Home Tags Health

Tag: health

ಇದನ್ನು ಪಾಲಿಸಿದರೆ ನೀವು ಮಧುಮೇಹದಿಂದ ಮುಕ್ತರಾಗುವುದು ಖಚಿತ – ಭಾಗ -2

ಈ ಹಿಂದಿನ ಲೇಖನ ಭಾಗ -1ರಲ್ಲಿ ಮಧುಮೇಹ ಇದ್ದವರು ಮುಂಜಾನೆ ಏನು ತೆಗೆದುಕೊಳ್ಳಬೇಕು? ಹಾಗಲಕಾಯಿಯ ರಸ ಎಷ್ಟು ಒಳ್ಳೆಯದು? ಎಷ್ಟು ದೀರ್ಘಕಾಲ ತೆಗೆದುಕೊಳ್ಳಬೇಕು? ಅತಿಯಾಗಿ ತೆಗೆದುಕೊಂಡರೆ ಏನಾಗುವುದು? ಹಾಗಲಕಾಯಿಯ ರಸ ತುಂಬಾ ಕಹಿ!!...

ಮೂರು ಹೊತ್ತು ಬಾಯಿ ಒಣಗ್ತಾ ಇದ್ದೀಯ?? ಯಾಕೆ ಅಂತ ತಿಳ್ಕೊಳಕ್ಕೆ ಮತ್ತು ಅದರ ಪರಿಹಾರಕ್ಕೆ...

ಒಣ ಬಾಯಿ ಎಂದರೆ? ಒಣ ಬಾಯಿ ಎಂದರೆ ಬಾಯಿಯಲ್ಲಿನ ಜೊಲ್ಲಿನ ಪ್ರಮಾಣ ಕಡಿಮೆಯಾಗುವುದು ಇಲ್ಲವೇ ಜೊಲ್ಲು ಬಾರದೇ ಇರಬಹುದು. ಇದರಿಂದ ಬಾಯಿ ಒಣಗಿ ಯಾವುದೇ ಬಾಯಿ ಸಂಬಂಧಿ ಕೆಲಸ ಮಾಡಲಾಗುವುದಿಲ್ಲ. ಎದುರಾಗುವ ಸಮಸ್ಯೆಗಳು: ಆಹಾರ ಜಗಿಯಲು,...

ಕುಂಬಳಕಾಯಿ ಬೀಜವನ್ನು ಕಸದ ಬುಟ್ಟಿಗೆ ಎಸೆಯುವ ಮುನ್ನ ಇದನ್ನು ಓದಿದರೆ ಮತ್ತೆ ಎಂದೂ ಆ...

ಶಕ್ತಿವರ್ಧಕ ಕುಂಬಳಬೀಜ ಉಪ್ಪು-ಖಾರ ಹಾಕಿ ಹುರಿದ ಕುಂಬಳಕಾಯಿ ಬೀಜಗಳನ್ನು ಎಂದಾದರೂ ತಿಂದಿದ್ದೀರಾ? ಈಗಿನ ಮಕ್ಕಳಿಗೆ ಇದನ್ನು ಸವಿದ ಅನುಭವವೇ ಇರುವುದಿಲ್ಲ. ಅದರಲ್ಲೂ ಮಳೆ-ಚಳಿಗಾಲದಲ್ಲಿ ಹುರಿದ ಕುಂಬಳಕಾಯಿಯ ಬೀಜಗಳನ್ನು ಬಿಸಿಬಿಸಿಯಾಗಿ ತಿನ್ನುವುದು ಬಿಸಿ ಬೋಂಡ, ಬಜ್ಜಿ...

ಇದನ್ನು ಪಾಲಿಸಿದರೆ ನೀವು ಮಧುಮೇಹದಿಂದ ಮುಕ್ತರಾಗುವುದು ಖಚಿತ – ಭಾಗ -1

ಸಾವಿಲ್ಲದ ಮನೆಯ ಸಾಸಿವೆಯ ಹುಡುಕುವಂತೆ ಮಧುಮೇಹಿಗಳಿಲ್ಲದ ಮನೆಯನ್ನು ಹುಡುಕುವುದು ಇಂದಿನ ದಿನಗಳಲ್ಲಿ ಕಷ್ಟವೇ ಸರಿ.ಅದರಲ್ಲೂ ನಮ್ಮ ಬೆಂಗಳೂರಿನಲ್ಲಿ ಇನ್ನಷ್ಟು ಕಷ್ಟ!! ವಿಶ್ವದಲ್ಲಿ ಭಾರತ " ಡಯಾಬಿಟಿಸ್ ನ ರಾಜಧಾನಿ" ಎನಿಸಿಕೊಂಡರೆ, ಭಾರತದಲ್ಲಿ "ಬೆಂಗಳೂರುಡಯಾಬಿಟಿಸ್ ನ ರಾಜಧಾನಿ" ಎನಿಸಿಕೊಂಡಿದೆ ಅಲ್ಲವೇ?? ನಾನು ಗಮನಿಸಿದಂತೆ ಮಧುಮೇಹಿಗಳ ಸಂಖ್ಯೆ ಹೆಚ್ಚಾಗಲು ಕಾರಣ ಏರುತ್ತಿರುವ ಸಕ್ಕರೆಯಅಂಶವನ್ನು ಕಡಿಮೆಗೊಳಿಸಲು ಇರುವ ವಿಧಾನ/ ಸಾಧ್ಯತೆಗಳನ್ನು ಸರಿಯಾಗಿ ತಿಳಿದುಕೊಳ್ಳದಿರುವುದು. ಅಂದರೆ ಮಾಹಿತಿಯ ಕೊರತೆ!! ಮಧುಮೇಹಪತ್ತೆಯಾದ ತಕ್ಷಣವೇ ಸೂಕ್ತ ಆಹಾರ, ವ್ಯಾಯಾಮ ಕ್ರಮಗಳನ್ನು ಆರಂಭಿಸಿಕೊಂಡರೆ ಮಾತ್ರೆ, ಇನ್ಸುಲಿನ್ ಗಳ ಮೇಲೆ ಅವಲಂಬನೆಯಾಗುವುದನ್ನುಸಂಪೂರ್ಣ ಕಡಿಮೆಗೊಳಿಸಿ "ಡಯಾಬಿಟಿಸ್ ಇಲ್ಲ!!" ಎನಿಸಿಕೊಳ್ಳಲೂ ಸಾಧ್ಯವಿದೆ!! (ಹಾಗೆಂದು ಮಾತ್ರೆ, ಇನ್ಸುಲಿನ್ ಗಳ ಅವಶ್ಯಕತೆಯೇ ಬೇಡವೆಂದಲ್ಲ.ಸೂಕ್ತವಾಗಿ ಸಕ್ಕರೆಯ ಅಂಶವನ್ನು ನಿರ್ವಹಣೆ ಮಾಡದಿದ್ದಲ್ಲಿ ಕೊನೆಗೆ ಔಷಧಿ ಅನಿವಾರ್ಯ!!) ಸಾಮಾಜಿಕ ಜಾಲತಾಣಗಳಲ್ಲಿ, ದಿನಪತ್ರಿಕೆಗಳಲ್ಲಿ ಸಕ್ಕರೆಯ ಅಂಶಗಳನ್ನು ಕಡಿಮೆಗೊಳಿಸುವ ಮಾಹಿತಿಗಳನ್ನು ಸಾಕಷ್ಟು ಓದಿರುತ್ತೀರಿ.ಹಾಗೆಂದು ಅವುಗಳು ಎಷ್ಟು ಸುರಕ್ಷಿತ?? ಎಷ್ಟು ದೀರ್ಘವಾಗಿ ಬಳಸಬೇಕು? ಜಾಸ್ತಿಯಾದರೆ ಅಡ್ಡಪರಿಣಾಮಗಳೇನು? ಯಾರೂ ಸೂಕ್ಷ್ಮವಾಗಿಗಮನಿಸುವುದಿಲ್ಲ.. ಜಾಗ್ರತೆ... ಸರಿಯಾದ ಮಾಹಿತಿಯಿಲ್ಲದೇ ಬಳಸಿದರೆ ಅವುಗಳಿಂದಲೇ ಮಧುಮೇಹ ಹೆಚ್ಚಾಗುವ ಸಾಧ್ಯತೆಗಳಿವೆ!! ಸ್ವಯಂ ವೈದ್ಯಎಂದೆಂದಿಗೂ ಅಪಾಯಕಾರಿ!! ನನ್ನ ವೈದ್ಯ ವೃತ್ತಿ ಜೀವನದ ಅನುಭವಗಳ ಜೊತೆ ಸರಿಯಾದ ಆಹಾರ ಪದ್ಧತಿ, ವ್ಯಾಯಾಮಕ್ರಮಗಳನ್ನು ತಿಳಿಸುವಮಾಹಿತಿಯೇ "ಮಧುಮೇಹ ಮರೆತುಬಿಡಿ" ಮಾಲಿಕೆ.. ವಿಷಯ ಸಾಕಷ್ಟು ದೀರ್ಘವಾಗಿರುವುದರಿಂದ ಹಲವು ಕಂತುಗಳಲ್ಲಿ ಪ್ರಕಟಗೊಳ್ಳಲಿದೆ. ಹಾಗೆಂದು ಈಮಾಹಿತಿಗಳನ್ನು ಓದಿ ನಿಮ್ಮಷ್ಟಕ್ಕೆ ನೀವೇ ವೈದ್ಯರಾಗಬೇಡಿ. ಜೊತೆ ಜೊತೆಗೆ ವೈದ್ಯರ ತಪಾಸಣೆ, ಮಾಹಿತಿಗಳನ್ನೂ ಪಾಲಿಸುತ್ತಿರಬೇಕು. ಮುಂದಿನಸಲಹೆಗಳಂತೆ ಕ್ರಮಬದ್ಧವಾಗಿ ಆಹಾರ ಕ್ರಮಗಳನ್ನು  ಪಾಲಿಸಿದಾಗ,  ಅತಿಯಾಗಿ ಮಾತ್ರೆ, ಇನ್ಸುಲಿನ್ ಬಳಸುವುದನ್ನು ಕಡಿಮೆಮಾಡಬಹುದು. ಮುಂದೆಮಾತ್ರೆ, ಇನ್ಸುಲಿನ್ ಗಳ ಅತಿ ಬಳಕೆಯಿಂದ ಆಗುವ ಅಡ್ಡಪರಿಣಾಮಗಳನ್ನೂ ನಿಯಂತ್ರಿಸಬಹುದು. ಮುಂಜಾನೆಯ ರಸಾಹಾರ:  * ಖಾಲಿ ಹೊಟ್ಟೆಯಲ್ಲಿ 1 ಲೋಟ ನವಿಲುಕೋಸಿನ ಜ್ಯೂಸ್ ಡಯಾಬಿಟಿಸ್ ಪತ್ತೆಯಾದ ತಕ್ಷಣವೇ ಅಥವಾ ಡಯಾಬಿಟಿಸ್ ಬಂದಿದ್ದು ಮಾತ್ರೆಗಳನ್ನು ಮಾತ್ರ ತೆಗೆದುಕೊಳ್ಳುತ್ತಿರುವವರಿಗೆ ಸೂಕ್ತ. (ಮಧುಮೇಹ ಪತ್ತೆಯಾದ ತಕ್ಷಣ/ ಒಂದು ವರ್ಷದ ನಂತರವೂ ನವಿಲುಕೋಸು ಜ್ಯೂಸ್ ಆರಂಭಿಸಿ ನಂತರ ಮಾತ್ರೆಗಳನ್ನು ಸಂಪೂರ್ಣ ನಿಲ್ಲಿಸಿರುವವರನ್ನುಸಾಕಷ್ಟು ಗಮನಿಸಿದ್ದೇನೆ) ಜ್ಯೂಸ್ ಒಳ್ಳೆಯದಾದರೂ ಸ್ವಲ್ಪ ಕಾಲದವರೆಗೆ ಪ್ರತಿನಿತ್ಯ ಸೇವಿಸಿ ನಂತರ ನಿಧಾನವಾಗಿ 3-4 ದಿನಕ್ಕೊಮ್ಮೆ ನಂತರ ವಾರಕ್ಕೊಮ್ಮೆ ಸೇವಿಸುವುದು.ಇಲ್ಲವಾದಲ್ಲಿ ಚಹಾ/ ಕಾಫಿಯಂತೆ ಚಟವಾಗುವ ಸಾಧ್ಯತೆಯಿದೆ!! * ಹಾಗಲಕಾಯಿಯ ರಸ ಸಕ್ಕರೆಯ ಅಂಶ ತುಂಬಾ ಜಾಸ್ತಿ/ ಇನ್ಸುಲಿನ್ ತೆಗೆದುಕೊಳ್ಳುತ್ತಿರುವರಿಗಷ್ಟೇ ಒಳ್ಳೆಯದು. ಏಕೆಂದರೆ ದೀರ್ಘಕಾಲದ ಸೇವನೆಪ್ಯಾಂಕ್ರಿಯಾಸ್/ ಮೇದೋಜೀರಕಾಂಗದ ಮೂಲ ಕಾರ್ಯ ಕಡಿಮೆಗೊಳಿಸಿ, ಶರೀರದ ಇನ್ಸುಲಿನ್  ಉತ್ಪತ್ತಿಯ ಕೊರತೆಗೆ ಕಾರಣವಾಗಬಹುದು!! *ಕಹಿಬೇವು ರಕ್ತದಂಶ ಕಡಿಮೆಗೊಳಿಸಲು ಸಹಾಯಕಾರಿಯಾದರೂ ವಯಸ್ಸು 60-70 ದಾಟುವವರೆಗೂ ಒಳ್ಳೆಯದಲ್ಲ. ಏಕೆಂದರೆ ಇದರಿಂದಲೂಮಧುಮೇಹ ನಿಯಂತ್ರಣಕ್ಕೆ ಬರದಿದ್ದರೆ ಕೊನೆಗೆ ಇನ್ಸುಲಿನ್ ಒಂದೇ ಗತಿ!! (ಏಕೆಂದರೆ ಕಹಿಬೇವು ಸ್ಟೀರಾಯಿಡಲ್ ಎಫೆಕ್ಟ್!!) *ಮೆಂತ್ಯೆ ನೆನೆಸಿದ ನೀರು, ಮೆಂತ್ಯೆ ಹುಡಿ, ನೇರಳೆ ಬೀಜ, ಬೆಂಡೆಕಾಯಿಯ ನೀರು  ಬರಿಯ ಮಾತ್ರೆಗಳಂತೆ ಸಕ್ಕರೆಯ ಅಂಶವನ್ನು ಮಾತ್ರಕಡಿಮೆಗೊಳಿಸುವುದರಿಂದ ಖಾಲಿ ಹೊಟ್ಟೆಯಲ್ಲಿ ಸೇವನೆ ಸೂಕ್ತವಲ್ಲ. ಊಟ/ ತಿಂಡಿ ಆದ ಮೇಲೆ ಸೇವಿಸುವುದು ಉತ್ತಮ. * ಚಕ್ಕೆ ಹುಡಿ (ದಿನಕ್ಕೆ ಸುಮಾರು 6 ಗ್ರಾಂ) "ಇನ್ಸುಲಿನ್ ಸೆನ್ಸಿಟಿವಿಟಿ" ಹೆಚ್ಚಿಸುವುದರಿಂದ ಊಟ, ತಿಂಡಿ ಆದ ನಂತರವೇ ಸೇವಿಸಿ. ಡಾ. ಪುನೀತ್ ರಾಘವೇಂದ್ರ  ಕುಂಟುಕಾಡು BNYS, MD Yoga Clinical

ನಿದ್ದೆ ಬರ್ತಿಲ್ಲ ಅಂತ ಮಾತ್ರೆ ಮತ್ತು ಮಧ್ಯಪಾನದ ಮೊರೆ ಹೋಗ್ತಿರೋವ್ರಿಗೆ ಇಲ್ಲಿದೆ ಸಿಹಿ ಸುದ್ದಿ..ಇನ್ಮುಂದೆ...

ನಿದ್ದೆ ಬರ್ತಿಲ್ಲ ಅಂತ ಮಾತ್ರೆ ಮತ್ತು ಮಧ್ಯಪಾನದ ಮೊರೆ ಹೋಗ್ತಿರೋವ್ರಿಗೆ ಇಲ್ಲಿದೆ ಸಿಹಿ ಸುದ್ದಿ..ಇನ್ಮುಂದೆ ನಿಮ್ಮ ಸಮಸ್ಯೆಗಳಿಗೆ ಕಬ್ಬಿನ ಹಾಲು ರಾಮಬಾಣ ಆಗೋದ್ರಲ್ಲಿ ಸಂಶಯನೇ ಇಲ್ಲ...ಹೇಗೆ ಅಂತೀರಾ ಮುಂದೆ ಓದಿ.. ನಿದ್ದೆ ಬರ್ತಿಲ್ಲ, ಒತ್ತಡ...

ಅಲ್ಲಾಡದೆ ಒಂದೇಕಡೆ ತುಂಬಾ ಹೊತ್ತು ಕೂತಿದ್ರೆ ಬೇಗ ಸತ್ತುಹೋಗ್ತೀರಾ ಹುಷಾರ್…ಹೇಗೆ ಅಂತೀರಾ ಈ ಆರ್ಟಿಕಲ್...

ನಿಮ್ಮದು ಒಂದೇ ಕಡೆ ಜಾಸ್ತಿ ಹೊತ್ತು ಕೂತು ಮಾಡೋ ಕೆಲ್ಸನಾ? ಒಂದೇ ಸ್ಥಳದಲ್ಲಿ ಒಮ್ಮೆಲೇ ಒಂದು ಗಂಟೆಗಿಂತ ಹೆಚ್ಚಾಗಿ ಕುತ್ಕೊತಿದೀರಾ? ದಿನದಲ್ಲಿ ೭ ಗಂಟೆಗೂ ಅಧಿಕ ಕುಳಿತು ಕೆಲಸ ಮಾಡ್ತಾ ಇದಿರಾ?? ಹಾಗಿದ್ರೆ...

ನೀವು ನಿದ್ದೆಯಲ್ಲಿ ಕನಸು ಕಾಣೋದು ಕಡಿಮೆಯಾಗಿದೀಯಾ?? ಹಾಗಿದ್ರೆ ನೀವು ರೋಗಕ್ಕೆ ಹತ್ರವಾಗ್ತಿದೀರಾ ಜಾಗ್ರತೆ…

ರಾತ್ರಿ ಮಲಗಿದಾಗ ಕನಸುಗಳು ಬೀಳೋದು ಕಡಿಮೆಯಾಗಿದ್ರೆ ನೀವು ಹಲವು ರೋಗಗಳ ದಾಸರಾಗೋದು ಖಂಡಿತ ಅನ್ನೋದು ಅಧ್ಯಯನಗಳಿಂದ ತಿಳಿದುಬಂದಿದೆ. ಕನಸಿನ ನಷ್ಟವು ನಿದ್ರಾಹೀನತೆಯ ಒಂದು ಅಂಶವಾಗಿದ್ದು, ಇದು ನಿಮ್ಮನ್ನು ಹಲವು ಮಾನಸಿಕ ಸಮಸ್ಯೆಗಳಿಗೆ ಎದೆ...

ಇತ್ತೀಚಿಗೆ ಡೆಂಗ್ಯು ಜ್ವರ ಹಲವಾರು ಜನರನ್ನ ಬಲಿತೊಗೊಂಡಿದೆ, ಈ ವಿಷಯಗಳನ್ನು ಪಾಲಿಸಿದರೆ ಡೆಂಗ್ಯು ಜ್ವರದಿಂದ...

ರಾಜ್ಯದಲ್ಲಿ ಡೆಂಗ್ಯೂ ಹಾಗೂ ಫೀವರ್ ಗಳಿಂದ ಹೆಚ್ಚು ಜನ ಬಳಲುತ್ತಿದ್ದಾರೆ. ಇಂತಹ ರೋಗಿಗಳಿಗೆ ರಕ್ತದ ಅವಶ್ಯಕತೆ ತುಂಬಾನೇ ಇರುತ್ತದೆ. ತಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಫೋನ್ ಮಾಡಿ ಎಲ್ಲಿಯೂ ರಕ್ತ ಸಿಗದೆ ಇದ್ದಾಗ...

ನಾಲಿಗೆಯ ಹಿಡಿತ ಸಾಧನೆ ಸಾವನ್ನೇ ಗೆದ್ದಂತೆ, ನಾಲಿಗೆಯ ರುಚಿಗೆ ಬಿದ್ದರೆ ಸಾವೇ ಸಮೀಪವಾದಂತೆ: ಸರ್ವಜ್ಞರ...

ಇದೇನಿದು?? ನಾಲಿಗೆಯನ್ನು ಕಟ್ಟುವುದೆಂದರೆ ಏನರ್ಥ?? ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೀರಾ?? ನಾಲಿಗೆಯನ್ನು ಕಟ್ಟುವುದೆಂದರೆ ಬಾಯಿಗೆ ರುಚಿಯೆಂದು ಅನಿಸಿದರೂ ಎಲ್ಲವನ್ನೂ ತಿನ್ನದಿರುವುದು!! ಹಾಗೆಯೇ ರುಚಿಯಿಲ್ಲದಿದ್ದರೂ ಆರೋಗ್ಯಕ್ಕೆ ಒಳ್ಳೆಯದೆಂದು ಮನಸ್ಸಿಟ್ಟು ತಿನ್ನುವುದು!! ಒಟ್ಟಾರೆಯಾಗಿ ನಮ್ಮ ನಾಲಿಗೆಯನ್ನು...

ಹೆಣ್ಣು ಮಕ್ಕಳೇ, ಮುಟ್ಟಿನ ಸಮಯದಲ್ಲಿ ಹಿಂಸಿಸುವ ಹೊಟ್ಟೆನೋವಿಗೆ ಇಲ್ಲಿದೆ ಶಾಶ್ವತ ಪರಿಹಾರ…

ಮಲಬದ್ಧತೆ, ಅಧಿಕ ಒತ್ತಡ, ಅಪೌಷ್ಟಿಕತೆ, ಹಾರ್ಮೋನ್ ಗಳ ಅಸಮತೋಲನ ಉಷ್ಣ ಪ್ರಕೃತಿಯ ದೇಹ, ಗರ್ಭಾಶಯದ ಸ್ಥಾನ ಚ್ಯುತಿ, ಕೆಲ ಹೊಟ್ಟೆಯಲ್ಲಿ ಉರಿಯೂತ, ಅಂಡಾಣು ಉತ್ಪತ್ತಿ ಯಾಗದೆ ಇರುವುದು ಮೊದಲಾದ ಕಾರಣಗಳಿಂದ ಋತುಶೂಲೆ ಉಂಟಾಗುತ್ತದೆ. ಋತುಶೂಲೆಯು...

HOT NEWS

error: ಗಮನಿಸಿಕಾಪಿ ಮಾಡೋ ಬದಲು ಶೇರ್ ಮಾಡಿ!!