ಆರೋಗ್ಯ

ಅರಿಶಿನ ಕಾಮಾಲೆಗೆ ಪಥ್ಯದ ಜೊತೆಗೆ ಈ ಮನೆಮದ್ದುಗಳನ್ನು ಪಾಲಿಸಿ ನಿಮ್ಮ ಲಿವರ್ ಸೇಫ್ ಆಗಿರುತ್ತೆ..

ಅರಿಶಿನ ಕಾಮಾಲೆ ಅಶುದ್ಧ ನೀರು ಆಹಾರಗಳ ಸೇವನೆ, ಮಧ್ಯಪಾನಗಳ ದುಷ್ಪರಿಣಾಮದಿಂದ ಲಿವರ್ ಕಾರ್ಯದಕ್ಷತೆ ಕಡಿಮೆಯಾಗಿ ದೇಹದಲ್ಲಿ ಬಿಲಿರುಬಿನ್ ಅಂಶ ಅಧಿಕವಾಗುವಂತಹ ಕಾಯಿಲೆ. ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಉಗ್ರ ಪರಿಣಾಮಗಳಿಗೆ ದಾರಿ ಮಾಡಿಕೊಡುತ್ತದೆ. ರೋಗಿಗೆ ಪಥ್ಯ ಮತ್ತು ವಿಶ್ರಾಂತಿಗಳೆರಡೂ ಅತಿ ಮುಖ್ಯವಾದದು. ಅದರ ಜೊತೆ ಈ ಮನೆಮದ್ದುಗಳನ್ನು ಪಾಲಿಸಿದ್ದಲ್ಲಿ ಶೀಘ್ರ ಗುಣಮುಖವಾಗುವುದರಲ್ಲಿ ಸಂಶಯವೇ ಇಲ್ಲ..

೧) ಒಂದು ಕಪ್ ಮೊಸರಿನಲ್ಲಿ ಅರ್ಧ ಟೀ ಸ್ಪೂನ್ ಮನೆಯಲ್ಲೇ ತಯಾರಿಸಿದ ಅರಿಶಿನ ಪುಡಿಯನ್ನು ಕದಡಿ ರಾತ್ರಿ ಇಡೀ ಹಾಗೆ ಇತ್ತು ಮರುದಿನ ಮುಂಜಾನೆ ಸೇವಿಸಬೇಕು.
೨) ಒಂದು ಸ್ಪೂನ್ ಹುಣಸೆ ಗೊಜ್ಜಿನಲ್ಲಿ ಜೀರಿಗೆ ಚೂರ್ಣ ಮತ್ತು ಜೇನುತುಪ್ಪವನ್ನು ಸೇರಿಸಿ ಸೇವಿಸುವುದು.
೩) ದೊಡ್ಡ ಪತ್ರೆ ಸೊಪ್ಪು ಕಾಮಾಲೆಗೆ ಉತ್ತಮ ಔಷಧಿ. ಈ ಎಲೆಗಳನ್ನು ಚಿಟಿಕೆ ಉಪ್ಪಿನೊಂದಿಗೆ ಚೆನ್ನಾಗಿ ಅಗಿದು ತಿನ್ನುವುದು.

೪) ಅರಿಶಿನ ಕೊಂಬನ್ನು ನೀರಲ್ಲಿ ತೇಯ್ದು ಬರುವ ಗಂಧವನ್ನು ಒಂದು ಕಪ್ ಮೊಸರಿನಲ್ಲಿ ಕದಡಿ ಮುಂಜಾನೆ ಸೇವಿಸಬೇಕು.
೫) ಅನಾನಸ್ ಹೋಳುಗಳನ್ನು ಜೇನುತುಪ್ಪದಲ್ಲಿ ನಾಲ್ಕೈದು ದಿನ ನೆನೆಹಾಕಿ ದಿನ ೨ ಸಲ ತಿನ್ನುವುದು.
೬) ಒಣಶುಂಠಿ ಚೂರ್ಣವನ್ನು ಹಸುವಿನ ಹಾಲಿಗೆ ಬೆರೆಸಿ ಕುಡಿಯುವುದು.

೭) ಒಣಗಿಸಿ ಸಂಗ್ರಹಿಸಿದ ಮಾವಿನ ಹೋಳುಗಳನ್ನು ಕರಿಮೆಣಸು, ಜೇನುತುಪ್ಪದೊಂದಿಗೆ ಸೇವಿಸಿದ್ದಲ್ಲಿ ಅರಿಶಿನ ಕಾಮಾಲೆ ಬರುವ ಸಾಧ್ಯತೆ ಕಡಿಮೆಯಾಗುತ್ತದೆ.
೮) ಮಾಗಿದ ಬಾಳೆಹಣ್ಣನ್ನು ಜೇನುತುಪ್ಪದೊಂದಿಗೆ ಪ್ರತಿದಿನ ಸೇವಿಸುವುದು.
೯) ನೆಲ್ಲಿಕಾಯಿ ರಸಕ್ಕೆ ಅರಿಶಿನ ಪುಡಿ ಬೆರೆಸಿ ಸೇವಿಸುವುದು.
೧೦) ಮೂಲಂಗಿ ಸೊಪ್ಪನ್ನು ಜಜ್ಜಿ ರಸ ತೆಗೆದು, ಅದರೊಂದಿಗೆ ಸ್ವಲ್ಪ ಸಕ್ಕರೆ ಬೆರೆಸಿ ದಿನಕ್ಕೆ ಅರ್ಧ ಲಿಟರಿನಂತೆ ಒಂದು ವಾರ ಸೇವಿಸಬೇಕು.

ಮಧ್ಯಪಾನ ಮತ್ತು ಅಡುಗೆ ಎಣ್ಣೆಗಳೆರಡೂ ಲಿವರ್ ನ ಶತ್ರುಗಳೇ. ಕಾಮಾಲೆಯಷ್ಟೇ ಅಲ್ಲ ಲಿವರ್ ನ ವೈಫಲ್ಯದಂತಹ ಪ್ರಾಣಾಂತಿಕ ಸಮಸ್ಯೆಯನ್ನು ತಂದೊಡ್ಡುತ್ತದೆ.ಲಿವರ್ ಸಿರೋಸಿಸ್ ಆದಲ್ಲಿ ಲಿವರ್ ಟ್ರಾನ್ಸ್ ಪ್ಲಾಂಟೇಶನ್ ನಂತಹ ಸಂಕೀರ್ಣ ದುಬಾರಿ ಚಿಕಿತ್ಸೆಗೊಳಪಡಬೇಕಾಗುತ್ತದೆ. ಮಾಂಸಾಹಾರದಿಂದ ದೂರವಿರುವುದು ಲಿವರ್ ನ ಧೀರ್ಘಭಾಳಿಕೆಗೆ ಸಹಕಾರಿ.

 

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840

Amazon Big Indian Festival
Amazon Big Indian Festival

Copyright © 2016 TheNewsism

To Top