಳುವುದಂತು ಸತ್ಯ.. ಫೇಸ್ ಬುಕ್ ನಲ್ಲಿ ಬೇರೆಯವರ ಜೀವನದಲ್ಲಿ ನಡೆಯುತ್ತಿರುವ ಹಾಗುಹೋಗುವುದರ ಸ್ಟೇಟಸ್ ಅಪ್ ಡೇಟ್ ಗಳ ಬಗ್ಗೆ ನಮಗಿರುವ ಕುತೂಹಲ.. ಎದ್ದ ತಕ್ಷಣ 2 ನಿಮಿಷ ಬಿಡುವು ಮಾಡಿಕೊಂಡು ಹೆತ್ತ ಅಪ್ಪ ಅಮ್ಮನಿಗೆ ಒಂದು ಗುಡ್ ಮಾರ್ನಿಂಗ್ ಹೇಳುವುದರಲ್ಲಿ ಇರುವುದಿಲ್ಲ‌.

ಇನ್ನು ಏನು ತಿಂಡಿ ತಿಂದನೋ ಏನು ಬಟ್ಟೆ ಹಾಕಿಕೊಂಡನೋ ಎಂದು ಸ್ನೇಹಿತರ ಬಗ್ಗೆ ಅಥವಾ ಗರ್ಲ್ ಫ್ರೆಂಡ್ ವಿಷಯದಲ್ಲಿ ತೋರಿಸುವ ಕಾಳಜಿ ಬಹಳಷ್ಟು ಮಂದಿ ಬೆಳಗ್ಗೆ ಇಂದ ಕೆಲಸ ಮಾಡಿ ತಿಂಡಿಯನ್ನು ಡಬ್ಬಿಗೆ ಹಾಕಿ ಕೊಡುವ ತಾಯಿಯ ಮೇಲೆ ತೋರಿಸುವುದಿಲ್ಲ.. ಇನ್ನು ಕೆಲಸಕ್ಕೆ ಹೋದಮೇಲೆಯೋ ಅಥವಾ ಕಾಲೇಜ್ ಗೆ ಹೋದಮೇಲೆಯೋ ಪಕ್ಕದ ರೂಮ್ ನಲ್ಲಿರುವ ನಮ್ಮ ಸ್ನೇಹಿತನನ್ನು ಭೇಟಿಯಾಗುವದಕ್ಕೂ ಒಂದು ವಾಟ್ಸ್ ಅಪ್ ಮೆಸೇಜ್ ಹೋಗುತ್ತದೆ.. ಯಾಕೆಂದರೆ ಒಂದಿಷ್ಟು ನಡೆದರೆ ನಾವುಗಳು ಸಣ್ಣ ಆಗಿಬಿಡುತ್ತೇವೆ ಅದಕ್ಕೆ..

ಇನ್ನು ಫೇಸ್ ಬುಕ್ ಬಗ್ಗೆ ಹೇಳಬೇಕೆಂದರೆ ನಮ್ಮ ವಯಕ್ತಿಕ ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತೇವೆ.. ಅದರಿಂದ ನಮಗೆ ಸಿಗುವ ಸಾಂತ್ವಾನಕಿಂತ ಹೆಚ್ಚು ನಮ್ಮ ಸ್ಥಿತಿಯನ್ನು ನೋಡಿ ಆಡಿಕೊಳ್ಳುವವರೇ ಹೆಚ್ಚು.. ಆದ್ದರಿಂದ ಆದಷ್ಟು ನಿಮ್ಮ ವಯಕ್ತಿಕ ವಿಚಾರಗಳು ಸಾಮಾಜಿಕ ಜಾಲತಾಣಿಗರಿಗೆ ನಗೆ ಪಾಟಲಿಯ ವಿಷಯವಾಗದಿರಲಿ.. ಸಂಜೆ ಮನೆಗೆ ಬಂದ ಮೇಲೆಯೂ ಮೊಬೈಲ್ ಹಿಡಿದು ಕೂತುಕೊಳ್ಳುತ್ತೇವೆಯೋ ಹೊರತು.. ದಿನ ಪೂರ್ತಿ ಮನೆಯಲ್ಲೆ ನಮ್ಮ ಬರುವಿಕೆಗಾಗಿ ಕಾಯುವ ಅಮ್ಮನನ್ನು ಸಹೋದರ ಸಹೋದರಿಯನ್ನು ಮಾತನಾಡಿಸುವ ಪ್ರಯತ್ನವನ್ನು ಮಾಡುವುದಿಲ್ಲ..

ಟೆಕ್ನಾಲಜಿ ಅವಷ್ಯಕ ನಿಜ ಆದರೆ ಅದು ನಮ್ಮ ಜೀವನದ ಭಾಗವಾಗಬಾರದು… ನಮ್ಮ ಸಂಭಂದಗಳನ್ನು ಒಡೆಯುವ ವಸ್ಟುವಾಗಬಾರದು.. ಅದೊಬ್ದು ನಮ್ಮ ಜ್ನಾನವನ್ನು ಅಭಿವೃದ್ಧಿ ಪಡಿಸುವ ಸಾಧನವಾಗಬೇಕು..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ.. ಮಾಹಿತಿ ಹಂಚುವುದಕ್ಕಿಂತ ಮಹತ್ವವಾದದ್ದು ಬೇರೇನಿದೆ??