ಮಕ್ಕಳನ್ನು ಬೆಳೆಸುವ ರೀತಿ ಹೇಗಿರಬೇಕು ಗೊತ್ತಾ?? ಅಪ್ಪ ಅಮ್ಮ ಮಕ್ಕಳ ಮುಂದೆ ಮಾಡಲೇಬಾರದ ಕೆಲಸಗಳಿವು..

ಮಕ್ಕಳನ್ನು ಬೆಳೆಸುವ ರೀತಿ ಮಕ್ಕಳ ಮೇಲೆ ತುಂಬಾ ಪರಿಣಾಮ ಬೀರುತ್ತದೆ.. ಬೆಳೆಯುವ ವಾತಾವರಣದ ಮೇಲೆ ಮಕ್ಕಳ ಗುಣಗಳು ನಿರ್ಧಾರವಾಗುತ್ತವೆ.. ಅದಕ್ಕಾಗಿಯೇ ನಮ್ಮದೊಂದಿಷ್ಟು ಸಲಹೆ ನಿಮಗಾಗಿ..

  • ಮಕ್ಕಳ ಮುಂದೆ ಕೆಟ್ಟ ಪದಗಳ ಪ್ರಯೋಗ ಬೇಡ

ಇದು ಬಹಳ ಮುಖ್ಯವಾಗಿ ನೆನಪಿನಲ್ಲಿಡಬೇಕಾದ ಅಂಶ.. ಮಕ್ಕಳ ಮುಂದೆ ಯಾವುದೇ ಕಾರಣಕ್ಕು ಕೆಟ್ಟ ಪದಗಳನ್ನು ಮಾತನಾಡಬೇಡಿ.. ಅಪ್ಪ ಅಮ್ಮ ಮಾತನಾಡುವ ರೀತಿಯನ್ನೇ ಮಕ್ಕಳು ಅನುಕರಿಸುತ್ತಾರೆ ಆದ್ದರಿಂದ ಈ ವಿಷಯದಲ್ಲಿ ಎಚ್ಚರಿಕೆ ವಹಿಸಿ..

  • ಮಕ್ಕಳ ಮುಂದೆ ಜಗಳ ಬೇಡ..

ಇದು ಸಾಮಾನ್ಯವಾಗಿ ಎಲ್ಲಾ ತಂದೆತಾಯಿಯರು ಮಾಡುವ ತಪ್ಪು.. ವಿಷಯ ಎಷ್ಟೇ ಗಂಭೀರವಾಗಿರಲಿ ಮಕ್ಕಳ ಮುಂದೆ ಯಾವುದೇ ಕಾರಣಕ್ಕೂ ಜಗಳ ವಾಡಬೇಡಿ.. ಇದು ಮಕ್ಕಳ ಮನಸ್ಸನ್ನು ವಿಕೃತವನ್ನಾಗಿ ಮಾಡುತ್ತದೆ..

  • ಮಕ್ಕಳ ಮುಂದೆ ಸುಳ್ಳು ಹೇಳುವುದು ಬೇಡ..

ಎಲ್ಲರೂ ಸಾಮಾನ್ಯವಾಗಿ ಅರಿವಿಗೆ ಬರದ ಹಾಗೆ ಸುಳ್ಳು ಗಳನ್ನು ಹೇಳುತ್ತೇವೆ.. ಮಕ್ಕಳ ಮುಂದೆಯೂ ಅದೇ ಕೆಲಸ ಮಾಡುತ್ತೇವೆ.. ಈ ರೀತಿಯಾಗಿ ಮಾಡಬೇಡಿ.. ಏಕೆಂದರೆ ಇದರಿಂದ ಮಕ್ಕಳು ದುಲಭವಾಗಿ ಸುಳ್ಳು ಹೇಳುವುದನ್ನು ರೂಡಿ ಮಾಡಿಕೊಳ್ಳುತ್ತವೆ.. ಜೊತೆಗೆ ಅಪ್ಪ ಅಮ್ಮನ ಬಗ್ಗೆ ಗೌರವ ಕಡಿಮೆಯಾಗುತ್ತದೆ

  • ನಿಮ್ಮ ಕಷ್ಟಗಳನ್ನು ಮುಚ್ಚಿಡಬೇಡಿ..

ಮಕ್ಕಳ ಮುಂದೆ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಮುಚ್ಚಿಡಬೇಡಿ.. ಮಕ್ಕಳಿಗೆ ನೀವು ಕಷ್ಟ ಪಟ್ಟು ದುಡಿಯುತ್ತಿರುವುದನ್ನು ಅರ್ಥೈಸುವ ರೀತಿಯಲ್ಲಿ ಅರ್ಥ ಮಾಡಿಸಿ.. ಇದರಿಂದ ಮಗುವಿನ ಮನಸ್ಸು ಕೆಟ್ಟ ಕೆಲಸಗಳನ್ನು ಮಾಡಲು ಬಿಡುವುದಿಲ್ಲ.. ಪ್ರತಿ ಕೆಲಸ ಮಾಡುವಾಗಲು ತನ್ನ ತಂದೆ ತಾಯಿಯು ತನ್ನನ್ನು ಬೆಳೆಸಲು ಮಾಡುತ್ತಿರುವ ಕೆಲಸದ ಅರಿವಿರುತ್ತದೆ..

  • ದುಡ್ಡು ಕೊಡುವ ಅಭ್ಯಾಸ ಮಾಡಬೇಡಿ..

ಇದೊಂದು ಕೆಟ್ಟ ಚಾಳಿ ನಮ್ಮ ನಮ್ಮಲ್ಲೆ ಇದೆ.. ನಮ್ಮ ಮಕ್ಕಳಿಗಾಗಲಿ ಬೇರೆಯವರ ಮಕ್ಕಳಿಗಾಗಲಿ ದುಡ್ಡನ್ನು ಕೊಡಬೇಡಿ.. ಮಕ್ಕಳಿಗೆ ಅಷ್ಟು ಸುಲಭವಾಗಿ ದುಡ್ಡು ಸಿಗುವ ಹಾಗೆ ಮಾಡಬಾರದು..

  • ಸಾಧಕರ ಬಗ್ಗೆಗ್ಗಿನ ಕಥೆಗಳನ್ನು ಹೇಳಿ..

ಇದನ್ನು ಆದಷ್ಟು ಎಲ್ಲಾ ತಂದೆ ತಾಯಿಯರು ಮಾಡಿ.. ಸಾಧಕರ ಕಥೆಗಳನ್ನು ಹೇಳುವುದು.. ಸಾಧಕರ ಬಗ್ಗೆಗ್ಗಿನ ಪುಸ್ಥಕಗಳನ್ನು ಮಕ್ಕಳಿಗೆ ಉಡುಗೊರೆಯಾಗಿ ನೀಡಿ.. ಆಗ ಅವರಿಗೂ ಸಾಧಕರಂತೆ ಆಗಬೇಕೆಂದೆನಿಸುವುದು..

ಮಾಹಿತಿ ಉಪಯೋಗವೆನಿಸಿದರೆ.. ಶೇರ್ ಮಾಡಿ.. ಮಾಹಿತಿ ಹಂಚುವುದಕ್ಕಿಂತ ಮಹತ್ವ ವಾದದ್ದು ಬೇರೇನಿದೆ??